ಧುಪ್ಗುರಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 17ರಂದು 5ನೇ ಹಂತದ ಮತದಾನ ನಡೆಯಲಿದ್ದು, ಅದಕ್ಕಾಗಿ ಕೇಂದ್ರ ಸಚಿವರು ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿನ ಧುಪ್ಗುರಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಮತಾ ಬ್ಯಾನರ್ಜಿ ಭಾಷಣದಲ್ಲಿ ಬಂಗಾಳದ ಅಭಿವೃದ್ಧಿಗಿಂತಲೂ ಅಮಿತ್ ಶಾ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಇದೀಗ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಹೇಳ್ತಿದ್ದಾರೆ. ಬಂಗಾಳದ ಜನರು ಕೇಳಿದರೆ ಖಂಡಿತವಾಗಿ ನಾನು ರಾಜೀನಾಮೆ ನೀಡಲು ಸಿದ್ಧ. ಆದರೆ, ಮೇ. 2ರಂದು ರಾಜೀನಾಮೆ ನೀಡಲು ನೀವು ಸಿದ್ಧರಾಗಿರಿ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ವಿನಾಕಾರಣ ಬಿಜೆಪಿ ನಿಂದನೆ ಮಾಡ್ತಿದ್ದು, ಬಿಜೆಪಿ ನಿಮ್ಮ ವಿರುದ್ಧ ಸ್ಪರ್ಧಿಸುತ್ತಿದೆ ಎಂದು ನೀವು ತಪ್ಪಾಗಿ ಭಾವಿಸಿದ್ದೀರಿ. ಬಂಗಾಳದ ತಾಯಂದಿರು, ಸಹೋದರಿಯರಯ ಗೂರ್ಖಾ ಸಮುದಾಯ, ಚಹಾ ಕಾರ್ಮಿಕರು ನಿಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: 'ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯ': ಮಹಾರಾಷ್ಟ್ರದಲ್ಲಿ ಬೋರ್ಡ್ ಪರೀಕ್ಷೆ ಮುಂದೂಡಿಕೆ!
ಪೂಚ್ ಬಿಹಾರ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದವರ ಬಗ್ಗೆ ಮಮತಾ ಬ್ಯಾನರ್ಜಿ ಮಾತನಾಡ್ತಿದ್ದಾರೆ. ಆದರೆ, ಸಾವನ್ನಪ್ಪಿರುವ ಐದನೇ ವ್ಯಕ್ತಿ ಬಗ್ಗೆ ಮಾತನಾಡದಿರಲು ಕಾರಣವೇನು!? ವೋಟ್ ಮಾಡಲು ತೆರಳಿದ್ದ ವೇಳೆ ಆನಂದ್ ಬರ್ಮನ್ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಆತ ರಾಜ್‌ಬಾಂಗ್ಶಿ ಸಮುದಾಯಕ್ಕೆ ಸೇರಿದವನಾಗಿದ್ದರಿಂದ ಮಮತಾ ಮಾತನಾಡಲು ಹಿಂದೇಟು ಹಾಕ್ತಿದ್ದಾರೆ ಎಂದರು. ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 8 ಹಂತದಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ 4 ಹಂತ ಮುಕ್ತಾಯಗೊಂಡಿವೆ.