ETV Bharat / bharat

ಕೇರಳ ಪೊಲೀಸರಿಂದ ಪೋಲ್ ಆ್ಯಪ್​; ಬೀಗ ಹಾಕಿದ ಮನೆಯ ಭದ್ರತೆಗಾಗಿ ಮೊಬೈಲ್ ಅಪ್ಲಿಕೇಶನ್ - Thiruvananthapuram District

ಕೇರಳ ಪೊಲೀಸರಿಂದ ಪೋಲ್ ಆ್ಯಪ್‌ ಎಂಬ ಹೊಸ ಭದ್ರತಾ ವ್ಯವಸ್ಥೆ ಜಾರಿಗೆ ಬಂದಿದೆ. ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಆ್ಯಪ್​ನ್ನು ಬಳಸಿ ಮನೆಗೆ ಬೀಗ ಹಾಕಿ ಹೊರಗೆ ಹೋದ ನಂತರ ಸಿಬ್ಬಂದಿ ಮನೆಗೆ ಗಸ್ತು ಹಾಗೂ ಕಣ್ಗಾವಲು ಇರಿಸುತ್ತಾರೆ.

ಕೇರಳ ಪೊಲೀಸರ ಪೋಲ್ ಆ್ಯಪ್
ಕೇರಳ ಪೊಲೀಸರ ಪೋಲ್ ಆ್ಯಪ್
author img

By

Published : Sep 15, 2022, 4:31 PM IST

ತಿರುವನಂತಪುರಂ (ಕೇರಳ): ಕೇರಳ ಪೊಲೀಸರ ಪೋಲ್ ಆ್ಯಪ್‌ಗೆ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓಣಂ ದಿನಗಳಲ್ಲಿ ಪ್ರವಾಸದಲ್ಲಿರುವವರು ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ನೀಡಿ, ಪೊಲೀಸರು ತಮ್ಮ ಮನೆಯ ಸುತ್ತ ಗಸ್ತನ್ನು ತೀವ್ರಗೊಳಿಸಬೇಕು ಎಂಬ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಂತರ ಸೆಪ್ಟೆಂಬರ್ 5 ಮತ್ತು 13 ರ ನಡುವೆ ರಾಜ್ಯಾದ್ಯಂತ 1329 ಜನರು ಪೋಲ್-ಆ್ಯಪ್ ಮೂಲಕ ತಮ್ಮ ಮನೆಗೆ ಗಸ್ತು ಮತ್ತು ಕಣ್ಗಾವಲು ಇಡುವಂತೆ ಕೋರಿದ್ದರು.

ಈ ಅವಧಿಯಲ್ಲಿ ತಿರುವನಂತಪುರ ಜಿಲ್ಲೆಯೊಂದರಲ್ಲೇ 317 ಮಂದಿ ಈ ಸೇವೆಯನ್ನು ಪಡೆದುಕೊಂಡಿದ್ದಾರೆ. ಎರ್ನಾಕುಲಂ ಜಿಲ್ಲೆಯಲ್ಲಿ 164 ಜನರು ಮತ್ತು ತ್ರಿಶೂರ್‌ನಲ್ಲಿ 131 ಜನರು ತಮ್ಮ ಪ್ರಯಾಣದ ಬಗ್ಗೆ ಮೊಬೈಲ್ ಆ್ಯಪ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಝಿಕ್ಕೋಡ್‌ನಲ್ಲಿ 129 ಜನರು, ಕೊಲ್ಲಂನಲ್ಲಿ 89 ಜನರು ಮತ್ತು ಕಣ್ಣೂರಿನಲ್ಲಿ 87 ಜನರು ಈ ಸಮಯದಲ್ಲಿ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಓಣಂ ಹಬ್ಬದ ರಜೆ ಮುಗಿದರೂ ಪ್ರವಾಸದಲ್ಲಿರುವವರಿಗೆ ಮೊಬೈಲ್ ಆ್ಯಪ್ ಸೌಲಭ್ಯ ಮುಂದುವರಿಯಲಿದೆ. ಇದಕ್ಕಾಗಿ ಪೋಲ್-ಆ್ಯಪ್ ಅನ್ನು ಮೊಬೈಲ್ ಫೋನ್‌ನಲ್ಲಿ ಇನ್​ಸ್ಟಾಲ್​ ಮಾಡಿಕೊಂಡ ನಂತರ ಅಗತ್ಯವಿರುವ ಮಾಹಿತಿಯನ್ನು ಒದಗಿಸಬೇಕು. ಈ ರೀತಿಯಾಗಿ ಬೀಗ ಹಾಕಿದ ಮನೆಯ ಬಳಿ ಹೆಚ್ಚುವರಿ ಭದ್ರತೆಯನ್ನು ಒದಗಿಸಬಹುದು ಮತ್ತು ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಲಪಡಿಸಬಹುದು.

ಪೋಲ್-ಆ್ಯಪ್ ಎಂದರೇನು: ಪೋಲ್-ಆ್ಯಪ್ ಎಂಬುದು ಕೇರಳ ಪೊಲೀಸರು 2020 ರಲ್ಲಿ ತಮ್ಮ ಮನೆಗಳಿಗೆ ಬೀಗ ಹಾಕಿದ ನಂತರ ಪ್ರಯಾಣಿಸುವವರಿಗೆ ಹೆಚ್ಚಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಿದ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆಯಾಗಿದೆ. ಮನೆಗಳಿಗೆ ಬೀಗ ಹಾಕಿ ದೂರ ಪ್ರಯಾಣಕ್ಕೆ ಹೋಗುವವರು ಅಥವಾ ಮನೆಯಿಂದ ದೂರ ಉಳಿದವರು ಪೋಲ್ಆ್ಯಪ್ ಸೇವೆಯನ್ನು ಬಳಸಬಹುದು.

ಆ್ಯಪ್‌ನಲ್ಲಿರುವ 'ಲಾಕ್ಡ್ ಹೌಸ್' ಆಯ್ಕೆಯನ್ನು ಬಳಸಿಕೊಂಡು ಕುಟುಂಬ ಸದಸ್ಯರು ಕಳ್ಳತನದ ಆತಂಕವಿಲ್ಲದೆ ಮನೆಯಿಂದ ಹೊರಹೋಗಬಹುದು ಎಂದು ಪೊಲೀಸರು ಹೇಳುತ್ತಾರೆ. ಈ ಸೇವೆಯನ್ನು ಬಳಸುವ ಮೂಲಕ, ಮನೆಗೆ ಬೀಗ ಹಾಕಿದ ಎಷ್ಟು ದಿನವಾದರೂ ಮನೆಯು ಕೇರಳ ಪೊಲೀಸರ ಕಣ್ಗಾವಲಿನಲ್ಲಿರುತ್ತದೆ.

ಇದಕ್ಕಾಗಿ, Google Play Store ನಿಂದ Pol-App ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ. ಆ ನಂತರ ಮನೆ ಇರುವ ಜಿಲ್ಲೆ, ಸ್ಥಳ, ಜಮೀನು ಗುರುತು ಇತ್ಯಾದಿ ಮಾಹಿತಿ ನೀಡಿ ಸೇವೆ ಪಡೆಯಬಹುದು.

ಓದಿ: ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಿಸಲು ಬಾರ್ ಕೌನ್ಸಿಲ್ ಬೆಂಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.