ಗಾಂಧಿನಗರ: ಗುಜರಾತ್ನ 8 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಕ್ಲೀನ್ ಸ್ವೀಪ್ನತ್ತ ದಾಪುಗಾಲು ಹಾಕಿದ್ದು, ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಟಾಂಗ್ ನೀಡಿ ಮುನ್ನಡೆ ಪಡೆದುಕೊಂಡಿದೆ.
8 ಕ್ಷೇತ್ರಗಳಲ್ಲಿ ಒಟ್ಟು 81 ಅಭ್ಯರ್ಥಿಗಳು ಕಣದಲ್ಲಿದ್ದರು. ಗುಜರಾತ್ನ ಅಬ್ದಾಸ್, ಕರ್ಜನ್, ಮೊರ್ಬಿ, ಗಡಾಡಾ, ಧಾರಿ, ಲಿಂಬ್ಡಿ, ಕಪ್ರದಾ ಮತ್ತು ಡಂಗ್ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ಈ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.
-
Gandhinagar: Bharatiya Janata Party leaders show victory sign as the party leads on all eight #Gujarat Assembly seats which voted in by-polls pic.twitter.com/qvbzL0vBYY
— ANI (@ANI) November 10, 2020 " class="align-text-top noRightClick twitterSection" data="
">Gandhinagar: Bharatiya Janata Party leaders show victory sign as the party leads on all eight #Gujarat Assembly seats which voted in by-polls pic.twitter.com/qvbzL0vBYY
— ANI (@ANI) November 10, 2020Gandhinagar: Bharatiya Janata Party leaders show victory sign as the party leads on all eight #Gujarat Assembly seats which voted in by-polls pic.twitter.com/qvbzL0vBYY
— ANI (@ANI) November 10, 2020
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಕೇಂದ್ರ ಚುನಾವಣಾ ಆಯೋಗ ಬೆಳಗ್ಗೆ 11ಗಂಟೆಯವರೆಗೆ ಬಿಜೆಪಿ ಶೆ.53.50ರಷ್ಟು ಮತ ಪಡೆದುಕೊಂಡಿದೆ. ಕಾಂಗ್ರೆಸ್ ಶೇ.35 ವೋಟ್ ಪಡೆದುಕೊಂಡಿದೆ. ಈ ಎಲ್ಲ ಕ್ಷೇತ್ರಗಳಲ್ಲೂ ನವೆಂಬರ್ 3ರಂದು ಚುನಾವಣೆ ನಡೆದಿತ್ತು. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿದೆ. ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ಗಾಂಧಿನಗರದಲ್ಲಿರುವ ಭಾರತೀಯ ಜನತಾ ಪಾರ್ಟಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭಗೊಂಡಿದೆ.
ವಿಶೇಷವಾಗಿ ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಮಣಿಪುರ ಹಾಗೂ ಕರ್ನಾಟಕದಲ್ಲೂ ಭಾರತೀಯ ಜನತಾ ಪಾರ್ಟಿ ಗೆಲುವು ದಾಖಲು ಮಾಡಿದೆ. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು.