ತರ್ನ್‌ತರಣ್ (ಪಂಜಾಬ್) : ಪಂಜಾಬ್ನ ತರ್ನ್‌ತರಣ್ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಕುಟುಂಬದವರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ಯುವತಿಯನ್ನು ಆಕೆ ಸಹೋದರ ಹಾಗೂ ಸಂಬಂಧಿಕರು ಕೂಡಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ದೇನಾ ಎಂಬಾಕೆಯೇ ಕೊಲೆಯಾದ ನತದೃಷ್ಟೆ. ಕಳೆದ 15 ದಿನಗಳ ಹಿಂದೆಯಷ್ಟೇ ರಾಜನ್ ಜೇಸನ್ ಅಲಿಯಾಸ್ ಬಿಲ್ಲಾ ಎಂಬಾತನನ್ನು ಈಕೆ ಪ್ರೀತಿಸಿ ಮದುವೆಯಾಗಿದ್ದಳು. ಇದೇ ಕಾರಣದಿಂದ ಮನೆಗೆ ಬಂದ ಸಹೋದರ ಮತ್ತು ಇತರ ಸಂಬಂಧಿಕರು ಆಕೆಯನ್ನು ಹೊರಗೆಳೆದು ಹರಿತವಾದ ಆಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಮ್ಮ ಪ್ರೇಮ ವಿವಾಹದಿಂದ ದೇನಾ ಕುಟುಂಬದವರು ಕುಪಿತಗೊಂಡಿದ್ದರು. ಅಲ್ಲದೇ, ಮದುವೆಯಾದ ದಿನದಿಂದಲೂ ಬೆದರಿಕೆ ಹಾಕುತ್ತಿದ್ದರು ಎಂದು ಪತಿ ರಾಜನ್ ಹೇಳಿದ್ದಾನೆ. ಈತನ ಹೇಳಿಕೆ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮನೆಗೆ ನುಗ್ಗಿ ಸುತ್ತಿಗೆ-ಚಾಕುವಿನಿಂದ ದಾಳಿ: ಪ್ರೇಯಸಿ, ಆಕೆಯ ತಮ್ಮನ ಕೊಲೆ, ತಾಯಿ ಸ್ಥಿತಿ ಗಂಭೀರ