ETV Bharat / bharat

ದೇಶದ 9 ರಾಜ್ಯಗಳಲ್ಲಿ ಕೊರೊನಾ ತೀವ್ರ; ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಸೂಚನೆ - ಪರೀಕ್ಷೆ ಲಸಿಕೆ ಪ್ರಮಾಣ ಹೆಚ್ಚಳಕ್ಕೆ ಸೂಚನೆ

ದೇಶದಲ್ಲಿ ಕೊರೊನಾ ಮತ್ತೆ ವೇಗ ಪಡೆಯುತ್ತಿದೆ. ಕೆಲವು ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಇವುಗಳಲ್ಲಿ 9 ರಾಜ್ಯಗಳ ಪಾಲು ಹೆಚ್ಚು. ಹೀಗಾಗಿ ಆಯಾ ರಾಜ್ಯಗಳು ತೀವ್ರ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ದೇಶದ 9 ರಾಜ್ಯಗಳಲ್ಲಿ ಕೊರೊನಾ ತೀವ್ರ
ದೇಶದ 9 ರಾಜ್ಯಗಳಲ್ಲಿ ಕೊರೊನಾ ತೀವ್ರ
author img

By

Published : Jul 21, 2022, 10:01 AM IST

ನವದೆಹಲಿ: ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆ ಗತಿಯಲ್ಲಿ ಸಾಗುತ್ತಿದೆ. ಇದು ಮತ್ತೊಂದು ಸುತ್ತಿನ ಅಲೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಿದೆ.

ಅತ್ಯಧಿಕ ಕೊರೊನಾ ಸೋಂಕು ಪ್ರಕರಣಗಳು​ ದಾಖಲಾಗುತ್ತಿರುವ ದೇಶದ 9 ರಾಜ್ಯಗಳಲ್ಲಿ ಪರೀಕ್ಷೆ ಕಡಿತಗೊಳಿಸಿರುವುದಕ್ಕೆ ಕೇಂದ್ರ ಆರೋಗ್ಯ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಸೋಂಕು ಉಲ್ಬಣಗೊಳ್ಳುವುದನ್ನು ತಡೆಯಲು ಪರೀಕ್ಷೆ ಹೆಚ್ಚಿಸಲು ತಾಕೀತು ಮಾಡಿದೆ.

ಕೋವಿಡ್​ ಕುರಿತಾಗಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಅಸ್ಸೋಂ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಿದರು.

ಈ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ ಸೋಂಕಿನ ಪ್ರಮಾಣವೂ ಜಾಸ್ತಿ ಇದೆ. ಹೀಗಾಗಿ ಸೋಂಕಿತರನ್ನು ಪತ್ತೆ ಮಾಡಲು ಹೆಚ್ಚಿನ ಪ್ರಮಾಣದ ಪರೀಕ್ಷೆಗಳನ್ನು ನಡೆಸಬೇಕು. ಮತ್ತು ಬಾಧಿತರಿಗೆ ಪ್ರತ್ಯೇಕ ಐಸೋಲೇಷನ್​ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕೇಂದ್ರ ಸೂಚಿಸಿದೆ.

ಕಳೆದ ಒಂದು ತಿಂಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿರುವ ಬಗ್ಗೆ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿನೋದ್ ಪಾಲ್ ಕಳವಳ ವ್ಯಕ್ತಪಡಿಸಿದ್ದಲ್ಲದೇ, ಕೊರೊನಾ ಇನ್ನೂ ಮುಗಿದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜಾಗತಿಕವಾಗಿ ವಿದ್ಯಮಾನಗಳನ್ನು ನೋಡಿ ನಾವು ಜಾಗರೂಕರಾಗಿರಬೇಕು. ಕಳಪೆ ಕಣ್ಗಾವಲು, ಸೀಮಿತ ಪರೀಕ್ಷೆ, ಅನೇಕ ರಾಜ್ಯಗಳಲ್ಲಿ ಸರಾಸರಿಗಿಂತ ಕಡಿಮೆ ವ್ಯಾಕ್ಸಿನೇಷನ್ ಸೋಂಕಿನ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಶೇ.77ರಷ್ಟು ನಕ್ಸಲ್​​ ಚಟುವಟಿಕೆ ನಿಗ್ರಹ: ಕೇಂದ್ರ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.