ETV Bharat / bharat

ನೆಲದಡಿಯಲ್ಲಿ ಎರಡು ಅಂತಸ್ತಿನ ಭವ್ಯ ಅರಮನೆ ನಿರ್ಮಿಸಿದ ಇರ್ಫಾನ್..! - 12 ವರ್ಷಗಳಲ್ಲಿ ಪೂರ್ಣಗೊಂಡ ಅರಮನೆ

Irfan built a magnificent two storied underground palace: ವಿಶಿಷ್ಟವಾದ ಅರಮನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಶಹಬಾದ್‌ನಲ್ಲಿದೆ. ಈ ಅರಮನೆಯನ್ನು ಇರ್ಫಾನ್ ಸಿದ್ಧಪಡಿಸಿದ್ದಾರೆ. 12 ವರ್ಷಗಳ ಪರಿಶ್ರಮದ ನಂತರ ನಿರ್ಮಿಸಲಾದ ಅರಮನೆಯಲ್ಲಿ ಇರ್ಫಾನ್ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ.

Irfan built a magnificent two storied underground palace
ನೆಲದಡಿಯಲ್ಲಿ ಎರಡು ಅಂತಸ್ತಿನ ಭವ್ಯ ಅರಮನೆ ನಿರ್ಮಿಸಿದ ಇರ್ಫಾನ್
author img

By ETV Bharat Karnataka Team

Published : Aug 31, 2023, 10:55 AM IST

ಹರ್ದೋಯ್ (ಉತ್ತರ ಪ್ರದೇಶ): ಕಲೆ ಎಲ್ಲಿಯೂ ಮರೆಯಾಗಿ ಉಳಿಯಲು ಸಾಧ್ಯವಿಲ್ಲ. ವ್ಯಕ್ತಿಯಲ್ಲಿರುವ ಕಲೆಯನ್ನು ಯಾರೂ ಕೂಡ ಬಂಧಿಸಿಡಲು ಸಾಧ್ಯವಿಲ್ಲ. ಒಂದಿಲ್ಲೊಂದು ದಿನ ಆ ಕಲೆಯು ಪ್ರಪಂಚದ ಮುಂದೆ ಬರುತ್ತದೆ. ಅಂಥದ್ದೊಂದು ವಿಶಿಷ್ಟ ಕಲೆ ಈಗ ಮುನ್ನೆಲೆಗೆ ಬಂದಿದೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಶಹಬಾದ್ ನಿವಾಸಿ ಇರ್ಫಾನ್ ಅಲಿಯಾಸ್ ಪಪ್ಪು ಬಾಬಾ ಅವರಲ್ಲಿ ಅಡಗಿದೆ ಅಪರೂಪದ ಕಲೆ. ಅವರ 12 ವರ್ಷಗಳ ಕಠಿಣ ಪರಿಶ್ರಮ ಮತ್ತು ಅನನ್ಯ ಕೈಚಳಕದಿಂದ ಭವ್ಯವಾದ ಅರಮನೆಯೊಂದನ್ನು ಸಿದ್ಧ ಪಡಿಸಿದ್ದಾರೆ.

12 ವರ್ಷಗಳಲ್ಲಿ ಪೂರ್ಣಗೊಂಡ ಅರಮನೆ: ಇದು ಸಾಮಾನ್ಯ ಅರಮನೆಯಲ್ಲ. ಆದರೆ, ನೆಲದಡಿಯಲ್ಲಿ ನಿರ್ಮಿಸಲಾದ 11 ಕೋಣೆಗಳ ವಿಶಿಷ್ಟ ಅರಮನೆ. ವಿಶೇಷವೆಂದರೆ ಗುದ್ದಲಿ ಮತ್ತು ಸಲಿಕೆಯಿಂದ ಮಣ್ಣನ್ನು ಕತ್ತರಿಸಿ ತಯಾರಿಸಲಾಗಿದೆ. ಇದರಲ್ಲಿ ರೀಬಾರ್ ಅಥವಾ ಸಿಮೆಂಟ್ ಬಳಸಿಲ್ಲ. ಸುಮಾರು 12 ವರ್ಷಗಳಲ್ಲಿ ಮಣ್ಣನ್ನು ಕಡಿಯುವ ಮೂಲಕ ಈ ಅರಮನೆಯನ್ನು ಸಿದ್ಧಪಡಿಸಿದ ಇರ್ಫಾನ್ ಅಲಿಯಾಸ್ ಪಪ್ಪುಬಾಬಾ ತನ್ನ ಜೀವನವನ್ನು ಇದರಲ್ಲೇ ಕಳೆಯುತ್ತಿದ್ದಾರೆ.

