ETV Bharat / bharat

18.90 ಲಕ್ಷ ರೂ.ಗೆ ಹರಾಜಾಯ್ತು ಬಾಲಾಪುರ್​ ಗಣೇಶನ ಲಡ್ಡು! - ಖೈರತಾಬಾದ್​ ಮತ್ತು ಬಾಲಾಪುರ್

ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಬಾಲಾಪುರ್​ನಲ್ಲಿ ಈ ವರ್ಷದ ಗಣೇಶನ ಲಡ್ಡು ಬರೋಬ್ಬರಿ 18.90 ಲಕ್ಷ ರೂಪಾಯಿಗೆ ಹರಾಜಾಗಿದೆ. ಲಡ್ಡನ್ನು ಪಡೆದ ಆಂಧ್ರಪ್ರದೇಶದ ಎಂಎಲ್‌ಸಿ ರಮೇಶ್ ಯಾದವ್ ಅವರು ಇದನ್ನು ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡುವುದಾಗಿ ಹೇಳಿದ್ದಾರೆ.

18.90 ಲಕ್ಷ ರೂ.ಗೆ ಹರಾಜಾಯ್ತು ಬಾಲಾಪುರ್​ ಗಣೇಶನ ಲಡ್ಡು

author img

By

Published : Sep 19, 2021, 1:57 PM IST

ಹೈದರಾಬಾದ್ (ತೆಲಂಗಾಣ): ಪ್ರತಿ ವರ್ಷ ಗಣೇಶನ ಹಬ್ಬ ಬಂದ್ರೆ ಸಾಕು ತೆಲುಗು ರಾಜ್ಯಗಳಾದ ತೆಲಂಗಾಣ - ಆಂಧ್ರಪ್ರದೇಶದ ಜನರ ಗಮನ ಖೈರತಾಬಾದ್​ ಮತ್ತು ಬಾಲಾಪುರ್​ ಮೇಲೆ ಇರುತ್ತದೆ. ವಿಶ್ವದ ಅತಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡೋದ್ರಲ್ಲಿ ಖೈರತಾಬಾದ್ ಪ್ರಸಿದ್ಧಿ ಪಡೆದರೆ, ಗಣೇಶನ ಮುಂದಿಟ್ಟ ಲಡ್ಡು ಹರಾಜಲ್ಲಿ ಬಾಲಾಪುರ್ ಗಣೇಶ ಖ್ಯಾತಿ ಪಡೆದಿದೆ.

18.90 ಲಕ್ಷ ರೂ.ಗೆ ಹರಾಜಾಯ್ತು ಬಾಲಾಪುರ್​ ಗಣೇಶನ ಲಡ್ಡು

ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಬಾಲಾಪುರ್​ನಲ್ಲಿ ಈ ವರ್ಷದ ಗಣೇಶನ ಲಡ್ಡು ಬರೋಬ್ಬರಿ 18.90 ಲಕ್ಷ ರೂಪಾಯಿಗೆ ಹರಾಜಾಗಿದೆ. 1,116 ರೂ.ನಿಂದ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಸುಮಾರು 19 ಜನರು ಭಾಗವಹಿಸಿದ್ದರು. ಆಂಧ್ರಪ್ರದೇಶದ ಎಂಎಲ್‌ಸಿ ರಮೇಶ್ ಯಾದವ್ ಮತ್ತು ಮರಿ ಶಶಾಂಕ್ ರೆಡ್ಡಿ ಎಂಬುವರು 18.90 ಲಕ್ಷ ರೂ. ನೀಡಿ ಹರಾಜಲ್ಲಿ ಲಡ್ಡು ಪಡೆದಿದ್ದಾರೆ.

ಇದನ್ನೂ ಓದಿ: ಮುಂದಿನ ವರ್ಷ ಮಣ್ಣಿನ ಗಣೇಶ ಸ್ಥಾಪನೆಗೆ ಖೈರತಾಬಾದ್ ಗಣೇಶ ಉತ್ಸವ ಸಮಿತಿ ನಿರ್ಧಾರ

ಬಳಿಕ ಮಾತನಾಡಿದ ಎಂಎಲ್‌ಸಿ ರಮೇಶ್ ಯಾದವ್, ತೆಲುಗು ರಾಜ್ಯದ ಜನರಿಗೆ ಆರೋಗ್ಯ- ಆಶೀರ್ವಾದ ನೀಡುವಂತೆ ಗಣೇಶನಲ್ಲಿ ಪ್ರಾರ್ಥಿಸಿದರು. ಈ ಲಡ್ಡನ್ನು ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡುವುದಾಗಿ ಹೇಳಿದ್ದಾರೆ.

ಪ್ರಸಿದ್ಧ ಬಾಲಾಪುರ್​ ಗಣೇಶ ಲಡ್ಡು ಹರಾಜು 1994 ರಿಂದ ನಡೆದು ಬಂದಿದೆ. ಕಳೆದ ವರ್ಷ ಬಾಲಾಪುರ್ ಗಣೇಶೋತ್ಸವ ಸಮಿತಿಯು ಕೊರೊನಾ ಸಾಂಕ್ರಾಮಿಕದಿಂದಾಗಿ ಹರಾಜನ್ನು ಆಯೋಜಿಸಿರಲಿಲ್ಲ. 2019 ರಲ್ಲಿ ಕೊಲಾನು ರಾಮ್ ರೆಡ್ಡಿ ಎಂಬುವರು 17.60 ಲಕ್ಷ ರೂ. ನೀಡಿ ಹರಾಜಲ್ಲಿ ಲಡ್ಡು ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.