ETV Bharat / bharat

ಕೊರೊನಾ ಚಿಕಿತ್ಸೆಯ ₹16 ಲಕ್ಷ ಪಾವತಿಸಲು ದೆಹಲಿ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ - ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ

ಜಿಲ್ಲಾ ನ್ಯಾಯಾಧೀಶರು ಕೊರೊನಾಗೆ ತುತ್ತಾಗಿ ಪಡೆದ ಚಿಕಿತ್ಸೆಯ 24 ಲಕ್ಷ ರೂಪಾಯಿ ವೆಚ್ಚದಲ್ಲಿ 7 ಲಕ್ಷವನ್ನು ಮಾತ್ರ ದೆಹಲಿ ಸರ್ಕಾರ ಪಾವತಿಸಿದೆ. ಉಳಿದ 16 ಲಕ್ಷ ರೂಪಾಯಿಯನ್ನು ತಕ್ಷಣವೇ ಅರ್ಜಿದಾರರಿಗೆ ಕಟ್ಟಬೇಕು ಎಂದು ದೆಹಲಿ ಹೈಕೋರ್ಟ್​ ಸರ್ಕಾರಕ್ಕೆ ಆದೇಶಿಸಿದೆ.

high-court-directed-delhi-government-to-pay-judge-money
ದೆಹಲಿ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ
author img

By

Published : Nov 23, 2022, 8:02 PM IST

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ವೇಳೆ ಜಿಲ್ಲಾ ನ್ಯಾಯಾಧೀಶರು ಚಿಕಿತ್ಸೆ ವೆಚ್ಚವಾಗಿ 24 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಅದರಲ್ಲಿ ಸರ್ಕಾರ ನಿಯಮದ ಕಾರಣ ನೀಡಿ 7 ಲಕ್ಷ ರೂಪಾಯಿ ಮಾತ್ರ ಪಾವತಿಸಿದೆ. ಉಳಿದ 16 ಲಕ್ಷ ರೂಪಾಯಿಯನ್ನು ತಕ್ಷಣವೇ ಅರ್ಜಿದಾರರಿಗೆ ನೀಡಬೇಕು ಎಂದು ದೆಹಲಿ ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ.

ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರು (ಎಡಿಜೆ) ಚಿಕಿತ್ಸೆ ಪಡೆದ ಖಾಸಗಿ ಆಸ್ಪತ್ರೆಯು ಸರ್ಕಾರದ ನಿಯಮಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಏಕೆ ವಿಧಿಸಿದೆ ಎಂಬುದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಜಿಲ್ಲಾ ಜಡ್ಜ್​​ಗೆ 16,93,880 ರೂ.ಗಳ ಶುಲ್ಕವನ್ನು ಪಾವತಿಸುವಂತೆ ಆದೇಶಿಸಿದೆ.

ಪ್ರಕರಣವೇನು?: 2021 ರ ಏಪ್ರಿಲ್-ಮೇ ಅವಧಿಯಲ್ಲಿ ಕೊರೊನಾ ಎರಡನೇ ಅಲೆ ಅಧಿಕವಾಗಿದ್ದಾಗ ಜನರು ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಡುತ್ತಿದ್ದರು. ಈ ವೇಳೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದಿನೇಶ್​ಕುಮಾರ್​ ಕೊರೊನಾಗೆ ತುತ್ತಾಗಿ ಏಪ್ರಿಲ್ 22 ಮತ್ತು ಜೂನ್ 7, 2021 ರ ನಡುವೆ ಮೂರು ವಾರ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದರು.

ಬಳಿಕ ಅವರು ಆಸ್ಪತ್ರೆಗೆ ಚಿಕಿತ್ಸೆಯ ವೆಚ್ಚವಾಗಿ 24,02,380 ರೂಪಾಯಿ ಪಾವತಿಸಬೇಕಿತ್ತು. ಇದನ್ನು ಸರ್ಕಾರವೇ ಭರಿಸಬೇಕಾದ ನಿಯಮವಿದ್ದು, ಆಸ್ಪತ್ರೆ ನಿಗದಿತ ಶುಲ್ಕಕ್ಕಿಂತಲೂ ದುಪ್ಪಟ್ಟು ವೆಚ್ಚ ವಿಧಿಸಿದೆ ಎಂದು ರೋಗಿಯ ಚಿಕಿತ್ಸೆಗಾಗಿ ಕೇವಲ 7,08,500 ರೂಪಾಯಿ ಮಾತ್ರ ಪಾವತಿ ಮಾಡಿತ್ತು. ಉಳಿದ 16 ಲಕ್ಷಕ್ಕೂ ಅಧಿಕ ಮೊತ್ತವನ್ನು ಜಿಲ್ಲಾ ನ್ಯಾಯಾಧೀಶರೇ ತಮ್ಮ ಸ್ವತಃ ಹಣದಲ್ಲಿ ಬಿಲ್​ ಪಾವತಿಸಿದ್ದರು. ಬಳಿಕ ಇದರ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಪೀಠ, ಕೊರೊನಾ ಹಾವಳಿ ಹೆಚ್ಚಿದ್ದ ವೇಳೆ ನ್ಯಾಯಾಧೀಶರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದನ್ನು ಸರ್ಕಾರ ನಿಯಮಾನುಸಾರ ಪಾವತಿ ಮಾಡಬೇಕು. ಖಾಸಗಿ ಆಸ್ಪತ್ರೆ ಅಧಿಕ ಮೊತ್ತ ವಿಧಿಸಿದೆ ಎಂದು ನುಣುಚಿಕೊಳ್ಳಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಸರ್ಕಾರವೇ ಹಣ ಪಾವತಿಸಬೇಕು ಎಂದು ಕೋರ್ಟ್​ ಅಭಿಪ್ರಾಯಪಟ್ಟಿತು.

ನ್ಯಾಯಾಂಗ ವ್ಯವಸ್ಥೆಯಲ್ಲಿರುವ ನ್ಯಾಯಾಧೀಶರೊಬ್ಬರು ತಾವು ದುಡಿದ ಹಣದಲ್ಲಿ ಚಿಕಿತ್ಸಾ ಬಿಲ್​ ಪಾವತಿಸಿದ್ದಾರೆ. ಅಧಿಕ ಚಿಕಿತ್ಸಾ ಮೊತ್ತ ವಿಧಿಸಿದಿ ಆಸ್ಪತ್ರೆಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ಹಣವನ್ನು ಬೇಕಾದರೆ ಅಲ್ಲಿಂದಲೇ ವಸೂಲಿ ಮಾಡಿ ಎಂದು ಕೋರ್ಟ್​ ತೀರ್ಪಿನಲ್ಲಿ ಹೇಳಿದೆ.

ಓದಿ: ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡಮಾನ ಇಟ್ಟು ವಂಚನೆ: ಮೂವರ ಗ್ಯಾಂಗ್​ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.