ಔರಂಗಾಬಾದ್(ಮಹಾರಾಷ್ಟ್ರ): ಹವಾಲಾ ದಂಧೆ ನಡೆಸುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಕ್ಕಿ ವ್ಯಾಪಾರಿಯ ಅಂಗಡಿ ಮೇಲೆ ದಾಳಿ ನಡೆಸಿರುವ ಪೊಲೀಸರು ದಾಖಲೆಯ 1 ಕೋಟಿ ರೂಪಾಯಿ ಜಪ್ತಿ ಮಾಡಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಘಟನೆ ನಡೆದಿದೆ.
ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 1 ಕೋಟಿ, 9ಲಕ್ಷದ 50 ಸಾವಿರ ರೂಪಾಯಿ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಿ ಆಶಿಶ್ ಸಾವ್ಜಿ ಎಂಬಾತನನ್ನು ಬಂಧನ ಮಾಡಲಾಗಿದೆ. ಕ್ರೈಂ ಬ್ರಾಂಚ್ ಇನ್ಸ್ಪೆಕ್ಟರ್ ಅವಿನಾಶ್ ಹಾಗೂ ಸಬ್ ಇನ್ಸ್ಪೆಕ್ಟರ್ ಕಲ್ಯಾಣ್ ಶೆಲ್ಕೆ ತಂಡ ದಾಳಿ ನಡೆಸಿದೆ.
ಇದನ್ನೂ ಓದಿ: ಮಗ ಭಾರತೀಯ ಸೇನೆ ಸೇರುತ್ತಿದ್ದಂತೆ ಸರ್ಕಾರಕ್ಕೆ ಬಿಪಿಎಲ್ ಕಾರ್ಡ್ ಮರಳಿಸಿದ ತಂದೆ!
ಅಕ್ಕಿ ಮೂಟೆಗಳ ಹಿಂದೆ ಇಷ್ಟೊಂದು ಹಣ ಇಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆ. ಆರೋಪಿಯ ಮನೆ ಮೇಲೂ ಶೋಧ ನಡೆಸಿದ್ದಾಗಿ ತಿಳಿದು ಬಂದಿದ್ದು, ನೋಟು ಎಣಿಕೆ ಮಾಡುವ ಎರಡು ಯಂತ್ರಗಳು, ಡೈರಿಗಳ ಪರಿಶೀಲನೆ ಮುಂದುವರೆದಿದೆ.