ETV Bharat / bharat

ದೇವರ ಮೊರೆ ಹೋದ ಹರೀಶ್ ರಾವತ್ ದಂಪತಿ..ಸಿಸಿ ಟಿವಿಗಳು ಸರಿಯಾಗಿ ವರ್ಕ್​​ ಮಾಡಿಲ್ಲ ಎಂದು ಆರೋಪ - ಚುನಾವಣೆ 2022

ಉತ್ತರಾಖಂಡ ವಿಧಾನಸಭೆ ಚುನಾವಣೆ 2022 ರ ಮತ ಎಣಿಕೆ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಪತ್ನಿ ರೇಣುಕಾ ರಾವತ್ ಅವರೊಂದಿಗೆ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಮಾತನಾಡಿದ ಅವರು ಸ್ಟ್ರಾಂಗ್​ ರೂಮ್​ಗೆ ಅಳವಡಿಸಿದ್ದ ಸಿಸಿಟಿವಿಗಳು ಸರಿಯಾಗಿ ವರ್ಕ್​ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಇವಿಎಂಗಳ ಬಗ್ಗೆ ತಮಗೆ ಅನುಮಾನ ಇದೆ ಎಂದು ಅವರು ಹೇಳಿದ್ದಾರೆ.

ಹರೀಶ್ ರಾವತ್ ದಂಪತಿ
ಹರೀಶ್ ರಾವತ್ ದಂಪತಿ
author img

By

Published : Mar 10, 2022, 10:33 AM IST

ಡೆಹ್ರಾಡೂನ್: ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್ ಮತ್ತು ಗೋವಾ ಎಲ್ಲಾ ಐದು ರಾಜ್ಯಗಳಿಗೆ 2022 ರ ವಿಧಾನಸಭಾ ಚುನಾವಣೆಯ ಎಣಿಕೆ ಪ್ರಾರಂಭವಾಗಿದೆ. ಈ ನಡುವೆ ಹರೀಶ್ ರಾವತ್ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಗೆಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಪತ್ನಿ ರೇಣುಕಾ ರಾವತ್ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಈ ಚುನಾವಣಾ ಫಲಿತಾಂಶವು ನನ್ನ ರಾಜಕೀಯ ಜೀವನದ ದಿಕ್ಕನ್ನು ನಿರ್ಧರಿಸುತ್ತದೆ ಎಂದರು.

ಈ ಕುರಿತು ಟ್ವೀಟ್​ ಮಾಡಿರುವ ಹರೀಶ್ ರಾವತ್, "ಓಂ ಶ್ರೀ ಗಣೇಶಾಯ ನಮೋ ನಮಃ, ಓಂ ನಮೋ ಭಗವತೇ ವಾಸುದೇವಾಯ, ಓಂ ನಾರಾಯಣಾಯ ವಿದ್ಮಹೇ, ವಾಸುದೇವಾಯ ಧೀಮಹಿ, ತನ್ನೋ ವಿಷ್ಣು ಪ್ರಚೋದಯಾತ್. ನನ್ನ ಇಷ್ಟದೇವತೆ, ಕುಲದೇವತೆ ಮತ್ತು ಎಲ್ಲಾ ದೇವರುಗಳಿಗೆ ನಾನು ನಮಸ್ಕರಿಸುತ್ತೇನೆ. ಭಗವಂತ ವಿಷ್ಣುವಿನ ಆಶೀರ್ವಾದ ನಮ್ಮೆಲ್ಲರ ಮೇಲಿದೆ. ಓಂ ನಮಃ ಶಿವಾಯ ಜೈ ಮಾ ಭಗವತಿ, ಜೈ ಸಾಯಿ ಬಾಬಾ." ಎಂದು ಪೋಸ್ಟ್​ ಮಾಡಿದ್ದಾರೆ.

ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹರೀಶ್ ರಾವತ್: ಇದಕ್ಕೂ ಮುನ್ನ ಮಾತನಾಡಿದ ಅವರು,ಇದೇ ವೇಳೆ, ಮಾತನಾಡಿದ ಅವರು ಸ್ಟ್ರಾಂಗ್​ ರೂಮ್​ಗೆ ಅಳವಡಿಸಿದ್ದ ಸಿಸಿಟಿವಿಗಳು ಸರಿಯಾಗಿ ವರ್ಕ್​ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಇವಿಎಂಗಳ ಬಗ್ಗೆ ತಮಗೆ ಅನುಮಾನ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್​ನಲ್ಲಿ ಅಧಿಕಾರದತ್ತ ಆಪ್​​​​​​​​​ ದಾಪುಗಾಲು: ಕಾಂಗ್ರೆಸ್​​ ಓಡಿಸುತ್ತಾ ಕಸಬರಿಗೆ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.