ಡಮ್ಡಮ್(ಪಶ್ಚಿಮ ಬಂಗಾಳ): ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ. ಕೇವಲ ಬಿಜೆಪಿ ಹೇಳೋದನ್ನ ಕೇಳಬೇಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
5ನೇ ಹಂತದ ಚುನಾವಣೆಗೋಸ್ಕರ ಪಶ್ಚಿಮ ಬಂಗಾಳದ ಡಮ್ಡಮ್ನಲ್ಲಿ ಪ್ರಚಾರ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಯಾವುದೇ ಕಾರಣಕ್ಕೂ ಪಕ್ಷಪಾತ ಮಾಡಬೇಡಿ. ಎಲ್ಲರೂ ಹೇಳಿದ್ದು ಕೇಳಿ ಎಂದು ವಿನಂತಿ ಮಾಡಿಕೊಂಡರು.
ಮತಗಳಿಗಾಗಿ ನೀವು ಬಾಂಗ್ಲಾದೇಶಕ್ಕೆ ಹೋಗಿದ್ದೀರಿ. ಇದೀಗ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದರೂ ಕೇಂದ್ರ ಚುನಾವಣಾ ಆಯೋಗ ಸುಮೋಟೋ ಜಾರಿಗೊಳಿಸುತ್ತಿಲ್ಲ. ಮೋದಿ, ನೀವು ಟ್ರಂಪ್ ಕಾರ್ಡ್ ಆಡಲು ಈ ಹಿಂದೆ ಯುಎಸ್ಗೆ ಹೋಗಿದ್ದೀರಿ, ಇದೀಗ ಬಂಗಾಳಕ್ಕೆ ಬಂಗಾಳ ಕಾರ್ಡ್ ಆಡಲು ಹೋಗಿದ್ದೀರಿ ಎಂದು ನಮೋ ವಿರುದ್ಧ ಮಮತಾ ವಾಗ್ದಾಳಿ ನಡೆಸಿದರು. ಮೋದಿ ನೋಡಿದ್ರೆ ನನಗೆ ನಾಚಿಕೆ ಆಗುತ್ತದೆ. ನಾನು ಈ ರೀತಿಯ ಪ್ರಧಾನಿ ನೋಡಿಲ್ಲ. ಎಲ್ಲ ಸಮುದಾಯದವರಿಗಾಗಿ ನಾನು ಕೆಲಸ ಮಾಡ್ತಿದ್ದೇನೆ. ಇದೀಗ ಬಿಜೆಪಿ ಹಟಾವೋ ದೇಶ ಬಚಾವೋ ಎಂಬ ವಾಕ್ಯ ಮಾತ್ರ ಉಳಿದುಕೊಂಡಿದೆ ಎಂದರು.
ಕೇಂದ್ರ ರೈಲ್ವೆ ಇಲಾಖೆ, ಬಿಎಸ್ಎನ್ಎಲ್, ಬ್ಯಾಂಕ್ ಎಲ್ಲವನ್ನೂ ಮಾರಿದೆ. ಇದೀಗ ಅಲ್ಲಿ ಕೆಲಸ ಮಾಡುವವರನ್ನ ತೆಗೆದುಹಾಕಲು ಯೋಜನೆ ರೂಪಿಸಲಾಗುತ್ತಿದೆ ಎಂಬ ಮಾಹಿತಿ ಸಹ ಇದೆ. ಇದು ಉತ್ತರ ರಾಜಕೀಯ ಅಲ್ಲ ಎಂದು ಮಮತಾ ಹೇಳಿದ್ರು.
ಚು. ಆಯೋಗಕ್ಕೆ ಪತ್ರ ಬರೆದ ಟಿಎಂಸಿ
4ನೇ ಹಂತದ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಕೊಚ್ ಬೆಹಾರ್ದಲ್ಲಿ ನಾಲ್ವರು ಮೃತರಾಗಿದ್ದು, ಘಟನೆ ನಂತರ ಬಿಜೆಪಿ ದಿಲೀಪ್ ಘೋಷ್ ಸಿಟಾಲಿಕುಚಿಯಲ್ಲಿ ಇಂತಹ ಘಟನೆ ಸಂಭವಿಸಬಹುದು ಎಂದು ಹೇಳಿದ್ದಾರೆ. ಇದೀಗ ಅವರ ಚುನಾವಣಾ ಪ್ರಚಾರ ನಿಷೇಧಿಸುವಂತೆ ಒತ್ತಾಯಿಸಿ, ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ ಬರೆದಿದೆ.