ETV Bharat / bharat

Heavy Rain.. ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ.. ಭೂಕುಸಿತದಿಂದ ನೂರಾರು ರಸ್ತೆ ಬಂದ್​.. ಸಾವಿನ ಸಂಖ್ಯೆ 48ಕ್ಕೆ ಏರಿಕೆ - ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ 2 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಾಕಷ್ಟು ಹಾನಿಯಾಗಿದೆ. ಈ ಬಾರಿಯ ಸುರಿದ ಮಳೆಗೆ ಸುಮಾರು 48 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ರಸ್ತೆಗಳು ಬಂದ್ ಆಗಿವೆ. ₹ 358 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ
ಹಿಮಾಚಲ ಪ್ರದೇಶದಲ್ಲಿ ಭೂಕುಸಿತ
author img

By

Published : Jul 9, 2023, 7:22 PM IST

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ಸಂಕಷ್ಟ ತಂದಿದೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ನದಿಗಳು ಮತ್ತು ಚರಂಡಿಗಳು ಉಗ್ರ ರೂಪವನ್ನು ತಾಳಿವೆ. ಪರ್ವತಗಳಲ್ಲಿ ಭೂಕುಸಿತ ಮುಂದುವರಿದಿದೆ. ಪರಿಣಾಮ ನೂರಾರು ರಸ್ತೆಗಳು ಬಂದ್ ಆಗಿವೆ. ಇದೇ ವೇಳೆ ಈ ಮಳೆ ಹಲವರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ರಾಜ್ಯದಲ್ಲಿ ಇದುವರೆಗೆ 48 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಇಡೀ ₹ 358 ಕೋಟಿ ನಷ್ಟವಾಗಿದೆ. ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 10 ಮತ್ತು 11ರಂದು ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಶಿಮ್ಲಾದಲ್ಲಿ ಮನೆ ಕುಸಿದು ಮೂವರು ಸಾವು: ಭಾರಿ ಮಳೆಯಿಂದಾಗಿ ಶಿಮ್ಲಾ ಜಿಲ್ಲೆಯ ಕೋಟ್‌ಗಢ ಉಪ-ತಹಸಿಲ್‌ನ ಪನೇವಾಲಿ ಗ್ರಾಮದಲ್ಲಿ ಮನೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಪರ್ವತದ ಮೇಲೆ ಭೂಕುಸಿತದಿಂದಾಗಿ ಅದರ ಅವಶೇಷಗಳು ಮನೆಯೊಂದರ ಮೇಲೆ ಬಿದ್ದಿವೆ. ಮನೆ ಹಳೆಯದಾಗಿರುವುದರಿಂದ ಅವಶೇಷಗಳು ಬಿದ್ದ ತಕ್ಷಣ ಸಂಪೂರ್ಣ ಕುಸಿದಿದೆ. ಆ ವೇಳೆ ಮನೆಯಲ್ಲಿ 5 ಮಂದಿ ಇದ್ದರು ಎಂಬುದು ತಿಳಿದುಬಂದಿದೆ. ಈ ವೇಳೆ ಅವರಿಗೆ ಹೊರಬರಲು ಅವಕಾಶ ಸಿಗದೇ ಇಡೀ ಕುಟುಂಬವೇ ಅವಶೇಷಗಳಡಿ ಸಿಲುಕಿದೆ. ಅವಘಡದಲ್ಲಿ ಪತಿ-ಪತ್ನಿ ಹಾಗೂ ಮಗು ಸಾವನ್ನಪ್ಪಿದ್ದಾರೆ. ಉಳಿದ 2 ಜನರು ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಂಡಿಯಲ್ಲಿ ಬಹುತೇಕ ರಸ್ತೆಗಳು ಅಸ್ತವ್ಯಸ್ತ : ಇಂದು ರಾಜ್ಯಾದ್ಯಂತ ರಸ್ತೆಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿವೆ. ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಂಡಿ ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳಿಗೆ ಅಡಚಣೆಯಾಗಿದೆ. ಮಂಡಿ ಜಿಲ್ಲೆಯಲ್ಲಿ 172, ಶಿಮ್ಲಾ ಜಿಲ್ಲೆಯಲ್ಲಿ 122, ಸಿರ್ಮೌರ್‌ನಲ್ಲಿ 48, ಕುಲುವಿನಲ್ಲಿ 120, ಬಿಲಾಸ್‌ಪುರದಲ್ಲಿ 8, ಸೋಲನ್‌ನಲ್ಲಿ 82 ರಸ್ತೆಗಳನ್ನು ಮುಚ್ಚಲಾಗಿದೆ.

