ಮುಂಬೈ: ಐಐಟಿ-ಬಾಂಬೆಯ ಹಾಸ್ಟೆಲಿನ ಕ್ಯಾಂಟೀನ್ ಗೋಡೆಗಳಲ್ಲಿ 'ಸಸ್ಯಾಹಾರಿಗಳು ಮಾತ್ರ' ಎಂಬ ಪೋಸ್ಟರ್ ಹಾಕಲಾಗಿದ್ದು, ಇದು 'ಆಹಾರ ತಾರತಮ್ಯ' ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಬಾಂಬೆ ಸಂಸ್ಥೆಯ ಹಾಸ್ಟೆಲ್ 12ರ ಕ್ಯಾಂಟೀನ್ ಗೋಡೆಗಳ ಮೇಲೆ 'ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ' ಎಂಬ ಪೋಸ್ಟರ್‌ಗಳನ್ನು ಕಳೆದ ವಾರ ಹಾಕಲಾಗಿತ್ತು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕ್ಯಾಂಟೀನ್ ಗೋಡೆಗಳ ಮೇಲೆ ಹಾಕಲಾಗಿರುವ ಪೋಸ್ಟರ್ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಐಐಟಿ ಬಾಂಬೆಯ ಅಧಿಕಾರಿಯೊಬ್ಬರು, "ಈ ರೀತಿಯ ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂದು ಗೊತ್ತಿಲ್ಲ. ವಿವಿಧ ರೀತಿಯ ಆಹಾರವನ್ನು ಸೇವಿಸುವವರಿಗೆ ಇಲ್ಲಿ ನಿಗದಿತ ಸ್ಥಳವಿಲ್ಲ" ಎಂದು ಹೇಳಿದ್ದಾರೆ.
-
Even though RTIs and mails for hostel GSec shows that there is no institute policy for food segregation, some individuals have taken it upon themselves to designate certain mess areas as "Vegetarians Only" and forcing other students to leave that area.#casteism #Discrimination pic.twitter.com/uFlB4FnHqi
— APPSC IIT Bombay (@AppscIITb) July 29, 2023 " class="align-text-top noRightClick twitterSection" data="
">Even though RTIs and mails for hostel GSec shows that there is no institute policy for food segregation, some individuals have taken it upon themselves to designate certain mess areas as "Vegetarians Only" and forcing other students to leave that area.#casteism #Discrimination pic.twitter.com/uFlB4FnHqi
— APPSC IIT Bombay (@AppscIITb) July 29, 2023Even though RTIs and mails for hostel GSec shows that there is no institute policy for food segregation, some individuals have taken it upon themselves to designate certain mess areas as "Vegetarians Only" and forcing other students to leave that area.#casteism #Discrimination pic.twitter.com/uFlB4FnHqi
— APPSC IIT Bombay (@AppscIITb) July 29, 2023
ಇದನ್ನೂ ಓದಿ: ಕ್ಯೂಎಸ್ ವರ್ಲ್ಡ್ ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದ ಐಐಟಿ ಬಾಂಬೆ
ವಿದ್ಯಾರ್ಥಿ ಸಮೂಹವಾದ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಪ್ರತಿನಿಧಿಗಳು ಘಟನೆ ಖಂಡಿಸಿ, ಸಸ್ಯಾಹಾರಿಗಳು ಮಾತ್ರ ಎಂಬ ಪೋಸ್ಟರ್‌ಗಳನ್ನು ಹರಿದು ಹಾಕಿದರು. "ಸಂಸ್ಥೆಯಲ್ಲಿ ಆಹಾರ ಪ್ರತ್ಯೇಕತೆಗೆ ಯಾವುದೇ ನೀತಿ ಇಲ್ಲ. ಕೆಲವು ವ್ಯಕ್ತಿಗಳು ಕ್ಯಾಂಟೀನ್‌ನಲ್ಲಿ ನಿರ್ದಿಷ್ಟ ಪ್ರದೇಶವನ್ನು ಸಸ್ಯಾಹಾರಿಗಳಿಗೆ ಮಾತ್ರ ಎಂದು ತಾವೇ ನಿರ್ಧರಿಸಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಇತರ ವಿದ್ಯಾರ್ಥಿಗಳು ಆಹಾರ ಸೇವಿಸದಂತೆ ನಿರ್ಬಂಧಿಸಿದ್ದಾರೆ" ಎಂದು ದೂರಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಐಐಟಿ ಬಾಂಬೆ ಹಾಸ್ಟೆಲ್‌ನ ಕಾರ್ಯದರ್ಶಿ ವಿದ್ಯಾರ್ಥಿಗಳಿಗೆ ಇ-ಮೇಲ್ ಕಳುಹಿಸಿ, "ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿದೆ ಎಂಬ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು ಆ ಸ್ಥಳದಿಂದ ನಿಷೇಧಿಸುವ ಹಕ್ಕನ್ನು ಯಾರೂ ಹೊಂದಿಲ್ಲ. ಘಟನೆಗಳು ಮರುಕಳಿಸಿದರೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದೆ.
