ETV Bharat / bharat

ಬೆಂಗಳೂರು ಮಳೆ.. ಅತ್ಯಧಿಕ ಭ್ರಷ್ಟಾಚಾರ, ಕೆಟ್ಟ ಆಡಳಿತ.. ಸರ್ಕಾರದ ವಿರುದ್ಧ ಮೋಹನ್​ದಾಸ್​ ಪೈ ಗರಂ - ಅತಿ ಹೆಚ್ಚು ಭ್ರಷ್ಟಾಚಾರ ಮತ್ತು ನಗರ ಸುಧಾರಣೆಗಳ ಕೊರತೆ

ಬೆಂಗಳೂರಿನ ಕೆಲವು ಭಾಗಗಳಲ್ಲಿ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಸಿಲಿಕಾನ್​ ಸಿಟಿ ಕೆರೆಯಂತಾಗಿ ಪರಿಣಮಿಸಿದೆ. ಈ ಪರಿಸ್ಥಿತಿ ನೋಡಿ ಪೈ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸರ್ಕಾರದ ವಿರುದ್ಧ ಮೋಹನ್​ದಾಸ್​ ಪೈ ಗರಂ
ಸರ್ಕಾರದ ವಿರುದ್ಧ ಮೋಹನ್​ದಾಸ್​ ಪೈ ಗರಂ
author img

By

Published : Sep 7, 2022, 10:56 PM IST

ಬೆಂಗಳೂರು: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾಗಿರುವ ಅನಾಹುತಕ್ಕೆ ಕೆಟ್ಟ ಆಡಳಿತ, ಅತಿ ಹೆಚ್ಚು ಭ್ರಷ್ಟಾಚಾರ ಮತ್ತು ನಗರ ಸುಧಾರಣೆಗಳ ಕೊರತೆ ಕಾರಣ ಎಂದು ಐಟಿ ದಿಗ್ಗಜ ಹಾಗೂ ಉದ್ಯಮಿ ಮೋಹನ್​ ದಾಸ್​​​ ಪೈ ಆರೋಪಿಸಿದ್ದಾರೆ.

ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಇಬ್ಬರೂ ಕೂಡಿಕೊಂಡು ಬೆಂಗಳೂರು ನಾಗರಿಕರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಐಟಿ ಪ್ರಮುಖ ಹಾಗೂ ಇನ್ಫೋಸಿಸ್ ಲಿಮಿಟೆಡ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಆಗಿದ್ದ ಮೋಹನ್​ ದಾಸ್​ ಪೈ ಗರಂ ಆಗಿದ್ದಾರೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಸಿಲಿಕಾನ್​ ಸಿಟಿ ಕೆರೆಯಂತಾಗಿ ಪರಿಣಮಿಸಿದೆ. ಈ ಪರಿಸ್ಥಿತಿ ನೋಡಿ ಪೈ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇತ್ತೀಚೆಗಷ್ಟೇ ಅವರು ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಸಿಎಂ ಬೊಮ್ಮಾಯಿ ಸಹ ಪ್ರತಿಕ್ರಿಯೆ ನೀಡಿದ್ದರು. ಇದನ್ನು ಓದಿ:ರಾಜಧಾನಿಯಲ್ಲಿ ರಣ ಮಳೆ: ಕೆರೆಗಳು ಫುಲ್; ಮುಂದುವರಿದ ಜನರ ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.