ಶಿಮ್ಲಾ (ಹಿಮಾಚಲ ಪ್ರದೇಶ): ನವೆಂಬರ್ 12 ರಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮತದಾನ ಆರಂಭವಾಗಲು ಇನ್ನೇನು ಕೆಲವೇ ಗಂಟೆ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಪ್ರತಿಪಕ್ಷ ಕಾಂಗ್ರೆಸ್ ಅನ್ನು ಮತ್ತೊಮ್ಮೆ ಸೋಲಿಸಿ ಅಧಿಕಾರಕ್ಕೇರಲು ಹರಸಾಹಸ ಪಡುತ್ತಿದೆ. ಸೋಲುವ ಚುನಾವಣೆಯನ್ನೂ ಗೆಲ್ಲುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಂಡಿರುವ ಬಿಜೆಪಿಗೆ ಈ ಚುನಾವಣೆ ಅಷ್ಟೊಂದು ಸುಲಭವಲ್ಲ ಎನ್ನಲಾಗಿದೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿರುಸಿನ ಪ್ರವಾಸದ ಮೂಲಕ ಪಕ್ಷಕ್ಕೆ ಬಲ ತುಂಬುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆ ಮತ್ತು ಟಿಕೆಟ್ ಹಂಚಿಕೆಯ ಬಗ್ಗೆ ತೀವ್ರ ಅಸಮಾಧಾನವನ್ನು ಗಮನಿಸಿದ ಪ್ರಧಾನಿ ಮೋದಿ, ಪಕ್ಷಕ್ಕಾಗಬಹುದಾದ ಹಾನಿಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.
ಸೋಲನ್‌ನಲ್ಲಿ ಮಾಡಿದ ಭಾಷಣದಲ್ಲಿ, ರಾಜ್ಯದ ಜನ ಅಭ್ಯರ್ಥಿಯನ್ನು ನಿರ್ಲಕ್ಷಿಸಬೇಕು ಮತ್ತು ಕಮಲದ ಚುನಾವಣಾ ಚಿಹ್ನೆಯನ್ನು ಮಾತ್ರ ನೆನಪಿಟ್ಟುಕೊಳ್ಳಬೇಕು. ಮೋದಿಜಿ ನಿಮಗಾಗಿ ಇಲ್ಲಿಗೆ ಬಂದಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದು ಗಮನಾರ್ಹ. ಈ ಸಮರ್ಥನೆಯು ಅಸಹಜವಲ್ಲವಾದರೂ, 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪಕ್ಷವು ಪ್ರಧಾನಿ ಮೋದಿಯವರ ವರ್ಚಸ್ಸಿನ ಮೇಲೆ ಹೆಚ್ಚು ಅವಲಂಬಿತವಾಗಿದೆ.
ತಮ್ಮ ಅಭ್ಯರ್ಥಿಗಳ ಗುರುತನ್ನು ನಿರ್ಲಕ್ಷಿಸಿ ಮತ್ತು ತನಗೆ ಮತ್ತು ಚುನಾವಣಾ ಚಿಹ್ನೆಗೆ ಮತ ನೀಡುವಂತೆ ಮತದಾರರನ್ನು ಕೇಳುವ ಈ ಅಸಾಮಾನ್ಯ ಕ್ರಮವನ್ನು ಪ್ರಧಾನಿ ಏಕೆ ತೆಗೆದುಕೊಳ್ಳಬೇಕಾಯಿತು? ಕೆಲವು ಸಮೀಕ್ಷೆಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಾನ ಪೈಪೋಟಿಯಿದೆ ಎಂದು ತೋರಿಸಿದ್ದು ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯದ ವಿಷಯಗಳು ಬಿಜೆಪಿಗೆ ಆತಂಕ ಮೂಡಿಸಿವೆ ಎನ್ನಲಾಗಿದೆ.
ಬಹುಮಟ್ಟಿಗೆ ಮೇಲ್ಜಾತಿ ಸಮುದಾಯದ ರಾಜ್ಯವಾಗಿರುವುದರಿಂದ, ಪಕ್ಷದ ನಾಯಕತ್ವವು ಹಿಂದೂ ನೆಲೆಯನ್ನು ಕ್ರೋಢೀಕರಿಸುತ್ತದೆ ಎಂದು ಆಶಿಸುವುದಾಗಿ ಘೋಷಣೆಗಳನ್ನು ಮಾಡಿದೆ. ಉತ್ತರಾಖಂಡ ರಾಜ್ಯದಂತೆಯೇ, ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದೆ.
ಆದರೆ, ಇಲ್ಲಿ ಏಕರೂಪ ನಾಗರಿಕ ಸಂಹಿತೆ ಅಂಥ ದೊಡ್ಡ ವಿಷಯವಲ್ಲ. ಇನ್ನು ಪಿಎಂ ಮೋದಿ ಅವರು ಹಿಂದೂ ಧರ್ಮದ ರಕ್ಷಕ ಎಂದು ಬಿಂಬಿಸಿಕೊಳ್ಳಲು ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಶಿಮ್ಲಾದಲ್ಲಿ ಅಸಮಾಧಾನದ ನಿರೀಕ್ಷೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಣೆ ಮತ್ತು ವಿರೋಧ ಪಕ್ಷಗಳಲ್ಲಿ ಉತ್ಸಾಹದ ಹೊರತಾಗಿಯೂ, ಬಿಜೆಪಿಯು ಅಸ್ತಿತ್ವದಲ್ಲಿರುವ ಪೂರ್ವನಿದರ್ಶನಗಳು ಮತ್ತು ಕೆಲವು ಸಮೀಕ್ಷೆಗಾರರ ನಿರೀಕ್ಷೆಗಳನ್ನು ಸುಳ್ಳು ಮಾಡಬಹುದು.
ಇದನ್ನು ಓದಿ: ಸಂಕಷ್ಟದಲ್ಲಿ ಪ್ರಜಾಪ್ರಭುತ್ವ.. ಅಪಾಯಕ್ಕೆ ಸಿಲುಕಿರುವ ಗಣತಂತ್ರ ಉಳಿಸೋದು ಹೇಗೆ?