ETV Bharat / bharat

ಭಾರಿ ಮಳೆಗೆ ಮನೆ ಕುಸಿದು ಅವಶೇಷಗಳಡಿ ಸಿಲುಕಿದ 7 ಮಂದಿ... ಮೂವರ ರಕ್ಷಣೆ, ಇಬ್ಬರ ಶವ ಪತ್ತೆ

author img

By

Published : Aug 16, 2023, 6:47 AM IST

Updated : Aug 16, 2023, 1:18 PM IST

ಉತ್ತರಾಖಂಡದ ಚಮೋಲಿಯಲ್ಲಿ ಮನೆ ಕುಸಿತವಾಗಿದ್ದು ಸುಮಾರು 7 ಮಂದಿ ಮನೆಯ ಒಳಗೆ ಸಿಲುಕಿದ್ದ ಶಂಕೆ ವ್ಯಕ್ತವಾಗಿದ್ದು, ಸುದ್ದಿ ತಿಳಿದ ತಕ್ಷಣ ಕಾರ್ಯಾಚರಣೆ ಕೈಗೊಂಡ ರಕ್ಷಣಾ ಸಿಬ್ಬಂದಿ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ

House collapses in Uttarakhand's Chamoli  7 persons feared trapped
ಭಾರಿ ಮಳೆಗೆ ಮನೆ ಕುಸಿದು ಅವಶೇಷಗಳಡಿ ಸಿಲುಕಿದ 7 ಮಂದಿ... ಮೂವರ ರಕ್ಷಣೆ..

ಚಮೋಲಿ(ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮನೆಯೊಂದು ಕುಸಿದಿದೆ. ಈ ಪರಿಣಾಮ ಸುಮಾರು 7ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಆ ಮನೆಯೊಳಗೆ ಸಿಲುಕಿದ್ದರು ಎಂದು ವರದಿಯಾಗಿತ್ತು. ಇತ್ತೀಚಿನ ವರದಿ ಪ್ರಕಾರ ಈ ಘಟನೆಯಲ್ಲಿ ಎರಡು ಸಾವಾಗಿದ್ದು, ಮೂವರನ್ನು ರಕ್ಷಣೆ ಮಾಡಲಾಗಿದೆ.

  • #WATCH | Uttarakhand | A house collapsed in Hailang village of Joshimath development block. Seven labourers were present in the house when the incident took place, three of them have been rescued and sent to a hospital for further treatment. Rescue operation is underway.… pic.twitter.com/S1PNeHeLT3

    — ANI UP/Uttarakhand (@ANINewsUP) August 15, 2023 " class="align-text-top noRightClick twitterSection" data=" ">

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆ ಕಾರ್ಯಾಚರಣೆ ಆರಂಭಿಸಿ ಮೂವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಚಮೋಲಿ ಪೊಲೀಸ್ ವರಿಷ್ಠ ಪ್ರಮೇಂದ್ರ ದೋಬೋಲ್ ನೀಡಿರುವ ಹೇಳಿಕೆ ಪ್ರಕಾರ, ಜೋಶಿಮಠ ಡೆವಲಪ್‌ಮೆಂಟ್ ಬ್ಲಾಕ್‌ನ ಹೈಲಾಂಗ್ ಗ್ರಾಮದಲ್ಲಿ ಮನೆ ಕುಸಿದಿದೆ. ಈ ಘಟನೆಯಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ರಾಜ್ಯ ವಿಪತ್ತು ನಿರ್ವಹಣಾ ಪಡೆ ಎಸ್‌ಡಿಆರ್‌ಎಫ್​ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ನಾಲ್ವರು ಅವಶೇಷಗಳಡಿ ಸಿಕ್ಕಿಬಿದ್ದಿರುವ ಆತಂಕವಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ರಕ್ಷಣೆ ಮಾಡಿರುವ ಕಾರ್ಮಿಕರ ಸ್ಥಿತಿ ಸ್ಥಿರವಾಗಿದೆ ಎಂದು ಚಮೋಲಿ ಎಸ್ಪಿ ಪ್ರಮೇಂದ್ರ ದೋವಲ್ ತಿಳಿಸಿದ್ದಾರೆ. ಮೂವರಿಗೂ ಜೋಶಿಮಠದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಸಿಲುಕಿರುವ ಇನ್ನುಳಿದವರಿಗಾಗಿ ಎಸ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಒಂದು ಸಾವಿನ ವರದಿಯಾಗಿದೆ.

