ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ ದರದಲ್ಲಿ ಇಂದು ಮತ್ತಷ್ಟು ಏರಿಕೆ ಕಂಡು ಬಂದಿದ್ದು, ಇದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
Headlines Economy
— Rahul Gandhi (@RahulGandhi) July 6, 2022 " class="align-text-top noRightClick twitterSection" data="
Managed Mismanaged pic.twitter.com/mF9SHvrDCz
">Headlines Economy
— Rahul Gandhi (@RahulGandhi) July 6, 2022
Managed Mismanaged pic.twitter.com/mF9SHvrDCzHeadlines Economy
— Rahul Gandhi (@RahulGandhi) July 6, 2022
Managed Mismanaged pic.twitter.com/mF9SHvrDCz
ಕೇಂದ್ರ ಬಿಜೆಪಿ ಕೇವಲ ಮುಖ್ಯಾಂಶ ನಿರ್ವಹಿಸುತ್ತಿದ್ದು, ಆರ್ಥಿಕತೆ ಬಗ್ಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ. ಹೀಗಾಗಿ, ದೇಶದ ಆರ್ಥಿಕತೆ ಹಾಳು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಡುಗೆ ಅನಿಲ ದರದಲ್ಲಿ ಪ್ರತಿ ಸಿಲಿಂಡರ್ಗೆ 50 ರೂಪಾಯಿ ಏರಿಕೆಯಾಗಿದ್ದು, ಕಳೆದ ಮೇ ತಿಂಗಳಿನಿಂದ ಅಡುಗೆ ಅನಿಲ ದರದಲ್ಲಿ ಮೂರನೇ ಸಲ ಹೆಚ್ಚಳ ಕಂಡು ಬಂದಿದೆ.
ಇದನ್ನೂ ಓದಿರಿ: ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಮತ್ತೆ 50 ರೂಪಾಯಿ ಹೆಚ್ಚಳ
ಸರ್ಕಾರಿ ಸ್ವಾಮ್ಯದ ಸಬ್ಸಿಡಿ ರಹಿತ ಇಂಧನ ಬೆಲೆ ಸದ್ಯ 14.2 ಕೆಜಿಗೆ 1,053 ರೂ ಆಗಿದ್ದು, ಹೆಡ್ಲೈನ್ಸ್ ಮ್ಯಾನೇಜ್ಡ್, ಎಕಾನಮಿ ಮಿಸ್ ಮ್ಯಾನೇಜ್ಡ್ ಎಂದು ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಭ್ರಷ್ಟ ಸರ್ಕಾರವಿದ್ದರೆ ದೇಶದ ಆರ್ಥಿಕತೆ ಹಾಗೂ ಕರೆನ್ಸಿ ಕುಸಿಯುತ್ತದೆ ಎಂದು ಈ ಹಿಂದೆ ಬಿಜೆಪಿ ಹೇಳಿಕೆ ನೀಡಿರುವ ಫೋಟೋವೊಂದನ್ನ ಟ್ವೀಟ್ ಮಾಡಿದ್ದು, ಆ ಮೂಲಕ ಆಡಳಿತ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.