149ನೇ ರ್‍ಯಾಂಕ್ ಪಡೆದ ಬಾಂಬೆ ಐಐಟಿ: ಗುಣಮಟ್ಟದ ಶಿಕ್ಷಣದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ ಭಾರತದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ವಿಶ್ವವಿದ್ಯಾನಿಲಯದ ಶ್ರೇಯಾಂಕದಲ್ಲಿ ಮುನ್ನಡೆಗಾಗಿ 149ನೇ ಸ್ಥಾನ ಪಡೆದಿದೆ. ಈ ಮೊದಲು ಅಂದರೆ, ಕಳೆದ ವರ್ಷ 172ನೇ ಸ್ಥಾನದಲ್ಲಿತ್ತು. ಕೇವಲ ಒಂದು ವರ್ಷದಲ್ಲಿ ಈ ಸಾಧನೆ ಮಾಡಿದೆ.
ಸಂಸ್ಥೆಯ ಖ್ಯಾತಿಗೆ ಶೇ 81.9 ಅಂಕ, ಶಿಕ್ಷಕರ ವಿಭಾಗಕ್ಕಾಗಿ ಶೇ 73.1, ಶೈಕ್ಷಣಿಕ ಸಾಧನೆಗೆ ಶೇ 55.5, ಉದ್ಯೋಗ ಪಡೆಯುವಲ್ಲಿ ಶೇ 47.4, ಸುಸ್ಥಿರತೆಯಲ್ಲಿ ಶೇ 54.9, ಅಧ್ಯಾಪಕರ ವಿದ್ಯಾರ್ಥಿ ಅನುಪಾತದಲ್ಲಿ 18.9 ಶೇಕಡಾ ಅಂಕಗಳು ಸಂಸ್ಥೆಗೆ ದೊರೆತಿವೆ. ಇಂಟರ್ನ್ಯಾಷನಲ್ ಫ್ಯಾಕಲ್ಟಿಯಲ್ಲಿ 4.7 ಮತ್ತು ಇಂಟರ್ನ್ಯಾಷನಲ್ ರಿಸರ್ಚ್ ನೆಟ್‌ವರ್ಕ್‌ನಲ್ಲಿ 8.5 ಅಂಕಗಳನ್ನು ಗಳಿಸಿದೆ.
ಈ ಸುದ್ದಿಗಳನ್ನೂ ಓದಿ: ಬಾತ್ ರೂಂ ವಿಡಿಯೋ ರೆಕಾರ್ಡ್ ಮಾಡಲು ಯತ್ನ: ಐಐಟಿ ಬಾಂಬೆ ಹಾಸ್ಟೆಲ್ ಕ್ಯಾಂಟೀನ್ ಬಾಯ್ ಬಂಧನ
ಐಐಟಿ ಬಾಂಬೆ ಭಾರತದ ಅತ್ಯತ್ತಮ ಶಿಕ್ಷಣ ಸಂಸ್ಥೆ..ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