ವಾರಣಾಸಿ : ವಾರಣಾಸಿಯಲ್ಲಿನ ಜ್ಞಾನವಪಿ ಮಸೀದಿಯ ನಿರ್ವಹಣಾ ಸಮಿತಿಯ ಅಂಜುಮಾನ್ ಇಂಟೆಜಾಮಿಯಾ ಸಮಿತಿಯು ಅಲಹಾಬಾದ್ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದೆ. ವಾರಣಾಸಿ ಸ್ಥಳೀಯ ನ್ಯಾಯಾಲಯದ ಏಪ್ರಿಲ್ 8ರ ತೀರ್ಪನ್ನು ತಡೆಹಿಡಿಯಬೇಕೆಂದು ಕೋರಿದೆ.
ಈ ಕುರಿತು ಅಲಹಾಬಾದ್ ಹೈಕೋರ್ಟ್‌ಗೆ ಸೋಮವಾರ ಸಲ್ಲಿಸಿರುವ ಅರ್ಜಿಯಲ್ಲಿ, ಜ್ಞಾನವಪಿ ಮಸೀದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆಗೊಳಪಡಿಸುವ ಆದೇಶ ಕಾನೂನುಬಾಹಿರ ಮತ್ತು ನ್ಯಾಯವ್ಯಾಪ್ತಿಯಿಲ್ಲದೇ ಅಂಗೀಕರಿಸಿದೆ ಎಂದು ತಿಳಿಸಲಾಗಿದೆ. ಏತನ್ಮಧ್ಯೆ, ಸುರಾನಿ ವಕ್ಫ್ ಮಂಡಳಿಯು ಕೂಡ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಇಂದು (ಮಂಗಳವಾರ) ಮೇಲ್ಮನವಿ ಸಲ್ಲಿಸಿದೆ.
ಹಿರಿಯ ವಕೀಲರಾದ ಫರ್ಮನ್ ಅಹ್ಮದ್ ನಖ್ವಿ ಮತ್ತು ಸೈಯದ್ ಅಹ್ಮದ್ ಫೈಜಾನ್ ಅವರು ಸಲ್ಲಿಸಿದ ಅಂಜುಮಾನ್ ಇಂಟೆಜಾಮಿಯಾ ಅರ್ಜಿಯಲ್ಲಿ, ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991 ಮತ್ತು ಸಿವಿಲ್ ಪ್ರೊಸೀಜರ್‌ನ ಆರ್ಡರ್ 7 ರೂಲ್ 11ರಡಿಯ ಸಂಪೂರ್ಣ ಲಿಖಿತ ಸಲ್ಲಿಕೆಗಳು ಮತ್ತು ಅನ್ವಯಿಸುವಿಕೆಯನ್ನು ಕೆಳ ನ್ಯಾಯಾಲಯವು ನಿರ್ಲಕ್ಷಿಸಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷ ಜುಫರ್ ಫಾರೂಕಿ, ನಾವು ಅಂಜುಮಾನ್ ಇಂಟೆಜಾಮಿಯಾವನ್ನು ಬೆಂಬಲಿಸುತ್ತೇವೆ. ವಾರಣಾಸಿ ಸಿವಿಲ್ ಕೋರ್ಟ್ ಆದೇಶದ ವಿರುದ್ಧ ಸುನ್ನಿ ಮಂಡಳಿಯು ಇಂದು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ ಎಂದಿದ್ದಾರೆ.
ಅಯೋಧ್ಯೆ ಮಸೀದಿ ಟ್ರಸ್ಟ್‌ನ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ (ಐಐಸಿಎಫ್) ಕಾರ್ಯದರ್ಶಿ ಅಥರ್ ಹುಸೇನ್, ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಅಂಜುಮಾನ್ ಇಂಟೆಜಾಮಿಯಾ ನಡೆ ಸ್ವಾಗತಾರ್ಹ. ಇದು ಪೂಜಾ ಸ್ಥಳಗಳ ಕಾಯ್ದೆ 1991 ಅನ್ನು ಎತ್ತಿಹಿಡಿಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಓದಿ: ರಾತ್ರಿ 8:30ಕ್ಕೆ ಮಹಾರಾಷ್ಟ್ರ ಉದ್ದೇಶಿಸಿ ಠಾಕ್ರೆ ಭಾಷಣ.. ಕಠಿಣ ಲಾಕ್ಡೌನ್ ಘೋಷಣೆ ಸಾಧ್ಯತೆ