ETV Bharat / bharat

ಟೆಕ್ಸ್​ಟೈಲ್ಸ್​​ನಲ್ಲಿ ಭೀಕರ ಸ್ಫೋಟಕ್ಕೆ 12 ಮಂದಿ ಸಾವು: ತಲಾ 4 ಲಕ್ಷ ರೂ. ಪರಿಹಾರ, ನಮೋ ಸಂತಾಪ - ಅಹಮದಾಬಾದ್​​ ಅಗ್ನಿ ಅವಘಡಕ್ಕೆ 10 ಮಂದಿ ಸಾವು

ನಾನುಕಾಕಾ ಎಸ್ಟೇಟ್​​​ನಲ್ಲಿರುವ ಟೆಕ್ಸ್​ಟೈಲ್ಸ್​​​​ನ ಗೋಡೌನ್​​​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 12 ಮಂದಿ ಸಾವನ್ನಪ್ಪಿದ್ದಾರೆ.

Ahmedabad
Ahmedabad
author img

By

Published : Nov 4, 2020, 8:43 PM IST

ಅಹಮದಾಬಾದ್​: ಗುಜರಾತ್​ನ ಅಹಮದಾಬಾದ್​ನಲ್ಲಿರುವ ಟೆಕ್ಸ್​ಟೈಲ್ಸ್​​ ಉಗ್ರಾಣದಲ್ಲಿ ಉಂಟಾದ ಭೀಕರ ಸ್ಫೋಟಕ್ಕೆ 12 ಮಂದಿ ಸಾವನ್ನಪ್ಪಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.’ ’ನಾನುಕಾಕಾ’’ದ ಪಿಪ್ಲಾಜ್​ ರಸ್ತೆಯಲ್ಲಿರುವ ಟೆಕ್ಸ್​ಟೈಲ್ಸ್​​​​ ಗೋಡೌನ್​​​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ದುರ್ಘಟನೆ ನಡೆದಿದೆ.

ಟೆಕ್ಸ್​ಟೈಲ್ಸ್​​​ ಉಗ್ರಾಣದಲ್ಲಿನ ಬ್ಲಾಸ್ಟ್​ಗೆ 10 ಮಂದಿ ಸಾವು ... ಸಿಸಿಟಿವಿಯಲ್ಲಿ ಭೀಕರ ದೃಶ್ಯ!

ಗುಜರಾತ್​ನ ಅಹಮದಾಬಾದ್​ನ ಪಿಪ್ಲಜ್​ ರಸ್ತೆಯಲ್ಲಿರುವ ಉಗ್ರಾಣದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಲವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ಪ್ರಧಾನಿ ಮೋದಿ ಸಂತಾಪ

  • CM Shri @vijayrupanibjp announces ex-gratia of Rs.4 lakh to the families of each victim of Ahmedabad fire mishap and deputed two senior officials for the investigation of the tragedy.

    — CMO Gujarat (@CMOGuj) November 4, 2020 " class="align-text-top noRightClick twitterSection" data=" ">

ಅಹಮದಾಬಾದ್​ನ ಗೋದಾಮಿನಲ್ಲಿ ನಡೆದಿರುವ ಬೆಂಕಿ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಬೆಂಕಿ ಅವಘಡದಲ್ಲಿ ಸಾವನ್ನಪ್ಪಿರುವ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿರುವ ನಮೋ, ಅಧಿಕಾರಿಗಳು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿರುವವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.