ಹೈದರಾಬಾದ್/ಗಾಂಧಿನಗರ: 'ಅತಿ ತೀವ್ರ ಸ್ವರೂಪ ಚಂಡಮಾರುತ'ವಾಗಿ ಬದಲಾಗಿರುವ ಬಿಪೊರ್ಜೋಯ್ ಜೂನ್ 15 ರ ವೇಳೆಗೆ ಗುಜರಾತ್‌ನ ಸೌರಾಷ್ಟ್ರ ಮತ್ತು ಕಛ್ ಬಂದರಿಗೆ ಬಂದಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪ್ರಭಾವದಿಂದ ಜುನಾಗಢ ಮತ್ತು ಗಿರ್ ಸೋಮನಾಥ್ ಜಿಲ್ಲೆಗಳಲ್ಲಿ ಸರಾಸರಿ ಎರಡೂವರೆ ಇಂಚಿನಷ್ಟು ಮಳೆ ಸುರಿದಿದೆ. ಮಹಾರಾಷ್ಟ್ರದಲ್ಲಿ ಎಚ್ಚರಿಕೆ ಮಧ್ಯೆಯೂ ಸಮುದ್ರಕ್ಕಿಳಿದಿದ್ದ ಐವರು ನೀರು ಪಾಲಾಗಿದ್ದು, ಇದರಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
-
VSCS Biparjoy lay centered at 0230 IST of the 13th June, 2023 over Northeast and adjoining Eastcentral Arabian Sea about 290 km southwest of Porbandar & 360 km south-southwest of Jakhau Port. To cross Saurashtra & Kutch near Jakhau Port by evening of 15th June as a VSCS. pic.twitter.com/aTM24KvUsT
— India Meteorological Department (@Indiametdept) June 13, 2023 " class="align-text-top noRightClick twitterSection" data="
">VSCS Biparjoy lay centered at 0230 IST of the 13th June, 2023 over Northeast and adjoining Eastcentral Arabian Sea about 290 km southwest of Porbandar & 360 km south-southwest of Jakhau Port. To cross Saurashtra & Kutch near Jakhau Port by evening of 15th June as a VSCS. pic.twitter.com/aTM24KvUsT
— India Meteorological Department (@Indiametdept) June 13, 2023VSCS Biparjoy lay centered at 0230 IST of the 13th June, 2023 over Northeast and adjoining Eastcentral Arabian Sea about 290 km southwest of Porbandar & 360 km south-southwest of Jakhau Port. To cross Saurashtra & Kutch near Jakhau Port by evening of 15th June as a VSCS. pic.twitter.com/aTM24KvUsT
— India Meteorological Department (@Indiametdept) June 13, 2023
ಬಿಪೊರ್ಜೋಯ್ ಚಂಡಮಾರುತ ಅರೇಬಿಯನ್ ಸಮುದ್ರದಿಂದ ಮಧ್ಯರಾತ್ರಿ 2.30 ರ ವೇಳೆಗೆ ಪೋರಬಂದರ್‌ನಿಂದ ನೈಋತ್ಯಕ್ಕೆ 290 ಕಿಮೀ ಮತ್ತು ಜಖೌ ಬಂದರಿನ ನೈಋತ್ಯಕ್ಕೆ 360 ಕಿಮೀ ದೂರದಲ್ಲಿದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ಆರೆಂಜ್ ಅಲರ್ಟ್ ಪ್ರಕಾರ, ಪ್ರಬಲ ಚಂಡಮಾರುತ ಸ್ವರೂಪ ಪಡೆದಿರುವ ಬಿಪೊರ್ಜೊಯ್ ನಾಡಿದ್ದು, ಗುಜರಾತ್ಗೆ ಅಪ್ಪಳಿಸಲಿದೆ. ವಿವಿಧೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕರಾವಳಿ ತೀರ ಜನರ ಸ್ಥಳಾಂತರ: ಗುಜರಾತ್‌ನ ಕಚ್, ಸೌರಾಷ್ಟ್ರ ಜಿಲ್ಲೆಗಳಲ್ಲಿ ಕರಾವಳಿಯಿಂದ 10 ಕಿ.