ಪಾಟ್ನಾ: ನವೆಂಬರ್ 16ರಂದು ನಿತೀಶ್ ಕುಮಾರ್ ನಾಲ್ಕನೇ ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಜೆಡಿಯು ನಾಯಕ ನಿತೀಶ್ ಕುಮಾರ್, ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಯಾವುದೇ ಹಕ್ಕು ಮಂಡಿಸಿಲ್ಲ. ಆ ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳುತ್ತದೆ. ನಾಳೆ (ಶುಕ್ರವಾರ) ಎನ್‌ಡಿಎ ಒಕ್ಕೂಟದ ಎಲ್ಲಾ ನಾಲ್ಕು ಪಕ್ಷಗಳ ಮುಖಂಡರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು.
ನಾನು ಸಿಎಂ ಆಗಲು ಯಾವುದೇ ಹಕ್ಕು ಮಂಡಿಸಿಲ್ಲ. ಈ ನಿರ್ಧಾರವನ್ನು ಎನ್‌ಡಿಎ ತೆಗೆದುಕೊಳ್ಳುತ್ತದೆ. ದೀಪಾವಳಿ ಅಥವಾ ಛತ್ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧರಿಸಿಲ್ಲ. ಈ ಚುನಾವಣೆಯ ಫಲಿತಾಂಶವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಎಲ್ಲಾ ನಾಲ್ಕು ಪಕ್ಷಗಳ ಸದಸ್ಯರನ್ನು ನಾಳೆ ಭೇಟಿಯಾಗಲಿದ್ದೇವೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಆರ್ಜೆಡಿ ನಾಯಕ ತೇಜಶ್ವಿ ಯಾದವ್ ಕೂಡ ನಿತೀಶ್ ಅವರ ಮೇಲೆ ವಾಗ್ದಾಳಿ ನಡೆಸಿ, ಜೆಡಿಯು ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಆರ್ಜೆಡಿ ಮತ್ತು ಬಿಜೆಪಿಯ ಹಿಂದಿದೆ. ಅವರಿಗೆ ಆತ್ಮಸಾಕ್ಷಿಯಿದ್ದರೆ, ನಿತೀಶ್ ಅವರು ಬೇರೆಯವರಿಗೆ ಕುರ್ಚಿ ಬಿಟ್ಟುಕೊಡಬೇಕು ಎಂದಿದ್ದಾರೆ.