ETV Bharat / bharat

ತೀವ್ರಗೊಂಡ ಅಗ್ನಿಪಥ್ ಪ್ರತಿಭಟನೆ : ಹೈದರಾಬಾದ್​ನಲ್ಲಿ ಮೆಟ್ರೋ ರೈಲುಗಳು, ಎಂಎಂಟಿಎಸ್​ ರದ್ದು - Agnipath scheme protest

ಅಗ್ನಿಪಥ್ ಪ್ರತಿಭಟನೆ ತೀವ್ರಗೊಂಡ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಹೈದರಾಬಾದ್ ಮೆಟ್ರೋ ರೈಲುಗಳು ಮತ್ತು ಎಂಎಂಟಿಸಿ ಸೇವೆಗಳನ್ನು ರದ್ದುಗೊಳಿಸಲಾಗಿದೆ..

ತೀವ್ರಗೊಂಡ ಅಗ್ನಿಪಥ್ ಪ್ರತಿಭಟನೆ: ಹೈದರಾಬಾದ್​ನಲ್ಲಿ ಮೆಟ್ರೋ ರೈಲುಗಳು, ಎಂಎಂಟಿಎಸ್​ ರದ್ದು

author img

By

Published : Jun 17, 2022, 3:21 PM IST

Updated : Jun 17, 2022, 7:10 PM IST

ಹೈದರಾಬಾದ್ : ಸಿಕಂದರಾಬಾದ್‌ನಲ್ಲಿ ಅಗ್ನಿಪಥ್ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಹೈದರಾಬಾದ್ ಮೆಟ್ರೋ ರೈಲುಗಳು ಮತ್ತು ಎಂಎಂಟಿಸಿ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಎಲ್ಲಾ ಮಾರ್ಗಗಳಲ್ಲಿ ರೈಲುಗಳನ್ನು ರದ್ದುಗೊಳಿಸುವುದಾಗಿ ಮೆಟ್ರೋ ಎಂಡಿ ಘೋಷಿಸಿದ್ದಾರೆ.

ಫಲಕ್​ನಾಮಾದಿಂದ ಲಿಂಗಂಪಲ್ಲಿಗೆ ಸಂಚರಿಸುತ್ತಿದ್ದ 12 ಎಂಎಂಟಿಎಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗೆ ಲಿಂಗಂಪಲ್ಲಿಯಿಂದ ಫಲಕ್​ನಾಮಾಗೆ ಸಂಚರಿಸುತ್ತಿದ್ದ 13 ಎಂಎಂಟಿಎಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಚಿಗುಡ ಠಾಣಾಧಿಕಾರಿ ಪ್ರಭುಚರಣ್ ವಿವರ ಬಹಿರಂಗಪಡಿಸಿದ್ದಾರೆ.

ಇನ್ನು ಸಿಕಂದರಾಬಾದ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ದಾಮೋದರ್ ರಾಕೇಶ್ ಎಂದು ಗುರುತಿಸಲಾಗಿದೆ. ಅವರು ವಾರಂಗಲ್ ಜಿಲ್ಲೆಯ ಖಾನಾಪುರ ವಲಯದ ಡಬೀರ್‌ಪೇಟ್ ಗ್ರಾಮದವರಾಗಿದ್ದಾರೆ.

ಇದನ್ನೂ ಓದಿ: ದೇಶದ ಹಲವೆಡೆ ಭುಗಿಲೆದ್ದ ಆಕ್ರೋಶ... ಟ್ರೈನ್​ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು!

Last Updated : Jun 17, 2022, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.