ಅಹಮದ್ನಗರ(ಮಹಾರಾಷ್ಟ್ರ): ರಾಮ ನವಮಿ ದಿನವೇ ಕಟ್ಟಿಕೊಂಡ ಹೆಂಡತಿ, ಮಗುವಿನ ಕೊಲೆ ಮಾಡಿರುವ ಪಾಪಿ ಗಂಡ ಅವರ ಫೋಟೋ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಶೇರ್ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಅಹಮದ್ನಗರದ ಶ್ರೀರಾಂಪುರದ ಖೈರಿ ಶಿವಾರದ ವಸ್ತಿಯಲ್ಲಿ ನಡೆದಿದೆ. 27 ವರ್ಷದ ಅಕ್ಷರಾ ಹಾಗೂ 5 ವರ್ಷದ ಮಗ ಶಿವತೇಜ್ ಅವರನ್ನು ಬಲರಾಮ್ ಕೊಲೆ ಮಾಡಿದ್ದಾನೆ.
ಈ ಘಟನೆಯಿಂದ ಶ್ರೀರಾಂಪುರ ಸಂಪೂರ್ಣವಾಗಿ ಬೆಚ್ಚಿಬಿದ್ದಿದೆ. ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಆರ್ಟಿಕಲ್ 302, 498ಎ ಅಡಿಯಲ್ಲಿ ದೂರು ದಾಖಲಾಗಿದೆ. ಮಗ, ಹೆಂಡತಿಯನ್ನ ಕತ್ತು ಹಿಸುಕಿ ಕೊಲೆ ಮಾಡಿರುವ ತಂದೆ ತದನಂತರ ಪತ್ನಿಯ ಸಹೋದರನಿಗೆ ವಿಡಿಯೋ ಕಾಲ್ ಮಾಡಿ, ಅವರನ್ನ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ: ಪ್ರತ್ಯೇಕವಾದಿ ಸಿದ್ಧಾಂತ: ಕಾಶ್ಮೀರದ ಕಾನೂನು ಕಾಲೇಜು ಪ್ರಾಂಶುಪಾಲ ವಜಾ
ಇದರ ಬೆನ್ನಲ್ಲೇ ಸಂಬಂಧಿಕರ ವಾಟ್ಸಾಪ್ ಗ್ರೂಪ್ನಲ್ಲಿ ಅವರ ಹತ್ಯೆಯ ಫೋಟೋ ಹಂಚಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಟ್ರಕ್ ಚಾಲಕನಾಗಿದ್ದ ಆರೋಪಿ ಬಲರಾಮ್, ಆರು ತಿಂಗಳಿಂದಲೂ ಅಕ್ಷರ್ ಮೇಲೆ ವರದಕ್ಷಿಣೆಗೋಸ್ಕರ ಕಿರುಕುಳ ನೀಡುತ್ತಿದ್ದನಂತೆ. ಇದಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಆದರೆ, ಎರಡು ಕುಟುಂಬದ ಮಧ್ಯಸ್ಥಿಕೆಯಿಂದ ಪ್ರಕರಣ ಇತ್ಯರ್ಥಗೊಂಡಿತ್ತು. ಇದರ ಬೆನ್ನಲ್ಲೇ ರಾಮನವಮಿ ದಿನವೇ ಬಲರಾಮ್ ತನ್ನ ಪತ್ನಿ ಹಾಗೂ ಐದು ವರ್ಷದ ಮಗುವಿನ ಕೊಲೆ ಮಾಡಿದ್ದಾನೆ.