ETV Bharat / bharat

ಯುಪಿನಲ್ಲಿ ಮೊದಲ ಝಿಕಾ ವೈರಸ್ ಪತ್ತೆ: ವಾಯುಪಡೆ ಅಧಿಕಾರಿಗೆ ತಗುಲಿದ ಸೋಂಕು

2021ರ ಜುಲೈ 8 ರಂದು ಕೇರಳದಲ್ಲಿ ಮೊಟ್ಟ ಮೊದಲ ಝಿಕಾ (Zika) ವೈರಸ್ ಕೇಸ್​ ಪತ್ತೆಯಾಗಿದ್ದು, ಬಳಿಕ ಆಗಸ್ಟ್‌ನಲ್ಲಿ ಮಹಾರಾಷ್ಟ್ರದಲ್ಲೂ ಮೊದಲ ಪ್ರಕರಣ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡಿದೆ.

Zika
Zika
author img

By

Published : Oct 25, 2021, 10:13 AM IST

Updated : Oct 25, 2021, 10:27 AM IST

ಕಾನ್ಪುರ (ಉತ್ತರ ಪ್ರದೇಶ): ಕೋವಿಡ್​ ಮೂರನೇ ಅಲೆಯ ಭೀತಿಯಲ್ಲಿ ದೇಶದ ಜನರು ಇರುವ ಈ ಸಂದರ್ಭದಲ್ಲಿ ಝಿಕಾ ವೈರಸ್ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾಗಿದ್ದು, ಭಾರತೀಯ ವಾಯುಪಡೆ (ಐಎಎಫ್​) ಅಧಿಕಾರಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಾನ್ಪುರದ ವಾಯುಪಡೆ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಸೋಂಕಿತ ಅಧಿಕಾರಿಯು ಕಳೆದ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರನ್ನು ನಗರದ ವಾಯುಪಡೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ರಕ್ತದ ಮಾದರಿಯಲ್ಲಿ ಕೆಲವು ನಿಗೂಢ ಲಕ್ಷಣಗಳು ಕಂಡು ಬಂದ ಪರಿಣಾಮ, ಬ್ಲಡ್​ ಸ್ಯಾಂಪಲ್​​ ಅನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿದ್ದು, ಝಿಕಾ ವೈರಸ್ ತಗುಲಿರುವುದು ತಿಳಿದು ಬಂದಿದೆ ಎಂದು ಕಾನ್ಪುರ ಮುಖ್ಯ ವೈದ್ಯಕೀಯ ಅಧಿಕಾರಿ ನೇಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.

ವೈರಸ್ ಹರಡುವುದನ್ನು ತಡೆಯಲು ಹತ್ತು ತಂಡಗಳನ್ನು ರಚಿಸಲಾಗಿದೆ. ಇದೀಗ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಜನರ ಸ್ಯಾಂಪಲ್​​ಗಳನ್ನು ಎನ್‌ಐವಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಸಿಂಗ್ ತಿಳಿಸಿದ್ದಾರೆ.

ಏನಿದು ಝಿಕಾ ವೈರಸ್?

ಝಿಕಾ ವೈರಸ್, ಇದು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳ ಮೂಲಕ ಹರಡುವ ವೈರಸ್ ಆಗಿದೆ. ಈ ವೈರಸ್​ ದೇಹಕ್ಕೆ ಹೊಕ್ಕಿದರೂ ಕೆಲವರಲ್ಲಿ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಶೇಕಡಾ 80 ರಷ್ಟು ರೋಗಿಗಳಿಗೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ. ಒಂದು ವೇಳೆ ಕಂಡು ಬಂದರೆ ಜ್ವರ, ಮೈ-ಕೈ ನೋವು ಮತ್ತು ಕಣ್ಣು ಕೆಂಪಾಗುವುದು ಇಂತಹ ಲಕ್ಷಣಗಳು ಕಂಡುಬರುತ್ತದೆ.

ಇದನ್ನೂ ಓದಿ: ಝಿಕಾ ವೈರಸ್ ಭಯಬೇಡ, ಮುನ್ನೆಚ್ಚರಿಕೆ ಅಗತ್ಯ.. ಇಲ್ಲಿವೆ ಕೆಲ ಉಪಯುಕ್ತ ಸಲಹೆಗಳು..