ಮೀ ದೂರದಲ್ಲಿರುವ ಹಳ್ಳಿಗಳ ಜನರನ್ನು ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗಿದೆ. ಚಂಡಮಾರುತದ ಹಾನಿಯನ್ನು ತಡೆಯಲು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಈ ಸೈಕ್ಲೋನ್ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಜನರನ್ನು ಸ್ಥಳಾಂತರಿಸುವುದು ಮತ್ತು ಬಂದರು ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಮುಖ್ಯ ಪ್ರಯತ್ನಗಳಾಗಿವೆ. ಇಲ್ಲಿಯವರೆಗೆ, ಕರಾವಳಿ ಪ್ರದೇಶಗಳ ತಗ್ಗು ಪ್ರದೇಶದಲ್ಲಿ ವಾಸಿಸುವ ಸುಮಾರು 7,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗುಜರಾತ್‌ನ ಅಧಿಕಾರಿಗಳು ತಿಳಿಸಿದ್ದಾರೆ.
-
#WATCH | All 50 personnel have been evacuated today morning from jack-up rig 'Key Singapore' operating off Dwarka coast near Okha, Gujarat by the Indian Coast Guard ALH Dhruv helicopters: ICG officials
— ANI (@ANI) June 13, 2023 " class="align-text-top noRightClick twitterSection" data="
(Video: Indian Coast Guard) pic.twitter.com/Bj4Nb2s07Z
">#WATCH | All 50 personnel have been evacuated today morning from jack-up rig 'Key Singapore' operating off Dwarka coast near Okha, Gujarat by the Indian Coast Guard ALH Dhruv helicopters: ICG officials
— ANI (@ANI) June 13, 2023
(Video: Indian Coast Guard) pic.twitter.com/Bj4Nb2s07Z#WATCH | All 50 personnel have been evacuated today morning from jack-up rig 'Key Singapore' operating off Dwarka coast near Okha, Gujarat by the Indian Coast Guard ALH Dhruv helicopters: ICG officials
— ANI (@ANI) June 13, 2023
(Video: Indian Coast Guard) pic.twitter.com/Bj4Nb2s07Z
ಕಾಂಡ್ಲಾ ಬಂದರು ಬಂದ್: ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕಾಂಡ್ಲಾ ಬಂದರಿನಲ್ಲಿ ಹಡಗುಗಳ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಅಲ್ಲಿನ ಕಾರ್ಮಿಕರು ಸೇರಿದಂತೆ 3,000 ಜನರನ್ನು ಜಿಲ್ಲಾಡಳಿತ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ. ಕಛ್ ಜಿಲ್ಲೆಯಲ್ಲಿರುವ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬಂದರಾದ ದೀನದಯಾಳ್ ಬಂದರಿನಲ್ಲಿ ಕೆಲಸವನ್ನು ಸ್ಥಗಿತಗೊಳಿಸಿಸಲಾಗಿದೆ.
ಸಿಗ್ನಲ್ 10 ಎಚ್ಚರಿಕೆಯ ದೃಷ್ಟಿಯಿಂದ ಬಂದರನ್ನು ಮುಚ್ಚಲಾಗಿದೆ. ಗುರುತಿಸಲಾದ ಪ್ರದೇಶದಲ್ಲಿ ಎಲ್ಲಾ ದೋಣಿಗಳು, ವಸ್ತುಗಳು ಮತ್ತು ಬಾರ್ಜ್‌ಗಳನ್ನು ಕಟ್ಟಿ ಹಾಕಲಾಗಿದೆ. 24x7 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿನ ಎಲ್ಲ ಕಾರ್ಮಿಕರು ಮತ್ತು ಮೀನುಗಾರರನ್ನು ಸ್ಥಳಾಂತರಿಸಲಾಗಿದೆ ಎಂದು ದೀನದಯಾಳ್ ಬಂದರು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.
