ETV Bharat / bharat

Jammu Kashmir: ಪ್ರಧಾನಿ ಭೇಟಿ ಬಳಿಕ PAGD ಮೈತ್ರಿ ಕೂಟ ಮೊದಲ ಸಭೆ

author img

By

Published : Jul 5, 2021, 8:14 AM IST

ಜೂನ್ 24 ರಂದು ಪಿಎಜಿಡಿ ಒಕ್ಕೂಟದ ಕೆಲ ಸದಸ್ಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಕಣಿವೆ ರಾಜ್ಯದ ಬಗ್ಗೆ ಚರ್ಚಿಸಿದ್ದರು. ಆ ಬಳಿಕ ಪಿಎಜಿಡಿ ಯಾವುದೇ ಸಭೆ ನಡೆಸಿರಲಿಲ್ಲ. ಮೋದಿ ಜತೆಗಿನ ಚರ್ಚೆ ಬಳಿಕ ಮೈತ್ರಿಯಲ್ಲಿ ಬಿರುಕು ಮೂಡಿದೆ ಎನ್ನಲಾಗಿತ್ತು. ಆದರೆ, ಭಾನುವಾರ ಎಲ್ಲರೂ ಒಂದೆಡೆ ಸೇರಿ ಚರ್ಚೆ ನಡೆಸಿದ್ದಾರೆ.

Gupkar Alliance
Gupkar Alliance

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಮೊದಲ ಬಾರಿಗೆ ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಮೈತ್ರಿಕೂಟ ಸಭೆ ನಡೆಸಿದೆ. ಫಾರೂಕ್​ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಓಮರ್​ ಅಬ್ದುಲ್ಲಾ, ಅಲಯನ್ಸ್ ವಕ್ತಾರ ಯೂಸುಫ್ ತಾರಿಗಾಮಿ, ಜಮ್ಮು-ಕಾಶ್ಮೀರದ ಜನ ಚಳವಳಿಯ ಅಧ್ಯಕ್ಷ ಜಾವೇದ್ ಮುಸ್ತಫಾ ಮಿರ್ ಭಾಗಿಯಾಗಿದ್ದರು.

ಸಭೆಯ ಬಳಿಕ ಯಾವೊಬ್ಬ ನಾಯಕರೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಅಲಯನ್ಸ್ ವಕ್ತಾರ ಯೂಸುಫ್ ತರಿಗಾಮಿ ಸೋಮವಾರ ಲಿಖಿತ ಹೇಳಿಕೆ ಕೊಡುವುದಾಗಿ ತಿಳಿಸಿದರು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜತೆ ನಡೆದಿದ್ದ ಚರ್ಚೆ ಕುರಿತು ಮಾತುಕತೆ ನಡೆಸಲಾಗಿದೆ ಎನ್ನಲಾಗ್ತಿದೆ.

ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಆಗಸ್ಟ್ 4, 2019 ರಂತೆ ಜಮ್ಮು ಮತ್ತು ಕಾಶ್ಮೀರದ ಸ್ಥಾನವನ್ನು ಪುನಃಸ್ಥಾಪಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಪಡಿಸಿತ್ತು.

ಇದನ್ನೂ ಓದಿ:ಗೋವಿನ ಹೆಸರಲ್ಲಿ ಹಿಂಸೆ ಹಿಂದುತ್ವ ವಿರೋಧಿ ನಡೆ; ದೇಶದಲ್ಲಿ ಹಿಂದೂ ಅಥವಾ ಮುಸ್ಲಿಂ ಪ್ರಾಬಲ್ಯ ಸಾಧ್ಯವಿಲ್ಲ: ಮೋಹನ್ ಭಾಗವತ್

ಕೇಂದ್ರದ ನಿರ್ಧಾರವನ್ನು ಗುಪ್ಕರ್ ಒಕ್ಕೂಟ ಈವರೆಗೂ ಒಪ್ಪಿಕೊಂಡಿಲ್ಲ. ಅಲ್ಲದೆ, 2019ರ ಆಗಸ್ಟ್ 4 ರವರೆಗೆ ಇದ್ದ ಸ್ಥಾನವನ್ನು ಜಮ್ಮುಕಾಶ್ಮೀರದಲ್ಲಿ ಪುನಃಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮೈತ್ರಿ ಕೂಟ ಒತ್ತಾಯಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.