ETV Bharat / bharat

ಹೈದರಾಬಾದ್ 'ವಿಂಗ್ಸ್​ ಇಂಡಿಯಾ': ಹೆಚ್‌ಎಎಲ್‌ನಿಂದ ಸ್ವದೇಶಿ ಏರ್‌ಕ್ರಾಫ್ಟ್‌ಗಳ ಪ್ರದರ್ಶನ

ಹೈದರಾಬಾದ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಮಾನ ಪ್ರದರ್ಶನ 'ವಿಂಗ್ಸ್‌ ಇಂಡಿಯಾ 2024'ರಲ್ಲಿ ಎಚ್​ಎಎಲ್​ ತಾನು ನಿರ್ಮಿಸಿದ ಸ್ವದೇಶಿ ಏರ್‌ಕ್ರಾಫ್ಟ್‌ಗಳನ್ನು ಪ್ರದರ್ಶಿಸಲಿದೆ.

HAL showcase Hindustan-228 aircraft and ALH Dhruv at the Wings India 2024

author img

By ETV Bharat Karnataka Team

Published : Jan 17, 2024, 12:38 PM IST

ಹೈದರಾಬಾದ್​​: ನಾಳೆಯಿಂದ ಮೂರು ದಿನಗಳ ಕಾಲ ಹೈದರಾಬಾದ್‌ನ ಬೇಗಂಪೇಟ್​ ವಿಮಾನ ನಿಲ್ದಾಣದಲ್ಲಿ 'ವಿಂಗ್ಸ್​ ಇಂಡಿಯಾ 2024'ಕ್ಕೆ ಚಾಲನೆ ದೊರೆಯಲಿದೆ. ಇಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್​ಎಎಲ್)​ ತನ್ನ ದೇಶಿಯ ನಾಗರಿಕ ವಿಮಾನಗಳಾದ ಹಿಂದೂಸ್ತಾನ್​ 228 ಏರ್​ಕ್ರಾಫ್ಟ್​​ ಮತ್ತು ಎಎಲ್​ಎಚ್​​ ಧ್ರುವ ಎಂಬ ದೇಶಿಯ ಹೆಲಿಕ್ಟಾಪರ್‌ಗಳನ್ನು ಪ್ರದರ್ಶಿಸಲಿದೆ.

ಭಾರತದ ಪ್ರಾದೇಶಿಕ ಸಂಪರ್ಕವನ್ನು ಪ್ರೋತ್ಸಾಹಿಸಲು ಎಚ್​ಎಎಲ್​ ಸ್ವದೇಶಿ ನಿರ್ಮಿತ ನಾಗರಿಕ ವಿಮಾನಗಳನ್ನು ಪ್ರಸ್ತುತಪಡಿಸಲಿದೆ. ಸಂಸ್ಥೆಯು ಡಿಒ-228 ಮತ್ತು ಎಚ್​ಎಸ್​​-748 ಮುಂತಾದ ವಿಮಾನ ತಯಾರಿಕೆ ಸಾಮರ್ಥ್ಯ ಹೊಂದಿದೆ. ಅಲ್ಲದೇ, ಪ್ರಾದೇಶಿಕ ಸಾರಿಗೆ ವಿಮಾನದಂತಹ ನಾಗರಿಕ ವಿಮಾನ ಕಾರ್ಯಕ್ರಮಗಳಿಗೆ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಎಂಆರ್​ಒ ಚಟುವಟಿಕೆಯಲ್ಲೂ ಎಚ್​ಎಲ್​ ಸಕ್ರಿಯ ಸಹಯೋಗ ಹೊಂದಿದೆ ಎಂದು ಎಚ್​ಎಎಲ್​ನ ಸಿಎಂಡಿ ಸಿ.ಬಿ.ಅನಂತಕೃಷ್ಣನ್​ ತಿಳಿಸಿದ್ದಾರೆ.

ವಿಂಗ್ಸ್‌ ಇಂಡಿಯಾ ಪ್ರದರ್ಶನದಲ್ಲಿ ಎಚ್​ಎಎಲ್​ ಹಾಲ್​ ಎ, ಸ್ಟಾಲ್​ ನಂ 25ರಲ್ಲಿ ಇರಲಿದೆ. ಸಂಸ್ಥೆಯ ಈ ಮಳಿಗೆಯಲ್ಲಿ ಎಲ್​ಯುಎಚ್​, ಹಿಂದೂಸ್ತಾನ್​-228, ಎಎಲ್​ಎಚ್​, ಎಲ್​ಆರ್​ಯು ಹಾಗು ನಾಗರಿಕ ವಿಮಾನಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ಸಾರ್ವಜನಿಕರು ವೀಕ್ಷಿಸಬಹುದು.