ಶಾಲಾ-ಕಾಲೇಜು ಮುಚ್ಚಲು ಆದೇಶ: ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಇಂದು ರೆಡ್ ಅಲರ್ಟ್ ಘೋಷಿಸಿದೆ. ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ರಾಜ್ಯಾದ್ಯಂತ ನದಿಗಳು ಮತ್ತು ಚರಂಡಿಗಳು ಉಕ್ಕಿ ಹರಿಯುತ್ತಿವೆ. ಇದೇ ವೇಳೆ ನದಿಗಳ ಬಳಿ ಹೋಗದಂತೆ ರಾಜ್ಯ ಸರ್ಕಾರ ಜನತೆಗೆ ಮನವಿ ಮಾಡಿದೆ. ರೆಡ್ ಅಲರ್ಟ್‌ಗೆ ಸಂಬಂಧಿಸಿದಂತೆ, ಜುಲೈ 10 ಮತ್ತು 11 ರಂದು ಹಿಮಾಚಲದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ. ಮಾನ್ಯತೆ ಪಡೆದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ 2 ದಿನಗಳ ಸಾರ್ವಜನಿಕ ರಜೆ ಘೋಷಿಸಿದೆ. CBSE, ICSE ತಮ್ಮದೇ ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದು ಎಂದಿದೆ.

ಮಂಡಿಯ ಪಾಂಡೋ ಅಣೆಕಟ್ಟಿನಿಂದ ನೀರು ಬಿಡುಗಡೆ : ಇಡೀ ಹಿಮಾಚಲದಲ್ಲಿ ಪ್ರಕೃತಿಯ ವಿನಾಶ ಕಂಡುಬರುತ್ತಿದೆ. ಇದೇ ವೇಳೆ ಜಿಲ್ಲೆಯ ಮಂಡಿಯಲ್ಲಿ ಕಳೆದ 2 ದಿನಗಳಿಂದ ಧಾರಾಕಾರ ಮಳೆ ಮುಂದುವರೆದಿದೆ. ಭಾರಿ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ನದಿಗಳು ಮತ್ತು ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪಾಂಡೋ ಅಣೆಕಟ್ಟಿನಲ್ಲಿ ನೀರು ಅಪಾಯದ ಮಟ್ಟವನ್ನು ತಲುಪಿದೆ. ಇದರಿಂದ ಸುತ್ತಮುತ್ತಲ ಪ್ರದೇಶಗಳಲ್ಲೂ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಪಾಂಡೋ ಅಣೆಕಟ್ಟಿನಿಂದ ನಿರಂತರವಾಗಿ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಬಿಯಾಸ್ ನದಿಯೂ ಉಗ್ರರೂಪ ಪಡೆದುಕೊಂಡಿದೆ. ಮಂಡಿ ನಗರದ ಬಿಯಾಸ್ ನದಿಯ ದಡದಲ್ಲಿ ನಿರ್ಮಿಸಲಾಗಿರುವ ಪಂಚವಕ್ತ್ರ ಮಹಾದೇವ ದೇವಾಲಯವೂ ಮುಳುಗಡೆಯಾಗಿದೆ.

ಇದನ್ನೂ ಓದಿ: ಹವಾಮಾನದಲ್ಲಿ ಸುಧಾರಣೆ: 3 ದಿನದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.