ETV Bharat / bharat

ಸಪ್ತಪದಿ ತುಳಿಯದ ಹಿಂದೂ ಮದುವೆ ಮಾನ್ಯವಲ್ಲ; ಅಲಹಾಬಾದ್​ ಹೈಕೋರ್ಟ್

ಮದುವೆ ಸಂಪ್ರದಾಯ ಶಾಸ್ತ್ರಗಳಿಂದ ಕೂಡಿದೆ. ಇವುಗಳನ್ನು ಅನುಸರಿಸದೇ ಇದ್ದರೆ ಅದು ಕಾನೂನಿನ ಕಣ್ಣಿನ ಪ್ರಕಾರ ಮದುವೆಯಲ್ಲ. ಹಿಂದೂ ಕಾನೂನು ಪ್ರಕಾರ ಮದುವೆಯಲ್ಲಿ ಸಪ್ತಪದಿ ಸಮಾರಂಭ ನಡೆಸುವುದು ಅಗತ್ಯವಾಗಿದೆ

Hindu marriage not valid without saptapadi Allahabad High Court

author img

By ETV Bharat Karnataka Team

Published : Oct 5, 2023, 2:10 PM IST

ಪ್ರಯಾಗ್​ರಾಜ್​: ಸಪ್ತಪದಿ ಮತ್ತು ಇತರ ಸಂಪ್ರದಾಯ ಸಮಾರಂಭ ನಡೆಯದೇ ನಡೆಯುವ ಹಿಂದೂ ಮದುವೆಗಳು ಮಾನ್ಯವಲ್ಲ ಎಂದು ಅಲಹಬಾದ್​ ಹೈಕೋರ್ಟ್​​ ತಿಳಿಸಿದೆ. ತನ್ನಿಂದ ದೂರಾದ ಹೆಂಡತಿ ವಿಚ್ಛೇದನ ನೀಡದೇ ಎರಡನೇ ಮದುವೆಯಾಗಿದ್ದಾಳೆ ಎಂದು ವ್ಯಕ್ತಿ ಸಲ್ಲಿಕೆ ಮಾಡಿದ ಅರ್ಜಿ ವಜಾ ಮಾಡಿ ಅಲಹಾಬಾದ್​ ಕೋರ್ಟ್​ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ಸ್ಮೃತಿ ಸಿಂಗ್​ ಅರ್ಜಿ ಪ್ರಕರಣದಲ್ಲಿ ನ್ಯಾ ಸಂಜಯ್​ ಕುಮಾರ್​ ಸಿಂಗ್​​ ಪೀಠ ವಿಚಾರಣೆ ನಡೆಸಿದ್ದು, ಶಾಸ್ತ್ರೋಕ್ತ ಪದವು ಮದುವೆ ಜತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಸರಿಯಾದ ಮದುವೆ ಆಚರಣೆ ಪದ್ಧತಿಯನ್ನು ಹೊಂದಿರದೇ ಹೋದರು ಇದು ಶಾಸ್ತ್ರೋಕ್ತ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಮದುವೆ ಸಂಪ್ರದಾಯ ಶಾಸ್ತ್ರಗಳಿಂದ ಕೂಡಿದೆ. ಇವುಗಳನ್ನು ಅನುಸರಿಸದೇ ಇದ್ದರೆ ಅದು ಕಾನೂನಿನ ಕಣ್ಣಿನ ಪ್ರಕಾರ ಮದುವೆಯಲ್ಲ.. ಹಿಂದೂ ಕಾನೂನು ಪ್ರಕಾರ ಮದುವೆಯಲ್ಲಿ ಸಪ್ತಪದಿ ಸಮಾರಂಭ ನಡೆಸುವುದು ಅಗತ್ಯವಾಗಿದೆ. ಇದನ್ನು ಮಾನ್ಯ ಮದುವೆ ಎಂದು ಪರಿಗಣಿಸಲಾಗುವುದು, ಸಪ್ತಪದಿ ಸಾಕ್ಷಿ ಇಲ್ಲದೇ ಹೋದಲ್ಲಿ ಈ ಮದುವೆ ಮಾನ್ಯತೆ ಹೊಂದುವುದಿಲ್ಲ ಎಂದು ಕೋರ್ಟ್​ ಹೇಳಿದೆ.

1955ರ ಹಿಂದೂ ಮದುವೆ ಕಾಯ್ದೆ ಸೆಕ್ಷನ್​ 7ರಲ್ಲಿ ಹಿಂದೂ ಮದುವೆಯಲ್ಲಿ ಶಾಸ್ತ್ರಗಳನ್ನು ಮತ್ತು ಸಮಾರಂಭಗಳನ್ನು ನಡೆಸುವ ಕುರಿತು ತಿಳಿಸಲಾಗಿದೆ. ಇಂತಹ ಸಂಪ್ರದಾಯದಲ್ಲಿ ಸಪ್ತಪದಿ ಸಮಾರಂಭವೂ ಬರುತ್ತದೆ. ಈ ಏಳು ಹೆಜ್ಜೆಯ ಸಂಪ್ರದಾಯ ನಡೆದಾಗ ಅದು ಮದುವೆ ಪೂರ್ಣಗೊಂಡಂತೆ ಎಂದಿದ್ದಾರೆ.

ಕೋರ್ಟ್ ಮುಂದೆ ನೀಡಿದ ಹೇಳಿಕೆಗಳಲ್ಲಿ ಸಪ್ತಪದಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಹೀಗಾಗಿ ಎರಡನೆಯ ಮದುವೆಯ ಆರೋಪವು ದೃಢೀಕರಿಸುವ ಆರೋಪದಲ್ಲಿ ಹುರುಳಿಲ್ಲ. ಅರ್ಜಿದಾರರ ವಿರುದ್ಧ ಯಾವುದೇ ಅಪರಾಧ ಕಾಣಿಸುತ್ತಿಲ್ಲ ಎಂದು ತಿಳಿಸಿದೆ

ಏನಿದು ಪ್ರಕರಣ?: 2017ರಲ್ಲಿ ಸ್ಮೃತಿ ಸಿಂಗ್​ ಸತ್ಯಂ ಸಿಂಗ್​ ಅವರನ್ನು ಮದುವೆಯಾಗಿದ್ದರು. ಇವರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟ ಹಿನ್ನೆಲೆಯಲ್ಲಿ ಆಕೆ ಗಂಡನ ಮನೆ ತೊರೆದು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು.

ಬಳಿಕ ತನಿಖೆಯಲ್ಲಿ ಪೊಲೀಸರು ಗಂಡ ಮತ್ತು ಆತನ ಮನೆ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದಕ್ಕೆ ಅರ್ಜಿದಾರ ಜೀವನಾಂಶ ನೀಡಬೇಕು ಎಂದು ಮಿರ್ಜಾಪುರ್​ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 11, 2021ರಂದು ಪತ್ನಿ ಮರು ಮದುವೆಯಾಗುವವರೆಗೆ 4 ಸಾವಿರ ಜೀವನಾಂಶವನ್ನು ನೀಡಬೇಕು ಎಂದು ಆದೇಶ ನೀಡಿತ್ತು.

ಇದನ್ನೂ ಓದಿ: ಐವಿಎಫ್​ ಚಿಕಿತ್ಸೆ: ಜೀವಾವಧಿ ಅಪರಾಧಿಗೆ 15 ದಿನಗಳ ಪೆರೋಲ್​ ನೀಡಿದ ಕೇರಳ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.