ಜೂನ್ 16 ರವರೆಗೆ ರೈಲು ಬಂದ್: ವಾಯುವ್ಯ ರೈಲ್ವೇ ತನ್ನ ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಚಂಡಮಾರುತದ ದೃಷ್ಟಿಯಿಂದ ಸುರಕ್ಷತೆ ಮತ್ತು ಭದ್ರತೆಗಾಗಿ ಕೆಲ ರೈಲು ಸೇವೆಗಳನ್ನು ಜೂನ್ 16 ರವರೆಗೆ ಸಂಪೂರ್ಣ, ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎರಡೂವರೆ ಇಂಚು ಮಳೆ: ಚಂಡಮಾರುತದ ಪ್ರಭಾವದಿಂದ ಜುನಾಗಢ ಮತ್ತು ಗಿರ್ ಸೋಮನಾಥ್ ಜಿಲ್ಲೆಗಳಲ್ಲಿ ಸರಾಸರಿ ಎರಡೂವರೆ ಇಂಚು ಮಳೆಯಾಗಿದೆ. ಇದರಿಂದ ಜುನಾಗಢ ಜಿಲ್ಲೆಯ ಮ್ಯಾಂಗ್ರೋಲ್‌ನ ಹಲವೆಡೆ ಮಳೆ ನೀರು ತುಂಬಿಕೊಂಡಿದೆ. ಮೊದಲ ಮಳೆಯೇ ಮ್ಯಾಂಗ್ರೋಲ್ ನಗರವನ್ನು ಜಲಾವೃತ ಮಾಡಿದೆ.
ಬಿಪೊರ್ಜೋಯ್ ಚಂಡಮಾರುತವು ಅಧಿಕ ಮಳೆಯಾಗುವ ಮುನ್ಸೂಚನೆ ನೀಡಿದೆ. ನಿನ್ನೆಯಿಂದ ವಾತಾವರಣದಲ್ಲಿ ಬದಲಾವಣೆ ಆಗಿದ್ದು, ವೆರಾವಲ್, ಜುನಾಗಢ, ಕೇಶೋಡ್, ಮಲಿಯಾ, ಮಂಗ್ರೋಲ್ ಮತ್ತು ಸೂತ್ರಪದ ತಾಲೂಕುಗಳಲ್ಲಿ ಎರಡರಿಂದ ಎರಡೂವರೆ ಇಂಚಿನಷ್ಟು ಅಲ್ಲಲ್ಲಿ ಮಳೆಯಾಗಿದೆ. ಮತ್ತೊಂದೆಡೆ, ಜುನಾಗಢ ಜಿಲ್ಲೆಯ ಮಂಗ್ರೋಲ್ ಪಟ್ಟಣವು ನದಿಯಂತಾಗಿದೆ.
ಮಹಾರಾಷ್ಟ್ರದಲ್ಲಿ ಓರ್ವ ಸಾವು, ಇಬ್ಬರು ನಾಪತ್ತೆ: ಬಿಪೊರ್ಜೋಯ್ ಎಚ್ಚರಿಕೆಯ ಮಧ್ಯೆಯೂ ಮುಂಬೈನ ಜುಹು ಬೀಚ್‌ನಲ್ಲಿ ನಿನ್ನೆ ಸಮುದ್ರದಲ್ಲಿ ಇಳಿದ ಐವರು ಪ್ರವಾಸಿಗರು ನೀರಿಗೆ ಸೆಳೆದುಕೊಂಡು ಹೋಗಿದ್ದರು. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಿಸಿದ್ದರು. ಆದರೆ, ಅದರಲ್ಲಿ ಓರ್ವ ಮೃತಪಟ್ಟಿದ್ದಾನೆ. ಇನ್ನಿಬ್ಬರು ಈವರೆಗೂ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿದಿದೆ.