ಜೈಪುರ (ರಾಜಸ್ಥಾನ): ಭಾರತದ ಭೂ ಪ್ರದೇಶದೊಳಗೆ ಪಾಕಿಸ್ತಾನವು ಡ್ರೋನ್ ಮೂಲಕ ಸುಮಾರು 15 ಕೋಟಿ ಮೌಲ್ಯದ ಹೆರಾಯಿನ್ ಎಸೆದ ಪ್ರಕರಣ ಸಂಬಂಧ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ನಾಲ್ವರು ಕಳ್ಳಸಾಗಣಿಕೆದಾರರನ್ನು ಬಂಧಿಸಿ, ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಭಾರತ-ಪಾಕ್ ಗಡಿಯಲ್ಲಿ ಮಂಗಳವಾರ ಅಂದಾಜು 3.5 ಕೆಜಿ ಹೆರಾಯಿನ್ನನ್ನು ದ್ರೋನ್ ಮೂಲಕ ಭಾರತದ ಗಡಿಯೊಳಗೆ ಬಿಡಲಾಗಿತ್ತು. ಈ ಹೆರಾಯಿನ್ನನ್ನು ಬಂಡಲ್ನಲ್ಲಿ ಸುತ್ತಲಾಗಿತ್ತು. ಬಂಧಿತ ನಾಲ್ವರು ಆರೋಪಿಗಳು ಪಂಜಾಬ್ ನಿವಾಸಿಗಳಾಗಿದ್ದಾರೆ. ಅವರನ್ನು ಬಿಎಸ್ಎಫ್ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರದಲ್ಲೇ ಎರಡನೇ ಬಾರಿಗೆ ಭಾರಿ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ 35 ಕೋಟಿ ರೂ. ಮೌಲ್ಯದ ಹೆರಾಯಿನ್ನೊಂದಿಗೆ ಐವರು ಆರೋಪಿಗಳನ್ನು ಬಿಎಸ್ಎಪ್ ಸಿಬ್ಬಂದಿ ಜಪ್ತಿ ಮಾಡಿದ್ದರು. ಆಗ ಕೂಡ ಪಾಕಿಸ್ತಾನದ ಡ್ರೋನ್ ಮೂಲಕವೇ ಭಾರತದ ಗಡಿಯೊಳಗೆ ಹೆರಾಯಿನ್ ಎಸೆಯಲಾಗಿತ್ತು.
ಇದನ್ನೂ ಓದಿ: ಪ್ರವಾದಿಗೆ ಅಪಮಾನ: ಅಲ್ ಖೈದಾದಿಂದ ಭಾರತದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಬೆದರಿಕೆ!