ಭರೂಚ್ (ಗುಜರಾತ್): ಆಗಸ್ಟ್ 23ರಂದು ಗುಜರಾತ್‌ನ ಭರೂಚ್ ಜಿಲ್ಲೆಯ ಜಂಬೂಸರ್ ಬಳಿಯ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಘಟನೆ ನಡೆದಿತ್ತು. ಈ ಘಟನೆ ಹಿನ್ನೆಲೆ, ಇಂದು (ಗುರುವಾರ) ಮತ್ತೆ 10 ಜನ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಕಾರ್ಮಿಕರ ಸಂಖ್ಯೆಯು ಪ್ರಸ್ತುತ 28ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೋಮಿನ್ ಅನಿಲ ಸೋರಿಕೆ- ಆರೋಪ: ಜಿಲ್ಲೆಯ ಸರೋದ್ ಗ್ರಾಮದಲ್ಲಿರುವ ಪಿಐ ಇಂಡಸ್ಟ್ರೀಸ್ನಲ್ಲಿರುವ ಶೇಖರಣಾ ತೊಟ್ಟಿಯಲ್ಲಿ ಬೆಂಕಿ ಏಕಾಏಕಿ ಸೋರಿಕೆಯಾದ ಪರಿಣಾಮ ಬ್ರೋಮಿನ್ ಅನಿಲ ಸೋರಿಕೆಯಾಗಿದೆ. ಬಳಿಕ ತೀವ್ರ ಉಸಿರಾಟದ ತೊಂದರೆ ಆಯಿತು ಎಂದು ಸಂತ್ರಸ್ತ ಕಾರ್ಮಿಕರು ದೂರಿದ್ದಾರೆ.
ಭರೂಚ್ ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ಆರ್. ಧಂಧಲ್ ಅವರು ಹೇಗೆ ಅನಿಲ ಸೋರಿಕೆಯಾಗಿದೆ ಎಂಬುದರ ಕುರಿತು ಪರಿಶೀಲಿಸಿದರು. ವೇದಾಚ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೈಶಾಲಿ ಅಹಿರ್ ಪ್ರಕಾರ, ಬುಧವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದ ಸಮಯದಲ್ಲಿ ಕಾರ್ಖಾನೆಯ ಆವರಣದಲ್ಲಿ ಸುಮಾರು 2,000 ಕಾರ್ಮಿಕರು ಇದ್ದರು. ಸ್ಥಳದಿಂದ ಎಲ್ಲ ಕಾರ್ಮಿರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತ್ವರಿತ ಕ್ರಮ ಕೈಗೊಳ್ಳಲಾಗಿತ್ತು. ಅವರ ಯೋಗಕ್ಷೇಮವನ್ನು ವಿಚಾರಿಸಲಾಗಿದೆ ಎಂದರು.
"ಅನಿಲ ಟ್ಯಾಂಕ್‌ಗೆ ಸಮೀಪದಲ್ಲಿದ್ದ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇದರ ಜೊತೆಗೆ ವಿವಿಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಅಹಿರ್ ತಿಳಿಸಿದರು. ಅನಿಲ ಸೋರಿಕೆ ಮತ್ತು ನಂತರದ ಬೆಂಕಿ ಏಕಾಏಕಿ ಮೂಲ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. (IANS)
ಇತ್ತೀಚಿನ ಪ್ರಕರಣ, ಬಿಹಾರದ ಡೈರಿ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ: Updated: Jun 25, 2023, 2:50 PM |
ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿರುವ ಡೈರಿ ಕಾರ್ಖಾನೆಯಲ್ಲಿ ಜೂನ್ 25ರಂದು ರಾತ್ರಿ ಅಮೋನಿಯಾ ಅನಿಲ ಸೋರಿಕೆಯಾಗಿತ್ತು. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. 35 ಜನರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದವರನ್ನು ಬೇರೆ ಖಾಸಗಿ ನರ್ಸಿಂಗ್ ಹೋಂಗಳಿಗೆ ದಾಖಲು ಮಾಡಲಾಗಿತ್ತು. ಕಾರ್ಖಾನೆಯಲ್ಲಿ ಸೋರಿಕೆಯಾಗಿದ್ದ ಅಮೋನಿಯಾ ಅನಿಲವು ಸುತ್ತಲಿನ ಪ್ರದೇಶದ ನಾಲ್ಕು ಕಿಮೀ ವ್ಯಾಪ್ತಿಯವರೆಗೆ ಹರಡಿಕೊಂಡಿತ್ತು. ಮೃತ ವ್ಯಕ್ತಿ ರಾಜ್ ಫ್ರೆಶ್ ಡೈರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿದ್ದವು. ಪೊಲೀಸರು ಅನಿಲ ಸೋರಿಕೆಯ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ: ಮಿಜೋರಾಂ: ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿತ ಪ್ರಕರಣ: ಮುಂದುವರೆದ ಶೋಧ, ರಕ್ಷಣಾ ಕಾರ್ಯಾಚರಣೆ