ಗಾಂಧಿನಗರ : ಕಳೆದ ಎರಡು ವರ್ಷಗಳಲ್ಲಿ ಗುಜರಾತ್‌ನ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವಾಗ ನವಜಾತ ಆರೈಕೆ ಘಟಕದಲ್ಲಿ (ಎಸ್‌ಎನ್‌ಸಿಯು) ಸುಮಾರು 13,000 ಶಿಶುಗಳು ಸಾವನ್ನಪ್ಪಿವೆ ಎಂದು ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಬುಧವಾರ ಮಾಹಿತಿ ನೀಡಿದ್ರು.
ಕಾಂಗ್ರೆಸ್ ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಈ ಮಾಹಿತಿ ನೀಡಿದರು. 2020ರ ಡಿಸೆಂಬರ್ವರೆಗೆ ಕಳೆದ ಎರಡು ವರ್ಷಗಳಲ್ಲಿ ಒಟ್ಟು 13,496 ಶಿಶುಗಳು ಎಸ್‌ಎನ್‌ಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ ಎಸ್‌ಎನ್‌ಸಿಯುಗಳಲ್ಲಿ ಪ್ರತಿದಿನ ಸರಾಸರಿ 18 ಶಿಶುಗಳು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಮಂಡಿಸಿದ ಅಂಕಿ-ಅಂಶದಲ್ಲಿ ಬಹಿರಂಗವಾಗಿದೆ. ಅಹಮದಾಬಾದ್ ಜಿಲ್ಲೆಯಲ್ಲಿ ಗರಿಷ್ಠ ಅಂದ್ರೇ 3,134 ಮಕ್ಕಳು ಸಾವನ್ನಪ್ಪಿವೆ.
ಮಹಿಸಾಗರ್, ಅರಾವಳ್ಳಿ, ಬೊಟಾಡ್, ಆನಂದ್ ಮತ್ತು ದೇವ್ಭೂಮಿ-ದ್ವಾರಕಾ ಜಿಲ್ಲೆಗಳಲ್ಲಿ ಅಂತಹ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಆರೋಗ್ಯ ಸಚಿವ ಪಟೇಲ್ ಹೇಳಿದ್ದಾರೆ.
ಓದಿ:ರಾಜಸ್ಥಾನದ ಕೋಟಾ ಮಾದರಿಯಲ್ಲಿ ಗುಜರಾತ್ನಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್: ವಿಜಯ್ ರೂಪಾಣಿ
ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ 1.06 ಲಕ್ಷ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಎನ್‌ಸಿಯುಗಳಿಗೆ ದಾಖಲಿಸಲಾಗಿದೆ. ಈ ಪೈಕಿ 69,000 ಮಕ್ಕಳು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದರೆ, 38,000 ಇತರ ಆಸ್ಪತ್ರೆಗಳಲ್ಲಿ ಜನಿಸಿದ್ದಾರೆ ಮತ್ತು ಅವರನ್ನು ಎಸ್‌ಎನ್‌ಸಿಯುಗಳಿಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಶಿಶುಗಳಲ್ಲಿ ಕನಿಷ್ಠ 13,496 ಉಳಿಸಲು ಸಾಧ್ಯವಿಲ್ಲ ಎಂದು ಪಟೇಲ್ ಹೇಳಿದರು. ಎಲ್ಲಾ ಎಸ್‌ಎನ್‌ಸಿಯುಗಳಲ್ಲಿ ಚಿಕಿತ್ಸೆ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ನವಜಾತ ಶಿಶುಗಳ ಸಾವನ್ನು ತಡೆಯಲು ಸರ್ಕಾರ ಬದ್ಧ ಎಂದು ಅವರು ಸದನಕ್ಕೆ ಭರವಸೆ ನೀಡಿದರು.
ಎಸ್‌ಎನ್‌ಸಿಯುಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ದಾದಿಯರ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಈ ಕೇಂದ್ರಗಳಿಗೆ ಅಗತ್ಯ ವೈದ್ಯಕೀಯ ಸಾಧನಗಳನ್ನು ತ್ವರಿತ ಒದಗಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದರು.