ETV Bharat / bharat

ಲ್ಯಾಪ್​ಟಾಪ್​ ತರಲು ರಾಪಿಡೋ ಬುಕ್​ ಮಾಡಿದ ಬ್ಯಾಂಕ್​ ಉದ್ಯೋಗಿಗೆ ಶಾಕ್​ ಕೊಟ್ಟ ಡ್ರೈವರ್​​ - ಉದ್ಯೋಗಿ ಪೇಚಿಗೆ ಸಿಲುಕಿದ

ಪ್ರಯಾಣಕ್ಕೆ ಅನುಕೂಲವಾಗಿರುವ ರಾಪಿಡೋವನ್ನು ಲ್ಯಾಪ್​ಟಾಪ್​ ತರಲು ಬಳಕೆ ಮಾಡಿ ಬ್ಯಾಂಕ್​ ಉದ್ಯೋಗಿ ಪೇಚಿಗೆ ಸಿಲುಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

hyderabad-man-booked-a-rapido-to-bring-a-laptop

author img

By ETV Bharat Karnataka Team

Published : Jan 18, 2024, 5:51 PM IST

ಹೈದರಾಬಾದ್​(ತೆಲಂಗಾಣ) ​​: ಟ್ರಾಫಿಕ್​ನಿಂದ ಬೇಸತ್ತಿರುವ ಅನೇಕ ಪ್ರಯಾಣಿಕರಿಗೆ ರ‍್ಯಾಪಿಡೋ ಅನೇಕ ಸಹಾಯ ಮಾಡಿದೆ. ರ‍್ಯಾಪಿಡೋ ಮೂಲಕ ವೇಗವಾಗಿ ತಮ್ಮ ಗುರಿ ತಲುಪುವ ಹಿನ್ನೆಲೆ ಇದು ಇಂದು ಅತ್ಯಂತ ಜನಪ್ರಿಯವಾಗಿದೆ. ಇಂತಹ ರಾಪಿಡೋವನ್ನು ಗ್ರಾಹಕರೊಬ್ಬರು ತಮ್ಮ ಲ್ಯಾಪ್​ಟಾಪ್​​ ತರಲು ಬುಕ್​ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವ ಘಟನೆ ಹೈದರಬಾದ್​ನ ಮಸಬ್​ ಟಾಂಕ್​ ಪೊಲೀಸ್​ ಠಾಣೆ ಬಳಿ ನಡೆದಿದೆ.

ಅಶ್ವಿನ್​​ ಎಂಬ ಬ್ಯಾಂಕ್​ ಉದ್ಯೋಗಿಯೊಬ್ಬರು ಎಂದಿನಂತೆ ಹರಿಬರೆಯಲ್ಲಿ ಉದ್ಯೋಗಕ್ಕೆ ತೆರಳಿದ್ದಾರೆ. ಈ ವೇಳೆ, ಗಡಿಬಿಡಿಯಲ್ಲಿ ಮನೆಯಿಂದ ಲ್ಯಾಪ್​ಟಾಪ್​ ತರುವುದನ್ನು ಮರೆತಿರುವುದು ಗಮನಕ್ಕೆ ಬಂದಿದೆ. ಕಚೇರಿಗೆ ಬಂದ ಬಳಿಕ ಮತ್ತೆ ಮನೆಗೆ ಹೋಗಿ ಲ್ಯಾಪ್​ಟಾಪ್​ ತರುವುದು ಸಮಯ ವ್ಯರ್ಥದ ಕೆಲಸ ಎಂದು ಅವರು ತಕ್ಷಣಕ್ಕೆ ರಾಪಿಡೋವನ್ನು ಬುಕ್​ ಮಾಡಿದ್ದಾರೆ. ರಾಪಿಡೋ ಡ್ರೈವರ್​ ಆತನ ಮನೆಗೆ ತೆರಳಿ ಲ್ಯಾಪ್​ಟಾಪ್​ ತೆಗೆದುಕೊಂಡು ಬರುವಂತೆ ತಿಳಿಸಿದ್ದಾರೆ. ಅದರಂತೆ ರಾಪಿಡೋ ಡ್ರೈವರ್​ ಲ್ಯಾಪ್​ಟಾಪ್​ ಅನ್ನು ಮನೆಯವರಿಂದ ಪಡೆದಿದ್ದಾರೆ. ಆದರೆ, ಇದು ಇದನ್ನು ಡೆಲಿವರಿ ಮಾಡಿಲ್ಲ. ಎಷ್ಟು ಹೊತ್ತಾದರೂ ರಾಪಿಡೋ ಡ್ರೈವರ್​ ಲ್ಯಾಪ್​ಟಾಪ್​ ತರದ ಹಿನ್ನೆಲೆ ಆತನಿಗೆ ಕರೆ ಮಾಡಿದಾಗ ಅವರೇ ಅಚ್ಚರಿಗೆ ಒಳಗಾಗಿರುವ ಘಟನೆ ಕೂಡ ನಡೆದಿದೆ.