ಎಚ್​ಎಲ್​ ಒಇಎಂ ಮತ್ತು ತನ್ನ ಗ್ರಾಹಕರೊಂದಿಗೆ ವ್ಯಾಪಾರ ಚರ್ಚೆ, ಸಭೆಗಳ​ ಹೊರತಾಗಿ ವ್ಯಾಪಾರಿ ಸಹೋದ್ಯೋಗಿಗಳೊಂದಿಗೆ ಹಲವು ಯೋಜನೆಗಳ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದೆ.

ಎಎಲ್​ಎಚ್​​ ಧ್ರುವ
ಎಎಲ್​ಎಚ್ ನಿರ್ಮಿತ​​ ಧ್ರುವ ಹೆಲಿಕಾಪ್ಟರ್‌

ಧ್ರುವ ಹೆಲಿಕಾಪ್ಟರ್​​: ಇದು ಸುಧಾರಿತ ಹಗುರ ಹೆಲಿಕಾಪ್ಟರ್​. 5.5 ಟನ್​ ಭಾರ ಇದ್ದು ಎರಡು ಇಂಜಿನ್​ ಹೊಂದಿದೆ. ಎಚ್​ಎಎಲ್​ ಇದರ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಿದೆ. ವಿಪತ್ತು ನಿರ್ವಹಣೆ, ಪತ್ತೆ ಮತ್ತು ರಕ್ಷಣೆ (ಎಸ್​ಎಆರ್​​), ಹೆಲಿ ಟೂರಿಸಂ, ವಿಐಪಿ ಪೆರ್ರಿ ಮುಂತಾದ ಪಾತ್ರವನ್ನು ಇದು ನಿರ್ವಹಿಸಲಿದೆ. ಈ ಹೆಲಿಕಾಪ್ಟರ್​​ ಸುಧಾರಿತ ಗ್ಲಾಸ್ ಕಾಕ್‌ಪಿಟ್ ಮತ್ತು ಏವಿಯಾನಿಕ್ಸ್ ಹೊಂದಿದೆ.

ಹಿಂದೂಸ್ತಾನ್​ 228: ಇದು ಬಹುಪಯೋಗಿ ವಿಮಾನ. ಎಚ್​ಎಲ್​ ನಿರ್ಮಿತ ಕಡಿಮೆ ತೂಕದ ಎರಡು ಟರ್ಬೊಪ್ರಾಪ್​ ಹೊಂದಿದೆ. ಉಡಾನ್ ಅಡಿಯಲ್ಲಿ ಅಲ್ಪಾವಧಿಯ ವಾಯು ಮಾರ್ಗಗಳಲ್ಲಿ ದೂರ ಪ್ರಾದೇಶಿಕ ಸಂಪರ್ಕ ಹೊಂದಲಿದೆ. ಇದೂ ಕೂಡ ಪ್ರಾದೇಶಿಕ ವಿಮಾನಸೇವೆ/ಏರ್​ ಟಾಕ್ಸಿ, ವಿಐಪಿ, ಪತ್ತೆ ಮತ್ತು ರಕ್ಷಣೆ, ಅಪಘಾತ ಸ್ಥಳಾಂತರ, ಆಂಬ್ಯುಲೆನ್ಸ್​, ಏರಿಯಲ್​ ಫೋಟೋಗ್ರಾಫಿ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲಿದೆ. ವಿಮಾನದ ಕಾಕ್​ಪಿಟ್​​ ಅನ್ನು ಸಂಪೂರ್ಣವಾಗಿ ಡಿಜಿಟಲ್​​ ಗ್ಲಾಸ್​ ಕಾಕ್​ಪಿಟ್​​ ರೀತಿ ನವೀಕರಿಸಲಾಗಿದೆ. ಇದು ಡಿಜಿಸಿಎ ಪ್ರಮಾಣಿತವಾಗಿದೆ.

ಸಿವಿಲ್​ ಎಲ್​ಯುಎಚ್​: ಎಚ್​ಎಎಲ್​ ಹಗುರ ಯುಟಿಲಿಟಿ ಹೆಲಿಕಾಪ್ಟರ್‌ನ ನಾಗರಿಕ ರೂಪಾಂತರವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಸಂಸ್ಥೆಯು ಡಿಜಿಸಿಎ ಪ್ರಮಾಣಿತದೊಂದಿಗೆ ಎಲ್‌ಯುಎಚ್​ ನಾಗರಿಕ ಮೂಲ ಮಾದರಿ ನಿರ್ಮಾಣ ಮಾಡುತ್ತಿದ್ದು, ಇದನ್ನು 2025ರ ಡಿಸೆಂಬರ್​ ಹೊತ್ತಿಗೆ ಪೂರ್ಣಗೊಳಿಸಲಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರದರ್ಶನ; ಬೋಯಿಂಗ್ 777-9 ಆಕರ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.