ಹೈದರಾಬಾದ್ (ತೆಲಂಗಾಣ): ಹಾಡಹಗಲೇ ನಡುರಸ್ತೆಯಲ್ಲಿ ಮೂವರು ದುಷ್ಕರ್ಮಿಗಳು ಸೇರಿಕೊಂಡು ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆ ಮಾಡಿರುವ ಭೀಭತ್ಸ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಭಾನುವಾರ ಸಂಜೆ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಜಂಗಮ ಸಾಯಿನಾಥ್ (32) ಎಂದು ಗುರುತಿಸಲಾಗಿದೆ. ಈತನನ್ನು ಕತ್ತಿ ಮತ್ತು ರಾಡ್ನಿಂದ ದಾಳಿ ಮಾಡಿ ಬರ್ಬರವಾಗಿ ಕೊಂದು ಹಾಕಲಾಗಿದೆ.
ಇದನ್ನೂ ಓದಿ: ಸಾಕು ಶ್ವಾನವನ್ನು ನಾಯಿ ಎಂದು ಕರೆದಿದ್ದಕ್ಕೆ ರೈತನ ಹತ್ಯೆ!
ಇಲ್ಲಿನ ಪುರಾನಾಪೂಲ್ ಬಳಿಯ ಜಿಯಾಗುಡಾ ಬೈಪಾಸ್ ರಸ್ತೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಸಾಯಿನಾಥ್ನನ್ನು ಅಟ್ಟಾಸಿಕೊಂಡು ಭೀಕರವಾಗಿ ಕೊಲೆ ಮಾಡಲಾಗಿದೆ. ಇದರ ದೃಶ್ಯಗಳು ದಾರಿಹೋಕರ ಮೊಬೈಲ್ವೊಂದರಲ್ಲಿ ಸೆರೆಯಾಗಿವೆ. ಈ ಕೊಲೆಯ ದೃಶ್ಯಗಳು ನೋಡುಗರನ್ನು ಬೆಚ್ಚಿ ಬೀಳಿಸುವಂತೆ ಇವೆ. ಈ ಘಟನೆಯ ವಿಷಯ ತಿಳಿದ ಕುಲ್ಸುಂಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ನಡೆದಿದ್ದೇನು?: ಜಿಯಗುಡಾ ಬೈಪಾಸ್ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಓಡುತ್ತಿದ್ದ.. ಈತನನ್ನು ಮೂವರು ಬೆನ್ನಟ್ಟಿ ಬಂದು ನಡುರಸ್ತೆಯಲ್ಲಿ ಹಿಡಿದುಕೊಂಡಿದ್ದಾರೆ. ಒಬ್ಬನ ಕೈಯಲ್ಲಿ ಕತ್ತಿ ಮತ್ತು ಮತ್ತೊಬ್ಬ ಕೈಯಲ್ಲಿ ರಾಡ್ ಹಿಡಿದುಕೊಂಡು ಬಂದಿದ್ದು, ಮೂರನೆಯನು ಓಡುತ್ತಿದ್ದ ವ್ಯಕ್ತಿಯನ್ನು ಕೆಳಗಡೆ ಕೆಡವಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲೇ ಹಿಂದಿನಿಂದ ಬಂದ ಇಬ್ಬರು ಕತ್ತಿ ಹಾಗೂ ರಾಡ್ನಿಂದ ದಾಳಿ ಮಾಡಿದ್ದಾರೆ. ಒಬ್ಬನು ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಉಳಿದ ಇಬ್ಬರು ನಿರಂತರವಾಗಿ ತಮ್ಮ ಕೈಯಲ್ಲಿದ್ದ ಆಯುಧಗಳಿಂದ ಕೊಚ್ಚಿ ಹಾಕಿದ್ದಾರೆ. ಪರಿಣಾಮ ಸ್ಥಳದಲ್ಲೇ ಆ ವ್ಯಕ್ತಿ ಪ್ರಾಣ ಬಿಟ್ಟಿದ್ದಾನೆ.
ನದಿಗೆ ಹಾರಿ ಆರೋಪಿಗಳು ಪರಾರಿ: ಹಾಡಹಗಲೇ ರಸ್ತೆ ಮಧ್ಯೆ ವ್ಯಕ್ತಿಯನ್ನು ಕೊಲೆಗೈದ ಆರೋಪಿಗಳು ನಂತರ ಸಮೀಪದ ಮೂಸಿ ನದಿಗೆ ಹಾರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನಾ ಸ್ಥಳದಲ್ಲಿದ್ದ ದಾರಿಹೋಕರೊಬ್ಬರು ದೂರದಿಂದಲೇ ಕೊಲೆ ಮಾಡುವ ದೃಶ್ಯಗಳನ್ನು ವಿಡಿಯೋ ಮಾಡಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ಮಾಹಿತಿ ಪ್ರಕಾರ ಹತ್ಯೆಯಾದ ವ್ಯಕ್ತಿಯನ್ನು ಪೊಲೀಸರು ಸಾಯಿನಾಥ್ ಎಂದು ಗುರುತಿಸಿದ್ದಾರೆ. ಈತ ಕೋಠಿಯ ಇಸ್ತಾಮಿಯಾ ಬಜಾರ್ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಿವಾಹೇತರ ಸಂಬಂಧ : ಮಹಿಳೆಯೊಂದಿಗೆ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಮಹಿಳೆಯ ಸಂಬಂಧಿಕರು
ಈ ಕೊಲೆ ಭೀಕರ ಕೊಲೆಯ ಘಟನೆ ನಂತರ ಸ್ಥಳೀಯರು ಭಯಭೀತರಾಗಿದ್ದಾರೆ. ಆದರೆ, ಈ ಕೊಲೆಗೆ ಕಾರಣವೇನು?, ಈ ಹಂತಕರು ಯಾರು ಎಂಬ ಗುರುತು ಇನ್ನೂ ಪತ್ತೆಯಾಗಿಲ್ಲ. ಸದ್ಯ ಕುಲ್ಸುಂಪುರ ಸರ್ಕಲ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳೊಂದಿಗೆ ಶೋಧ ಕಾರ್ಯ ಆರಂಭಿಸಲಾಗಿದೆ. ಪೊಲೀಸರ ತನಿಖೆಗೆ ಈ ವಿಡಿಯೋ ದೃಶ್ಯಗಳೇ ಪ್ರಬಲ ಸಾಕ್ಷಿಯಾಗಿದೆ. ಇದರ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮಕ್ಕಳಾಗಲಿಲ್ಲ ಎಂದು ಚಿತಾಭಸ್ಮ ತಿನ್ನಿಸಿದ ದುರುಳರು: ಕುಟುಂಬಸ್ಥರಿಂದಲೇ ಮಹಿಳೆಗೆ ವಾಮಾಚಾರ!