ಕೊಟ್ಟಾಯಂ (ಕೇರಳ): ನಾವು ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಾಲಯದ ಕುರಿತು ಹೊಸ ಕಾನೂನು ಜಾರಿಗೊಳಿಸುತ್ತೇವೆ ಎಂದು ಕೇರಳದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪಕ್ಷ ಹೇಳಿದೆ.
ಈಗಾಗಲೇ ಶಬರಿಮಲೆ ಮೇಲಿನ ನೂತನ ಕಾನೂನುಗಳ ಕರಡು ಪ್ರತಿ ಸಿದ್ಧವಾಗಿದ್ದು, ಅದನ್ನು ಶಾಸಕ ತಿರುವಂಚೂರ್ ರಾಧಾಕೃಷ್ಣನ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ರಾಧಾಕೃಷ್ಣನ್, ಹೊಸ ಕಾನೂನಿನ ಪ್ರಕಾರ ಶಬರಿಮಲೆ ನಿಯಮ ಉಲ್ಲಂಘಿಸುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ದೇವಾಲಯದ ಸಾರ್ವಭೌಮತ್ವವು ಅರ್ಚಕರ ಕೈಯಲ್ಲಿದ್ದು, ಈ ಕರಡು ಪ್ರತಿಯನ್ನು ಕಾನೂನು ಸಚಿವ ಎ.ಕೆ.ಬಾಲನ್ ಅವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಪ್ರತಿಭಟನಾನಿರತ ರೈತರಿಂದ ಬಾಬಿ ಡಿಯೋಲ್ರ 'ಲವ್ ಹಾಸ್ಟೆಲ್' ಚಿತ್ರೀಕರಣ ಸ್ಥಗಿತ
ಶಬರಿಮಲೆ ದೇವಾಲಯ ಪ್ರವೇಶ ಕುರಿತ ರಾಜ್ಯ ಸರ್ಕಾರದ ತೀರ್ಪು ಪ್ರಬುದ್ಧವಲ್ಲದ ನಡೆಯಾಗಿದೆ. ನಾವು ಅಧಿಕಾರಕ್ಕೆ ಬಂದರೆ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದರು. ಈ ಹಿಂದೆ ಕಾನೂನು ಸಚಿವ ಎ.ಕೆ.ಬಾಲನ್, ಶಬರಿಮಲೆ ಬಗ್ಗೆ ಕರಡು ಪ್ರಕಟಿಸುವಂತೆ ಯುಡಿಎಫ್ಗೆ ಸವಾಲೆಸಿದ್ದರು. ಅಲ್ಲದೇ ಈ ಕಾನೂನು ಜಾರಿಯಾಗಲು ಪ್ರಮಾಣವಚನ ದಿನದ ವರೆಗೂ ಯುಡಿಎಫ್ ಕಾಯಬಾರದು ಎಂದಿದ್ದರು.