ಕಚ್ (ಗುಜರಾತ್): ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಗುಜರಾತ್‌ನ ಕಚ್‌ನ ಮುಂದ್ರಾ ಬಂದರಿನಿಂದ ಅಂದಾಜು ₹9,000 ಕೋಟಿ ಮೌಲ್ಯದ ಹೆರಾಯಿನ್ ಹೊಂದಿರುವ ಕಂಟೇನರ್‌ಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾಗಿದೆ. ದೋಣಿ ಕಂಡ ಅಧಿಕಾರಿಗಳು ಪರಿಶೀಲನೆಗಾಗಿ ತಡೆದಿದ್ದಾರೆ. ಈ ವೇಳೆ ಶೋಧ ನಡೆಸಿದಾಗ ಟಾಲ್ಕಂ ಪೌಡರ್ ನೆಪದಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಅನ್ನು ಆಮದು ಮಾಡಿಕೊಳ್ಳುತ್ತಿರುವುದು ಪತ್ತೆಯಾಗಿದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಆಶಿ ಟ್ರೇಡಿಂಗ್ ಸಂಸ್ಥೆಯು ಅಫ್ಘಾನಿಸ್ತಾನದಿಂದ ಮುಂದ್ರಾ ಬಂದರಿಗೆ ಕಂಟೇನರ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ರಫ್ತು ಮಾಡುವ ಸಂಸ್ಥೆಯನ್ನು ಅಫ್ಘಾನಿಸ್ತಾನದ ಕಂದಹಾರ್ ಮೂಲದ ಹಸನ್ ಹುಸೇನ್ ಲಿಮಿಟೆಡ್ ಎಂದು ಗುರುತಿಸಲಾಗಿದೆ.
ಕಳೆದ ಐದು ದಿನಗಳಿಂದ ಡಿಆರ್‌ಐ ಮತ್ತು ಕಸ್ಟಮ್ಸ್ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ಮುಂಬೈ: ಮತ್ತೋರ್ವ ಶಂಕಿತ ಉಗ್ರನ ಬಂಧಿಸಿದ ಭಯೋತ್ಪಾದನಾ ನಿಗ್ರಹ ದಳ