ರಾಜೌರಿ(ಜಮ್ಮು-ಕಾಶ್ಮೀರ): ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡಲಾಗ್ತಿದ್ದು, ಇದಕ್ಕೋಸ್ಕರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನಿಲ್ಲದ ಯೋಜನೆ ರೂಪಿಸಿಕೊಂಡಿವೆ. ಎಲ್ಲರಿಗೂ ವ್ಯಾಕ್ಸಿನ್ ಸಿಗಬೇಕೆಂಬ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರು ಹಗಲು-ರಾತ್ರಿ ಕೆಲಸ ಮಾಡ್ತಿದ್ದು, ಅವರ ಸೇವೆಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆರೋಗ್ಯ ಕಾರ್ಯಕರ್ತರು, ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲವೊಂದು ಪ್ರದೇಶಗಳಿಗೆ ತೆರಳಿ ಕೋವಿಡ್ ವ್ಯಾಕ್ಸಿನ್ ನೀಡ್ತಿದ್ದು, ಸದ್ಯ ಅಂತಹದೊಂದು ವಿಡಿಯೋ ವೈರಲ್ ಆಗಿದೆ. ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ಟ್ರಾಲಾ ಗ್ರಾಮಕ್ಕೆ ತೆರಳಲು ನದಿ ದಾಟಬೇಕಾಗಿದ್ದು, ಆರೋಗ್ಯ ಕಾರ್ಯಕರ್ತರಿಬ್ಬರು ತುಂಬಿ ಹರಿಯುತ್ತಿರುವ ನದಿ ದಾಟಿ ತಮ್ಮ ಕೆಲಸ ಮಾಡ್ತಿದ್ದಾರೆ.
-
#Watch J&K | Health workers cross a river to carry out door-to-door COVID19 vaccination in Rajouri district's Tralla village
— ANI (@ANI) July 10, 2021 " class="align-text-top noRightClick twitterSection" data="
(VIdeo Source: Dr Iram Yasmin, Dr Iram Yasmin, In-charge, Tralla Health Centre) pic.twitter.com/awzbtSGcY2
">#Watch J&K | Health workers cross a river to carry out door-to-door COVID19 vaccination in Rajouri district's Tralla village
— ANI (@ANI) July 10, 2021
(VIdeo Source: Dr Iram Yasmin, Dr Iram Yasmin, In-charge, Tralla Health Centre) pic.twitter.com/awzbtSGcY2#Watch J&K | Health workers cross a river to carry out door-to-door COVID19 vaccination in Rajouri district's Tralla village
— ANI (@ANI) July 10, 2021
(VIdeo Source: Dr Iram Yasmin, Dr Iram Yasmin, In-charge, Tralla Health Centre) pic.twitter.com/awzbtSGcY2
ಕೋವಿಡ್ ವ್ಯಾಕ್ಸಿನ್ ಡಬ್ಬಿ ಹೆಗಲಿಗೆ ಹಾಕಿಕೊಂಡು ತುಂಬಿ ಹರಿಯುತ್ತಿರುವ ನದಿ ದಾಟಿ, ಅಲ್ಲಿನ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪ್ರಕಾರ ಓರ್ವ ಮಹಿಳೆ ಹಾಗೂ ಪುರುಷ ಸಿಬ್ಬಂದಿ ಒಬ್ಬರನ್ನೊಬ್ಬರು ಹಿಡಿದುಕೊಂಡು ನದಿ ದಾಟುತ್ತಿದ್ದಾರೆ. ಅಲ್ಲಿನ ಆರೋಗ್ಯಧಿಕಾರಿ ಈ ವಿಡಿಯೋ ಹಂಚಿಕೊಂಡಿದ್ದಾರೆ.