ETV Bharat / bharat

ಸತತ ಎಂಟು ವರ್ಷ ನಾಣ್ಯ ಸಂಗ್ರಹ.. ತನ್ನಿಷ್ಟದಂತೆ ಚಿಲ್ಲರೇ ದುಡ್ಡಲ್ಲೇ ಸ್ಕೂಟರ್​ ಖರೀದಿಸಿದ ಭೂಪ! - ಎಂಟು ವರ್ಷ ಹಣ ಸಂಗ್ರಹಿಸಿ ಗುವಾಹಟಿ ಯುವಕ

ಹೊಸ ಬೈಕ್​ ಖರೀದಿ ಮಾಡಬೇಕೆನ್ನುವುದು ಬಹುತೇಕ ಯುವಕರ ಕನಸು. ಅದಕ್ಕಾಗಿ ಸಾಲ, ಮನೆಯಲ್ಲಿ ಜಗಳ ನಡೆಯುವುದೆಲ್ಲಾ ಸಾಮಾನ್ಯ. ಕೊನೆಗೂ ಸಾಕಷ್ಟು ಕಸರತ್ತು ಮಾಡಿ ತಮ್ಮಿಷ್ಟದ ಬೈಕ್​ ಖರೀದಿಸಿ ಸವಾರಿಯ ಮಜಾ ಅನುಭವಿಸುತ್ತಾರೆ. ಆದ್ರೆ ಈ ಯುವಕ ತನ್ನ ಕನಸನ್ನು ಈಡೇರಿಸಿಕೊಳ್ಳಲು ಸುಮಾರು ಎಂಟು ವರ್ಷಗಳ ಕಾಲ ಕಷ್ಟಪಟ್ಟಿದ್ದಾನೆ.

Guwahati daily wage labourer buys a scooter, Guwahati young man coins saved for 8 years, Assam scooter news, ಬೈಕ್​ ಖರೀದಿಸಿದ ಗುವಾಹಟಿ ಕೂಲಿ ಕೆಲಸಗಾರ, ಎಂಟು ವರ್ಷ ಹಣ ಸಂಗ್ರಹಿಸಿ ಗುವಾಹಟಿ ಯುವಕ, ಅಸ್ಸೋಂ ಸ್ಕೂಟರ್​ ಸುದ್ದಿ,
ದಿನಗೂಲಿಗಾರ
author img

By

Published : Apr 7, 2022, 10:20 AM IST

ಗುವಾಹಟಿ(ಅಸ್ಸೋಂ): ಕೆಲವರು ತಮ್ಮಿಷ್ಟದ ಆಸೆಗಳನ್ನು ಈಡೇರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಅಥವಾ ಕಸರತ್ತು ನಡೆಸುತ್ತಾರೆ. ಇಲ್ಲೊಬ್ಬ ಯುವಕ ತಾನು ಅಂದುಕೊಂಡದನ್ನು ಪಡೆಯಲು ಬರೋಬ್ಬರಿ ಎಂಟು ವರ್ಷಗಳ ಕಾಲ ಕಾದಿದ್ದಾನೆ. ಹೌದು, ಈತ ಎಲ್ಲರಿಗಿಂತಲೂ ವಿಭಿನ್ನವಾದ ಹಾದಿ ತುಳಿದಿದ್ದಾರೆ. ಕಳೆದ ಎಂಟು ವರ್ಷಗಳಿಂದ ತಾನು ಕೂಡಿಟ್ಟಿದ್ದ ನಾಣ್ಯಗಳಿಂದಲೇ 1.5 ಲಕ್ಷ ರೂ. ಸಂಗ್ರಹಿಸಿ, ಹೊಚ್ಚ ಹೊಸ ಸ್ಕೂಟರ್​ ತೆಗೆದುಕೊಂಡಿದ್ದಾನೆ.

  • Assam | Guwahati daily wage labourer buys a scooter using coins saved for 8 years

    I was collecting these coins since 2014. Finally, when my collection amounted to Rs 1.5 lakh, I decided to buy a scooter by using a portion of my collection: Upen Roy (06.04) pic.twitter.com/EENV5BDv00

    — ANI (@ANI) April 6, 2022 " class="align-text-top noRightClick twitterSection" data=" ">

ಅಸ್ಸೋಂನ ಗುವಾಹಟಿ ನಿವಾಸಿ ಉಪೇನ್​ ರಾಯ್​ ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ ಮತ್ತು 10 ರೂಪಾಯಿ ನಾಣ್ಯಗಳನ್ನೇ ನೀಡಿ 1.50 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣವನ್ನ ಜಮಾ ಮಾಡಲು ಸುಮಾರು ಎಂಟು ವರ್ಷಗಳ ಕಾಲ ಅಂದ್ರೆ 2014ರಿಂದ ಶುರುಮಾಡಿದ್ದಾರೆ. ತನ್ನ ಆಸೆಯಂತೆ ಶೋ ರೂಂನವರಿಗೆ ಚಿಲ್ಲರೆ ಹಣ ಉಪೇನ್​ ಸ್ಕೂಟರ್​ ಖರೀದಿಸಿದ್ದಾರೆ. ಈತ ನೀಡಿರುವ ಚಿಲ್ಲರೆ ಹಣ ಎಣಿಸಲು ಶೋ ರೂಂನವರು ಸರಿಸುಮಾರು 5-6 ಗಂಟೆಗಳ ಕಾಲ ತೆಗೆದುಕೊಂಡಿದ್ದಾರೆ.

ಓದಿ: 3 ವರ್ಷದಿಂದ ಕೂಡಿಟ್ಟ 1 ರೂ.ನಾಣ್ಯಗಳನ್ನೇ ನೀಡಿ ₹2.6 ಲಕ್ಷ ಮೌಲ್ಯದ ಬೈಕ್ ಖರೀದಿಸಿದ ಯುವಕ!

ಉಪೇನ್​ ರಾಯ್​ ಪ್ರತಿದಿನ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ವೇಳೆ ಬೈಕ್ ಖರೀದಿಸುವ ಕನಸು ಕಂಡಿದ್ದರು. ಆದ್ರೆ ಆ ಕನಸನ್ನು ನನಸಾಗಿಸಿಕೊಳ್ಳಲು ಆತನ ಬಳಿ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ, ಬಂದ ಕೂಲಿಯಲ್ಲೇ ಆಗಾಗ್ಗೆ ನಾಣ್ಯಗಳನ್ನು ಸಂಗ್ರಹಿಸಲು ಶುರು ಮಾಡಿದ್ದಾರೆ. ಹೀಗೆ ಎಂಟು ವರ್ಷಗಳ ಕಾಲ ಕೂಡಿಟ್ಟ ಹಣದಲ್ಲಿ ತನ್ನಿಷ್ಟದ ಸ್ಕೂಟರ್​ನ್ನು ಖರೀದಿ ಮಾಡುವ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.