ETV Bharat / bharat

ಮೋರಿ ಕೆಳಗೆ ಹುದುಗಿಸಿಟ್ಟ ಐಇಡಿ ಬಾಂಬ್ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ - ಟ್ರಾಫಿಕ್ ಜಾಮ್

ಭದ್ರತಾ ಪಡೆ ಗುರಿಯಾಗಿಸಿಟ್ಟುಕೊಂಡು ಅಡಗಿಸಿಡಲಾಗಿದ್ದ ಸುಧಾರಿತ ಸ್ಫೋಟಕ ಸಾಧನವನ್ನು ಭದ್ರತಾ ಪಡೆ ನಿಷ್ಕ್ರಿಯಗೊಳಿಸಿದೆ. ಸ್ಥಳದಲ್ಲಿ ಉಗ್ರರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ied-defused-in-j-ks-rajouri-search-operations-on-to-nab-militants
ಮೋರಿ ಕೆಳಗೆ ಹುದುಗಿಸಿಟ್ಟ ಐಇಡಿ ಬಾಂಬ್ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ
author img

By

Published : Jul 31, 2021, 1:03 PM IST

Updated : Jul 31, 2021, 1:09 PM IST

ರಜೌರಿ (ಜಮ್ಮು-ಕಾಶ್ಮೀರ): ಇಲ್ಲಿನ ಗಡಿ ಜಿಲ್ಲೆ ರಜೌರಿಯಲ್ಲಿ ಬೃಹತ್ ಐಇಡಿ ಬಾಂಬ್​ ಅನ್ನು ಭದ್ರತಾ ಪಡೆ ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದು, ಬಹುದೊಡ್ಡ ಅನಾಹುತ ತಪ್ಪಿಸಿದೆ. ಜಮ್ಮು-ಕಾಶ್ಮೀರ ಗಡಿಯ ರಜೌರಿ ಪ್ರದೇಶದ ಮೋರಿಯೊಂದರೆ ಕೆಳಗೆ ಬೆಳಗ್ಗೆ ಸುಮಾರು 9.30ರ ಸುಮಾರಿಗೆ ಅಡಗಿಸಿಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆ ಈ ಬಾಂಬ್ ಪತ್ತೆ ಮಾಡಿದ್ದು, ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಸ್ಥಳದಲ್ಲಿ ಉಗ್ರರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಬಾಂಬ್ ಪತ್ತೆಯಾದ ಬಳಿಕ ರಸ್ತೆಯನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು. ಈ ಹಿನ್ನೆಲೆ 3 ಗಂಟೆಗೆ ಅಧಿಕ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾತ್ರಿಯೇ ಉಗ್ರರು ಬಾಂಬ್ ಹುದುಗಿಸಿಟ್ಟ ಅನುಮಾನ ವ್ಯಕ್ತವಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಓದಿ: ಭಾರತದೊಳಗೆ ನುಸುಳಲು ಯತ್ನ: ಇಬ್ಬರು ಪಾಕ್‌ ಕ್ರಿಮಿಗಳನ್ನು ಹೊಡೆದುರುಳಿಸಿದ ಸೇನೆ

Last Updated : Jul 31, 2021, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.