ETV Bharat / bharat

2ನೇ ಮದುವೆಗೆ ಮುಂದಾದ ಐಎಎಸ್‌ ಟಾಪರ್ ಟೀನಾ ದಾಬಿ; ವರ ಯಾರು ಗೊತ್ತಾ..? - ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಮಾಹಿತಿ ಹಂಚಿಕೊಂಡ ಟೀನಾ ದಾಬಿ

2015ರಲ್ಲಿ ಐಎಎಸ್‌ನಲ್ಲಿ ಟಾಪರ್‌ ಆಗಿದ್ದ ಟೀನಾ ದಾಬಿ ಅಥರ್‌ ಖಾನ್‌ಗೆ ವಿಚ್ಛೇದನ ನೀಡಿದ ಮರು ವರ್ಷವೇ ಎರಡನೇ ಮದುವೆಗೆ ಮುಂದಾಗಿದ್ದಾರೆ. 2013ರ ಐಎಎಸ್‌ ಬ್ಯಾಚ್‌ನ ಅಧಿಕಾರಿ ಪ್ರದೀಪ್‌ ಗವಾಂಡೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಇಬ್ಬರ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

IAS officer Tina Dabi announces engagement with fellow officer
ಎರಡನೇ ಮದುವೆಗೆ ಮುಂದಾದ ಐಎಎಸ್‌ ಟಾಪರ್ ಟೀನಾ ದಾಬಿ; ವರ ಯಾರು ಗೊತ್ತಾ..?
author img

By

Published : Mar 29, 2022, 2:11 PM IST

ನವದೆಹಲಿ: 2018ರಲ್ಲಿ ಸಹೋದ್ಯೋಗಿ ಅಥರ್‌ ಖಾನ್‌ ಅವರನ್ನು ವಿವಾಹ ವಾಗಿ ಕಳೆದ ವರ್ಷವಷ್ಟೇ ವಿಚ್ಛೇದನ ನೀಡಿದ್ದ 2015ರ ಐಎಎಸ್‌ ಟಾಪರ್‌ ಟೀನಾ ದಾಬಿ ಇದೀಗ ಮತ್ತೊಬ್ಬ ಐಎಎಸ್‌ ಅಧಿಕಾರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

2013ರ ಐಎಎಸ್‌ ಬ್ಯಾಚ್‌ನ ಅಧಿಕಾರಿ ಪ್ರದೀಪ್‌ ಗವಾಂಡೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಟೀನಾ ಸಾಮಾಜಿಕ ಜಾಲತಾಣ ಇನ್‌ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀವು ನನಗೆ ನೀಡಿದ ಸ್ಮೈಲ್ ಅನ್ನು ನಾನು ಧರಿಸಿದ್ದೇನೆ #ನಿಶ್ಚಿತ ವರ ಎಂದು ಬರೆದುಕೊಂಡಿದ್ದಾರೆ. ಇನ್‌ಸ್ಟಾದಲ್ಲಿ ಇವರು 1.4 ದಶಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು, ಭಾರಿ ಜನಪ್ರಿಯತೆ ಪಡೆದಿದ್ದಾರೆ.

ತಮ್ಮವನ್ನು ಮದುವೆಯಾಗಲಿರುವ ಪ್ರದೀಪ್‌ ಗವಾಂಡೆ ಅವರಿಗೂ ಈ ಪೋಸ್ಟ್‌ ಅನ್ನು ಟ್ಯಾಗ್‌ ಮಾಡಿದ್ದಾರೆ. ಗವಾಂಡೆ ಅವರು ಇನ್‌ಸ್ಟಾದಲ್ಲಿ ಈ ಎರಡೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಒಂದರಲ್ಲಿ ಇಬ್ಬರೂ ಕೈ ಹಿಡಿದಿರುವುದನ್ನು ಕಾಣಬಹುದು.

ಟೀನಾ ದಾಬಿ 2015 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಿವಿಲ್ ಸೇವೆಗಳ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಅದೇ ವರ್ಷ ಅಥರ್ ಖಾನ್ ಎರಡನೇ ಸ್ಥಾನ ಪಡೆದರು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.

ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನ ಪದವೀಧರರಾದ ದಾಬಿ ಅವರು ಪ್ರತಿಷ್ಠಿತ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ದಲಿತ ಅಧಿಕಾರಿ. ಅದೂ ಕೂಡ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದರು. ದೆಹಲಿಯಲ್ಲಿ ನಡೆದಿದ್ದ ಇವರ ವಿವಾಹದ ಆರತಕ್ಷತೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರು ಮತ್ತು ಅಂದಿನ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡಾ ಭಾಗವಹಿಸಿದ್ದರು.

ದೇಶವು ಕೋಮು ವೈಷಮ್ಯ ಮತ್ತು ಲವ್ ಜಿಹಾದ್ ಎಂದು ಕರೆಯಲ್ಪಡುವ ಚರ್ಚೆಗೆ ಗ್ರಾಸವಾಗಿದ್ದ ಸಮಯದಲ್ಲಿ ಇವರ ಅಂತರ್ಧರ್ಮೀಯ ವಿವಾಹವು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡಿತ್ತು. ಮುಸ್ಲಿಂ ಪುರುಷರ ಕುತಂತ್ರ ಎಂದು ಕೆಲ ಬಲಪಂಥೀಯರು ಈ ವಿವಾಹಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅಕ್ಕನ ಹಾದಿಯಲ್ಲಿ ತಂಗಿ..UPSCಯಲ್ಲಿ 15ನೇ ಸ್ಥಾನ ಪಡೆದ IAS ಟಾಪರ್ ಟೀನಾ ಡಾಬಿ ಸಹೋದರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.