ಮುಂಬೈ: ಚಂಡೀಗಢದಲ್ಲಿ ನಡೆದಿರುವ ಘಟನೆ ಹಸಿಯಾಗಿರುವಾಗಲೇ ಮುಂಬೈನ ಹಾಸ್ಟೆಲ್ ಒಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈ ಐಐಟಿ ಹಾಸ್ಟೆಲ್‌ನ ಸ್ನಾನಗೃಹದಿಂದ ವಿದ್ಯಾರ್ಥಿನಿಯರ ವಿಡಿಯೋಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಕ್ಯಾಂಟೀನ್ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಸಿ ಪ್ರಕರಣ ದಾಖಲಾಗಿದೆ.
ತನ್ನನ್ನು ಯಾರೋ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬಳು ಅಲಾರಾಂ ಒತ್ತಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ಪೈಪ್ ಡಕ್ಟ್ ಹತ್ತಿ, ಸ್ನಾನಗೃಹವೊಂದರ ಕಿಟಕಿಯ ಸೀಳಿನ ಮೂಲಕ ವಿದ್ಯಾರ್ಥಿನಿಯ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಯತ್ನಿಸಿದ್ದಾನೆ.
ಆರೋಪಿಯಿಂದ ವಶಪಡಿಸಿಕೊಂಡಿರುವ ಮೊಬೈಲ್ನಲ್ಲಿ ಯಾವುದೇ ದೃಶ್ಯಗಳು ದೊರಕಿಲ್ಲ. ದೃಶ್ಯವನ್ನು ಶೇರ್ ಮಾಡಲಾಗಿದೆಯೇ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ತನಿಖೆ ನಡೆಸುತ್ತಿದ್ದೇವೆ ಎಂದು ಪೊವೈ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬುಧನ್ ಸಾವಂತ್ ಹೇಳಿದ್ದಾರೆ.
ಇದನ್ನೂ ಓದಿ: ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ವಿರುದ್ಧ ಬೃಹತ್ ಪ್ರತಿಭಟನೆ