ETV Bharat / bharat

ರಾಜ್ಯ ಸರ್ಕಾರಿ ನೌಕರರು Jio ಬಳಸುವಂತೆ ಗುಜರಾತ್ ಸರ್ಕಾರ ಆದೇಶ - ಗುಜರಾತ್​ ಸರ್ಕಾರಿ ನೌಕರರಿಗೆ ರಿಲೆಯನ್ಸ್​ ಜಿಯೋ

ಗುಜರಾತ್​ ಸರ್ಕಾರ ತನ್ನ ಸರ್ಕಾರಿ ಉದ್ಯೋಗಿಗಳಿಗೆ ವೊಡಾಫೋನ್-ಐಡಿಯಾದಿಂದ ರಿಲಯನ್ಸ್​ ಜಿಯೋಗೆ ವರ್ಗಾವಣೆಯಾಗುವಂತೆ ತಿಳಿಸಿದೆ.

jio
ಜಿಯೋ
author img

By

Published : May 9, 2023, 10:28 AM IST

ಗಾಂಧಿನಗರ (ಗುಜರಾತ್) : ವೊಡಾಫೋನ್-ಐಡಿಯಾ ಕಂಪನಿಯ ದೂರವಾಣಿ ಸೌಲಭ್ಯ ಬಳಸುತ್ತಿದ್ದ ಗುಜರಾತ್​ ಸರ್ಕಾರಿ ನೌಕರರು ರಿಲಯನ್ಸ್​ ಜಿಯೋಗೆ ವರ್ಗಾವಣೆಯಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ, ಉದ್ಯೋಗಿಗಳು 37.50 ರೂಪಾಯಿಗೆ ಜಿಯೋ ಮಾಸಿಕ ರೆಂಟಲ್​ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆ ಯಾವುದೇ ಮೊಬೈಲ್​ ಆಪರೇಟರ್​ ಅಥವಾ ಲ್ಯಾಂಡ್‌ಲೈನ್‌ನಲ್ಲಿ ಉಚಿತ ಕರೆ ಸೌಲಭ್ಯ ನೀಡುತ್ತದೆ. ಪ್ರತಿ ತಿಂಗಳು 3,000 SMSಗಳನ್ನು ಉಚಿತವಾಗಿ ಪಡೆಯಬಹುದು. ಸೋಮವಾರದಿಂದಲೇ ಸರ್ಕಾರಿ ನೌಕರರಿಗೆ ಮೊದಲಿದ್ದ ವೊಡಾಫೋನ್-ಐಡಿಯಾ ಸೇವೆ ನಿಲ್ಲಿಸಲಾಗಿದೆ.

ಉದ್ಯೋಗಿಗಳ ಮೊಬೈಲ್​ ಸಂಖ್ಯೆಯನ್ನು ರಿಲಯನ್ಸ್ ಜಿಯೋಗೆ ವರ್ಗಾವಣೆ ಮಾಡಲಾಗಿದೆ. ಇದುವರೆಗೆ ಗುಜರಾತ್‌ನಲ್ಲಿ ಸರ್ಕಾರಿ ನೌಕರರ ಅಧಿಕೃತ ಸಂಪರ್ಕ ಸಂಖ್ಯೆ ವೊಡಾಫೋನ್-ಐಡಿಯಾ ಕಂಪನಿಯದ್ದಾಗಿತ್ತು. ಪೋಸ್ಟ್‌ಪೇಯ್ಡ್ ಮೊಬೈಲ್ ಸಂಖ್ಯೆಗಳನ್ನು ನಿರಂತರವಾಗಿ ಬಳಸುತ್ತಿದ್ದರು. ಮೇ 8, 2023 ರಂದು ಗುಜರಾತ್ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದ್ದು, ತಕ್ಷಣವೇ ಜಾರಿಗೆ ಬರುವಂತೆ ಜಿಯೋ ಸಂಖ್ಯೆ ಬಳಸಬೇಕು ಎಂದು ಸೂಚಿಸಲಾಗಿದೆ.

ಜಿಯೋ ಜೊತೆಗಿನ ಒಪ್ಪಂದದ ಪ್ರಕಾರ, ಸರ್ಕಾರಿ ಉದ್ಯೋಗಿಗಳಿಗೆ ಈ ಯೋಜನೆಯಡಿ ತಿಂಗಳಿಗೆ 30 ಜಿಬಿ 4ಜಿ ಡೇಟಾ ಸಿಗುತ್ತದೆ. ಈ ಮಿತಿ ಮುಗಿದ ನಂತರ ಡೇಟಾ ಹೆಚ್ಚಿಸಲು 25 ರೂಪಾಯಿಯನ್ನು ಯೋಜನೆಗೆ ಖರ್ಚು ಮಾಡಬೇಕಾಗುತ್ತದೆ. ಹೆಚ್ಚುವರಿ ಶುಲ್ಕದ ಮೂಲಕ 60 ಜಿಬಿ ವರೆಗಿನ 4G ಡೇಟಾ ಲಭ್ಯವಿರುತ್ತದೆ. 4G ಅನಿಯಮಿತ ಯೋಜನೆ ಪಡೆಯಲು ತಿಂಗಳಿಗೆ 125 ರೂಪಾಯಿ ನೀಡಬೇಕಾಗುತ್ತದೆ. ಇದರ ಜೊತೆಗೆ 4G ಬೆಲೆಯಲ್ಲಿ 5G ಯೋಜನೆ ದೊರೆಯುತ್ತದೆ.

ಈಗಾಗಲೇ ವೋಡಾ-ಐಡಿಯಾ ಸಂಖ್ಯೆ ಬಳಸುತ್ತಿರುವ ಉದ್ಯೋಗಿಗಳು ಮೊಬೈಲ್ ಪೋರ್ಟಬಿಲಿಟಿ ಮೂಲಕ ಜಿಯೋಗೆ ವರ್ಗಾಯಿಸುವ ಮೂಲಕ ಅದೇ ಸಂಖ್ಯೆಯನ್ನು ಬಳಸಲಿದ್ದಾರೆ. ಮೊಬೈಲ್​ ಸಂಪರ್ಕ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮೋಚಾ ಚಂಡಮಾರುತ ಎಫೆಕ್ಟ್: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.