ವಿಶಿಷ್ಟ ಅರಮನೆಯಲ್ಲಿ ಮಸೀದಿಯನ್ನೂ ನಿರ್ಮಾಣ: ಇರ್ಫಾನ್ ತನ್ನ ಸ್ವಂತ ಗ್ರಾಮದಲ್ಲಿ ಎತ್ತರದ ಮಣ್ಣಿನ ದಿಬ್ಬವನ್ನು ಅಗೆದು 11 ಕೋಣೆಗಳ ಎರಡು ಅಂತಸ್ತಿನ ಅರಮನೆಯನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಅರಮನೆಯೊಳಗೆ ಮಸೀದಿಯೂ ಇದೆ. ಇದಲ್ಲದೇ ಕೆಳ ಅಂತಸ್ತಿಗೆ ತಲುಪಲು ಮೆಟ್ಟಿಲುಗಳನ್ನೂ ಮಾಡಲಾಗಿದೆ. ಇದರೊಂದಿಗೆ ಗ್ಯಾಲರಿ ಮತ್ತು ಕುಳಿತುಕೊಳ್ಳುವ ಕೋಣೆಯನ್ನು ಸಹ ಮಾಡಲಾಗಿದೆ.

ಅರಮನೆಯ ಗೋಡೆಗಳ ಮೇಲೆ ಸ್ವಂತ ಕೆತ್ತನೆ: ಇರ್ಫಾನ್ 2011 ರಲ್ಲಿ ಇದನ್ನು ಕಟ್ಟಲು ಪ್ರಾರಂಭಿಸಿದರು. ಅಂದಿನಿಂದ ಇಲ್ಲಿಯವರೆಗೆ ಅವರು ನಿರಂತರವಾಗಿ ಅದರ ತಯಾರಿಕೆಯಲ್ಲಿ ತೊಡಗಿದ್ದಾರೆ. ನೀವು ಈ ಅರಮನೆಗೆ ಹೋದಾಗ, ನೀವು ಪ್ರಾಚೀನ ಕೆತ್ತನೆಗಳನ್ನು ಸಹ ನೋಡುತ್ತೀರಿ. ಇರ್ಫಾನ್ ಕೈಚಳಕದಿಂದ ವಿಶಿಷ್ಟವಾದ ಕೆತ್ತನೆಗಳು ಅರಳಿವೆ. ಇರ್ಫಾನ್ ತಮ್ಮ ಸಮಯವನ್ನು ಈ ಅರಮನೆಯಲ್ಲಿ ಕಳೆಯುತ್ತಾರೆ. ಹಗಲು, ರಾತ್ರಿ ಇಲ್ಲಿಯೇ ಇರುತ್ತಾರೆ. ಇದರೊಳಗೇ ಮಲಗುತ್ತಾರೆ. ಅವರು ಆಹಾರ ಸೇವಿಸಲು ಮಾತ್ರವೇ ಮನೆಗೆ ಹೋಗುತ್ತಾರೆ.

ಇರ್ಫಾನ್ ಅಲಿಯಾಸ್ ಪಪ್ಪು ಬಾಬಾ ಯಾರು?: 2010 ರವರೆಗೆ ಇರ್ಫಾನ್ ಸಾಮಾನ್ಯ ಮನುಷ್ಯನಂತೆ ಜೀವನ ಸಾಗಿಸುತ್ತಿದ್ದರು. ಆದರೆ, ಅವರ ತಂದೆಯ ಮರಣದ ನಂತರ, ಅವರು ತಮ್ಮ ಪ್ರದೇಶದಲ್ಲಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ನಿರಾಶೆ ಅನುಭವಿಸಿದರು. ಇರ್ಫಾನ್ ಮದುವೆಯಾಗಿಲ್ಲ. ಅವರ ತಾಯಿ ಮತ್ತು ಅವರ ಕುಟುಂಬದ ಇತರ ಸದಸ್ಯರು ಮತ್ತೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. 2011 ರಿಂದ, ಇರ್ಫಾನ್ ಒಂಟಿಯಾಗಿ ಬದುಕಲು ಆರಂಭಿಸಿದರು. ನಿರ್ಜನ ಸ್ಥಳದಲ್ಲಿ ಮಣ್ಣಿನ ದಿಬ್ಬದೊಳಗೆ ಅರಮನೆಯನ್ನು ನಿರ್ಮಿಸಲು ಪ್ರಾರಂಭಿಸಿದರು. ಇರ್ಫಾನ್ ತಮ್ಮ ಅರಮನೆಯ ಹೊರಗಿದ್ದ ಬರಡು ಭೂಮಿಯನ್ನು ಗುದ್ದಲಿಯಿಂದ ಸಮತಟ್ಟು ಮಾಡಿದರು. ಈಗ ಅದರಲ್ಲಿ ಕೃಷಿ ಮಾಡಲಿದ್ದಾರೆ. ಅವರು ಬಾವಿಯನ್ನು ಕೂಡ ನಿರ್ಮಿಸಿದ್ದಾರೆ. ಆದರೆ, ಅದನ್ನು ಕೆಲವು ಕಿಡಿಗೇಡಿಗಳು ನಾಶಪಡಿಸಿದ್ದಾರಂತೆ.

ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ ಅಸ್ಸೋಂ ಟೀ ಬ್ಯುಸಿನೆಸ್​.. 5 ವರ್ಷಗಳಲ್ಲಿ 68 ಚಹಾ ತೋಟಗಳು ಮಾರಾಟ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.