ಗರ್ಭಿಣಿಯರಿಗೆ ಹೆಚ್ಚು ಅಪಾಯಕಾರಿ

ಝಿಕಾ ವೈರಸ್ ಅಪಾಯ ಹೆಚ್ಚು ಗರ್ಭಿಣಿಯರ ಮೇಲೆ ಬೀರಲಿದೆ. ಏಕೆಂದರೆ ಗರ್ಭಿಣಿಯರು ಈ ಝಿಕಾ ವೈರಸ್‌ಗೆ ತುತ್ತಾದರೆ ಮೊದಲು ಸಮಸ್ಯೆಯಾಗುವುದೇ ಹುಟ್ಟುವ ಮಗುವಿಗೆ. ಈ ವೈರಸ್‌ನಿಂದ ಭ್ರೂಣಗಳ ಮೆದುಳಿಗೆ ಕ್ರಮಿಸಿ ಮೈಕ್ರೋ ಸೆಫಾಲಿ ಎಂಬ ಗಂಭೀರ ಜನ್ಮ ದೋಷಕ್ಕೆ ಕಾರಣವಾಗಬಹುದು. ಅಂದರೆ ಮಗುವಿನ ಮೆದುಳಿನ ಬೆಳವಣಿಗೆ ಕ್ಷೀಣಿಸಿ, ಮಗು ಆಟಿಸಂನಂಥ ರೋಗದೊಂದಿಗೆ ಹುಟ್ಟುವ ಸಾಧ್ಯತೆ ಹೆಚ್ಚು. ಜೊತೆಗೆ, ಶ್ರವಣ ಹಾಗೂ ದೃಷ್ಟಿ ದೋಷ, ಕೀಲುಗಳಲ್ಲಿ ಚಲನೆ ಇಲ್ಲದಿರುವುದು, ನರ ಬೆಳವಣಿಗೆಯಲ್ಲಿ ವೈಪರೀತ್ಯ ಸೇರಿದಂತೆ ಹಲವು ರೀತಿಯ ರೋಗಗಳಿಗೆ ಈ ವೈರಸ್ ಕಾರಣವಾಗಬಹುದು. ಗರ್ಭಿಣಿಯಲ್ಲಿ ರೋಗ ನಿರೋಧ ಶಕ್ತಿ ಕಡಿಮೆ ಇದ್ದರಂತೂ ಶಿಶುವಿನ ಪ್ರಾಣಕ್ಕೂ ಕುತ್ತು ತರಬಹುದು.

ಮೊದಲು ಪತ್ತೆಯಾದದ್ದು ಎಲ್ಲಿ?

2019ರಲ್ಲಿ ಈ ವೈರಸ್​ ಮೊದಲು ಬ್ರೆಜಿಲ್‌ನಲ್ಲಿ ಗರ್ಭಾವಸ್ಥೆಯಲ್ಲಿದ್ದ ಮಹಿಳೆಯಲ್ಲಿ ಕಂಡುಬಂದಿತ್ತು. ಭಾರತದಲ್ಲಿ ಮೊದಲು ಕಂಡು ಬಂದದ್ದು ಕೇರಳದಲ್ಲಿ. 2021ರ ಜುಲೈ 8 ರಂದು ಗರ್ಭಿಣಿಯೊಬ್ಬರಿಗೆ ಪಾಸಿಟಿವ್​ ಆಗಿತ್ತು. ಆಗಸ್ಟ್‌ನಲ್ಲಿ ಪುಣೆಯ 50 ವರ್ಷದ ಮಹಿಳೆಯೊಬ್ಬರು ಸೋಂಕಿಗೆ ತುತ್ತಾಗಿದ್ದರು. ಇದು ಮಹಾರಾಷ್ಟ್ರದ ಮೊದಲ ಝಿಕಾ ವೈರಸ್ ಪ್ರಕರಣ ಆಗಿತ್ತು. ಕೇರಳದಲ್ಲಿ ಈವರೆಗೆ ಒಟ್ಟು 60ಕ್ಕೂ ಹೆಚ್ಚು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Last Updated : Oct 25, 2021, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.