ಹೈದರಾಬಾದ್: ಐಸಿಐಸಿಯ ಬ್ಯಾಂಕ್ನ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯಲ್ಲಿ ಕೆಲವು ಗ್ರಾಹಕರಿಗೆ ಅಡಚಣೆಯಾಗಿದ್ದು, ಈ ಬಗ್ಗೆ ಬ್ಯಾಂಕ್ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಆನ್ಲೈನ್ ಬ್ಯಾಂಕಿಂಗ್ ಸೇವೆಗೆ ವೆಬ್ಸೈಟ್ ತೆರೆದರೆ ಮುಖಪುಟದಲ್ಲಿ ಈ ಬಗ್ಗೆ ಸೂಚನೆ ನೀಡಿದೆ.
ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯಲ್ಲಿ ಮಧ್ಯಂತರ ಅಡಚಣೆ ಇರಬಹುದು, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂದು ಬ್ಯಾಂಕ್ ವೆಬ್ಸೈಟ್ನ ಮುಖಪುಟದಲ್ಲಿ ತೋರಿಸುತ್ತದೆ. ಈ ಸಮಸ್ಯೆ ಕೆಲವೇ ಗ್ರಾಹಕರಲ್ಲಿ ಕಂಡುಬಂದಿದೆ.
ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರಕಲ್ಲಿ ಈ ರೀತಿಯ ಸಮಸ್ಯೆಗಳು ಕಂಡು ಬಂದಿಲ್ಲ ಎಂದು ಕೆಲವು ಗ್ರಾಹಕರು ಸ್ಪಷ್ಟನೆ ನೀಡಿದ್ದು, ಈ ಹಿಂದೆಯೂ ಜನವರಿ 4, 2021 ಮತ್ತು ಅಕ್ಟೋಬರ್ 16, 2020ರಲ್ಲಿ ಇಂಥಹದ್ದೇ ಸಮಸ್ಯೆ ಕಾಣಿಸಿಕೊಂಡಿತ್ತು.
ಈ ವೇಳೆ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂಬ ಸೂಚನೆಯೊಂದಿಗೆ, ಗ್ರಾಹಕರು ಐಮೊಬೈಲ್ (iMobile) ಅಥವಾ 8640086400 ಮೊಬೈಲ್ ಸಂಖ್ಯೆ ಬಳಸುವ ಮೂಲಕ ವಾಟ್ಸಪ್ ಬ್ಯಾಂಕಿಂಗ್ ಕೂಡಾ ಮಾಡಬಹುದು ಎಂದು ಸಲಹೆ ನೀಡಿತ್ತು. ಆದರೆ ಈ ಬಾರಿ ಮೊಬೈಲ್ ಬ್ಯಾಂಕಿಂಗ್, ವಾಟ್ಸಪ್ ಬ್ಯಾಂಕಿಂಗ್ ಬಳಸುವ ಬಗ್ಗೆ ಸಲಹೆ ನೀಡಿಲ್ಲ.
ಇದನ್ನೂ ಓದಿ: ಮುತ್ತಿನ ನಗರಿಯಲ್ಲಿ ಭೋರ್ಗರೆದ ವರುಣ: ನದಿಯಂತಾದ ರಸ್ತೆಗಳು, ಕಾಲೋನಿಗಳು ಜಲಾವೃತ