ಸಿಲಿಗುರಿ (ಪಶ್ಚಿಮ ಬಂಗಾಳ): ರತನ್ ಟಾಟಾ ಅವರು ತಮ್ಮ ಕಾರ್ಖಾನೆಗಳನ್ನು ಪಶ್ಚಿಮ ಬಂಗಾಳದ ಸಿಂಗೂರಿನಿಂದ ಗುಜರಾತ್‌ಗೆ ಸ್ಥಳಾಂತರ ಮಾಡಲು ಅಂದಿನ ಎಡರಂಗ ಸರ್ಕಾರ ಕಾರಣ, ನಾನಲ್ಲ ಎಂದು ಟಿಎಂಸಿ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸಿಲಿಗುರಿಯ ಕವಾಖಾಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಾಟಾ ಕಾರ್ಖಾನೆಯನ್ನು ನಾನು ಓಡಿಸಿಲ್ಲ, ಸಿಪಿಎಂ ಓಡಿಸುವುದು. ಸಿಪಿಎಂ ಬಲವಂತವಾಗಿ ಭೂಮಿಯನ್ನು ವಶಪಡಿಸಿಕೊಂಡಿದೆ. ಬೇರೆ ಕಡೆ ಜಮೀನು ಕೊಡಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ, ಉತ್ತರ ಮತ್ತು ದಕ್ಷಿಣ ಬಂಗಾಳದಲ್ಲಿ ವಿಭಜನೆಯ ಕಲ್ಪನೆ ಬಗ್ಗೆಯೂ ಟೀಕಿಸಿದ ಮಮತಾ, ದಕ್ಷಿಣ ಮತ್ತು ಉತ್ತರ ಬಂಗಾಳ ಸೇರಿಯೇ ಪಶ್ಚಿಮ ಬಂಗಾಳವಾಗಿದೆ. ದಕ್ಷಿಣ ಬಂಗಾಳಕ್ಕಿಂತ ಉತ್ತರ ಬಂಗಾಳದ ಜನರೊಂದಿಗೆ ನಮ್ಮ ಸಂಪರ್ಕ ಹೆಚ್ಚಿದೆ. ಉತ್ತರ ಬಂಗಾಳದಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದೆಹಲಿಯಲ್ಲಿ ಪಟಾಕಿಗೆ ನಿಷೇಧ: ಸಿಡಿಸಿದ್ರೆ 200 ರೂ. ದಂಡ, 6 ತಿಂಗಳು ಜೈಲು ಶಿಕ್ಷೆ