ಹರಿದ್ವಾರ(ಉತ್ತರಾಖಂಡ್): ಶಂಕರಾಚಾರ್ಯ ಪರಿಷತ್ತಿನ ಅಧ್ಯಕ್ಷ ಸ್ವಾಮಿ ಆನಂದ್ ಸ್ವರೂಪ್ ಮಹಾರಾಜ್ ಮತ್ತೊಂದು ವಿವಾದದ ಬಾಂಬ್ ಸಿಡಿಸಿದ್ದು, ಹಿಮಾಲಯದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.
ಹರಿದ್ವಾರದ ಹಂಭಾವಿ ಧಾಮದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯುವ ಮಂಡಳಿ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಮದನ್ ಮೋಹನ್ ಮಾಳವೀಯ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಆಧಾರದ ಮೇಲೆ ಹಿಮಾಲಯದಲ್ಲಿ ಹಿಂದೂಯೇತರರ ಪ್ರವೇಶ ತಡೆಯುವ ಸುಗ್ರೀವಾಜ್ಞೆಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಸುಗ್ರೀವಾಜ್ಞೆ ಜಾರಿಗೊಳಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಉತ್ತರಾಖಂಡದ ಹಿಂದೂ ಯುವಕರು ಇಂದು ವಲಸೆ ಹೋಗಬೇಕಾಗಿದೆ. ಸನಾತನ ಧರ್ಮ ಮತ್ತು ದೇವಸ್ಥಾನಗಳ ವ್ಯವಹಾರದ ಮೇಲೆ ಹಿಂದೂಗಳಿಗೆ ಸಂಪೂರ್ಣ ಹಕ್ಕು ಹೊಂದಿದಾಗ ವಲಸೆ ನಿಲ್ಲುತ್ತದೆ ಎಂದಿದ್ದಾರೆ.