ಮೋಹನಚಟ್ಟಿಯಲ್ಲಿ 2 ಮೃತದೇಹಗಳು ಪತ್ತೆ: ಸೋಮವಾರ ಯಮಕೇಶ್ವರ ಅಭಿವೃದ್ಧಿ ಬ್ಲಾಕ್‌ನ ಮೋಹನಚಟ್ಟಿ - ಜೋಗಿಯಾನದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿತ್ತು. ಇಲ್ಲಿ ರೆಸಾರ್ಟ್​​ವೊಂದಕ್ಕೆ ಹಾನಿಯಾಗಿತ್ತು. ಇಲ್ಲಿ ಸೋಮವಾರ ಒಂದು ಹೆಣ್ಣುಮಗುವನ್ನು ರಕ್ಷಣೆ ಮಾಡಲಾಗಿತ್ತು. ಮಗು ರಕ್ಷಣೆ ಬಳಿಕ ಇದೇ ಸ್ಥಳದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಉಳಿದವರ ರಕ್ಷಣೆಗಾಗಿ, 15 ಸದಸ್ಯರ ತಜ್ಞರ ತಂಡ ಕಾರ್ಯಾಚರಣೆ ನಡೆಸುತ್ತಿತ್ತು

  • #WATCH | Shimla (Himachal Pradesh): On 14th August massive landslide occurred in Summer Hill area. Rescue operations by NDRF, SDRF, army, local police, and home guards are underway. SDM Shimla (Urban) Bhanu Gupta says that 12 bodies have been recovered. pic.twitter.com/vfhdhoN8A7

    — ANI (@ANI) August 16, 2023 " class="align-text-top noRightClick twitterSection" data=" ">

ಸ್ವಾತಂತ್ರ್ಯ ದಿನವಾದ ಮಂಗಳವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿತ್ತು. ಇನ್ಸ್‌ಪೆಕ್ಟರ್ ಕವೀಂದ್ರ ಸಜ್ವಾನ್ ನೇತೃತ್ವದಲ್ಲಿ ಎಸ್‌ಡಿಆರ್‌ಎಫ್ ತಂಡ ಸಮರೋಪಾದಿಯಲ್ಲಿ ಸುಧಾರಿತ ಸಲಕರಣೆಗಳೊಂದಿಗೆ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ತಂಡಕ್ಕೆ ಮತ್ತೆರಡು ಮೃತದೇಹಗಳು ಸಿಕ್ಕಿದ್ದು,ಅವುಗಳನ್ನು ಅವಶೇಷಗಳಿಂದ ಮೇಲೆತ್ತಲಾಗಿದೆ. ಇದರಲ್ಲಿ ಒಬ್ಬ ಮಹಿಳೆ ಮತ್ತು ಪುರುಷನ ಕಳೆಬರಹಗಳು ಸಿಕ್ಕಿವೆ. ನಾಪತ್ತೆಯಾದ ಇನ್ನಿತರರ ಹುಡುಕಾಟ ಮುಂದುವರೆದಿದೆ. ಇನ್ನೊಂದೆಡೆ ಹಿಮಾಚಲ ಪ್ರದೇಶದಲ್ಲಿ ವರುಣ ರೌದ್ರಾವತಾರ ಮುಂದುವರೆದಿದೆ. ಕಳೆದ ಎರಡು ದಿನಗಳಲ್ಲಿ ಸುಮಾರು 55ಕ್ಕೂ ಹೆಚ್ಚು ಜನರು ಜಲ ಸಮಾದಿಯಾಗಿದ್ದಾರೆ.

ಇದನ್ನು ಓದಿ: Himachal Pradesh: ಹಿಮಾಚಲದಲ್ಲಿ ಮತ್ತೆ ಭೂಕುಸಿತ; 5 ಮನೆಗಳು ನೆಲಸಮ, ಇಬ್ಬರು ಸಾವು

Last Updated : Aug 16, 2023, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.