ಬ್ಲಾಕ್​ಮೇಲ್​ ತಂತ್ರ ಹೂಡಿದ ಡ್ರೈವರ್​: ಲ್ಯಾಪ್​ಟಾಪ್​ ಪಡೆದ ಚಾಲಕ ಅದನ್ನು ಮರಳಿಸಬೇಕು ಎಂದರೆ, 30 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ, ಒಂದು ವೇಳೆ ತಾನು ಕೇಳಿದ ಹಣ ನೀಡದೇ ಹೋದಲ್ಲಿ ಅದರಲ್ಲಿದ್ದ ಡೇಟಾವನ್ನು ಅಳಿಸುವ ಬೆದರಿಕೆ ಹಾಕಿದ್ದಾನೆ. ಇದನ್ನು ಕೇಳಿದ ಅಶ್ವಿನ್​ ಗಾಬರಿಯಾಗಿ ಏನು ಮಾಡಬೇಕು ಎಂದು ತಿಳಿಯದೇ ಒದ್ದಾಡಿದ್ದಾರೆ. ಬಳಿಕ ಈ ಕುರಿತು ಪೊಲೀಸರಿಗೆ ವಿಷಯ ಮುಟ್ಟಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಸಿಸಿಟಿವಿ ದೃಶ್ಯವಾವಳಿ ಆಧಾರದ ಮೇಲೆ ಆರೋಪಿಯನ್ನು ಹಿಡಿದು, ಸದ್ಯ ವಶಕ್ಕೆ ಪಡೆದು ರಿಮೇಂಡ್​ಗೆ ಕಳುಹಿಸಿದ್ದಾರೆ. ಹಣದ ಬೇಡಿಕೆ ಇಟ್ಟ ಚಾಲಕ ಆಂಧ್ರಪ್ರದೇಶದ ಗೋವರ್ಧನ ರೆಡ್ಡಿ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಲ್ಯಾಪ್​ಟಾಪ್​ ಪಡೆದ ಅಶ್ವಿನ್​ ಎರಡು ಮೂರು ಗಂಟೆ ಕಾಲ ಉಳಿಸಲು ಹೋಗಿ ಹೊಸ ತಾಪತ್ರಯಕ್ಕೆ ಸಿಲುಕಿದ್ದು, ಇದೀಗ ಸುದ್ದಿಯಾಗಿದ್ದಾರೆ. ಲ್ಯಾಪ್​ಟಾಪ್​ ನಂತಹ ಖಾಸಗಿ ಸಂಪತ್ತನ್ನು ಯಾವ ನಂಬಿಕೆ ಮೇಲೆ ರಾಪಿಡೋದಲ್ಲಿ ಬುಕ್​ ಮಾಡಿದ್ದಾರೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

ಇದನ್ನೂ ಓದಿ: ಶೇ.42ರಷ್ಟು ಗ್ರಾಮೀಣ ಮಕ್ಕಳು ಸುಲಭ ಇಂಗ್ಲಿಷ್​ ವಾಕ್ಯ ಓದಲು ಅಸಮರ್ಥ: ASER ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.