ETV Bharat / bharat

ಗರ್ಬಾ ನೃತ್ಯ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಬಾಲಕ ಸಾವು.. ಸಂಭ್ರಮದ ಮಧ್ಯೆ ಮಡುಗಟ್ಟಿದ ಶೋಕ

ಗುಜರಾತ್​ನ ಖೇಡಾ ಜಿಲ್ಲೆಯಲ್ಲಿ 17 ವರ್ಷದ ಬಾಲಕ ಗರ್ಬಾ ನೃತ್ಯದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ.

Garba
ಗರ್ಬಾ
author img

By ANI

Published : Oct 22, 2023, 7:41 AM IST

ಖೇಡಾ (ಗುಜರಾತ್) : ಸದ್ಯ ದೇಶಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಗುಜರಾತ್​ನಲ್ಲಿ ಶೋಕದ ಘಟನೆಯೊಂದು ಸಂಭವಿಸಿದೆ. ಖೇಡಾ ಜಿಲ್ಲೆಯಲ್ಲಿ 17 ವರ್ಷದ ಬಾಲಕನೊಬ್ಬ ಗರ್ಬಾ ಆಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನವರಾತ್ರಿ ಹಬ್ಬದ ಆರನೇ ದಿನದಂದು ಈ ದಾರುಣ ಘಟನೆ ನಡೆದಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ. ಆಯುಷ್ ಪಟೇಲ್, "17 ವರ್ಷದ ಬಾಲಕ ವೀರ್ ಶಾ ಎಂಬಾತ ಕಪದ್ವಾಂಜ್‌ನ ಮೈದಾನದಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದಾಗ ತಲೆ ಸುತ್ತು ಬಂದು ಮೂರ್ಛೆ ಹೋಗಿದ್ದಾನೆ. ತಕ್ಷಣ ಅಲ್ಲಿದ್ದವರು ಅವನನ್ನು ಆರೈಕೆ ಮಾಡಿದ್ದಾರೆ. ಬಳಿಕ, ಘಟನಾ ಸ್ಥಳದಲ್ಲಿದ್ದ ಸ್ವಯಂಸೇವಕರ ತಂಡವು ತಕ್ಷಣವೇ ಆಸ್ಪತ್ರೆಗೆ ಕರೆತಂದಾಗ ನಾವು ಪರಿಶೀಲನೆ ನಡೆಸಿದ್ದು, ಬಾಲಕನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ನಾಡಿಮಿಡಿತ ಕೂಡ ನಿಂತು ಹೋಗಿತ್ತು" ಎಂದರು.

ಇನ್ನು, ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ. ವೀರ್ ಅವರ ತಂದೆ ರಿಪಾಲ್ ಶಾ ಸೇರಿದಂತೆ ಕುಟುಂಬಸ್ಥರು ಮಗನ ಸಾವಿನ ಸುದ್ದಿ ತಿಳಿದ ನಂತರ ಆಘಾತಕ್ಕೊಳಗಾಗಿದ್ದಾರೆ.

"ಗರ್ಬಾ ಆಡುವಾಗ ಜಾಗರೂಕರಾಗಿರಿ ಮತ್ತು ವಿಶ್ರಾಂತಿ ತೆಗೆದುಕೊಳ್ಳದೆ ನೃತ್ಯ ಮಾಡಬೇಡಿ, ಇಂದು ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ, ಅಂತಹ ದುಃಖದ ಘಟನೆ ಬೇರೆಯವರಿಗೆ ಎದುರಾಗಬಾರದು. ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಬಯಸುತ್ತೇನೆ" ಅಂತಾ ಮೃತ ಬಾಲಕನ ತಂದೆ ವಿನಂತಿ ಮಾಡಿದ್ದಾರೆ.

ಇದನ್ನೂ ಓದಿ : ನವರಾತ್ರಿ ಸಂಭ್ರಮ.. ಕಾರು, ದ್ವಿಚಕ್ರ ವಾಹನ ಓಡಿಸಿ ಮಹಿಳೆಯರಿಂದ ಗರ್ಬಾ ಪ್ರದರ್ಶನ - Video

ಒಂದು ದಿನದ ಮಟ್ಟಿಗೆ ಕಾರ್ಯಕ್ರಮ ಮುಂದೂಡಿಕೆ : ವೀರ್ ಶಾ ಮೃತಪಟ್ಟ ಹಿನ್ನೆಲೆ ಸಂಘಟಕರು ಬಾಲಕನಿಗೆ ಶ್ರದ್ಧಾಂಜಲಿ ಸಲ್ಲಿಸಲು ಎರಡು ನಿಮಿಷಗಳ ಕಾಲ ಮೌನ ಆಚರಿಸಿದರು. ನಿಧನದ ನಂತರ ಮೈದಾನದಲ್ಲಿ ಆಯೋಜಿಸಲಾಗಿದ್ದ ಗರ್ಬಾವನ್ನು ಮುಂದೂಡಲಾಯಿತು. ಇದಲ್ಲದೇ, ಕಪದ್ವಾಂಜ್ ನಗರ ಮತ್ತು ಸುತ್ತಮುತ್ತಲಿನ ಎಲ್ಲಾ ಗರ್ಬಾ ನೃತ್ಯ ಸಂಘಟಕರು ಸಹ ಒಂದು ದಿನದ ಮಟ್ಟಿಗೆ ಕಾರ್ಯಕ್ರಮಗಳನ್ನು ನಿಲ್ಲಿಸಿ ಸಂತಾಪ ಸೂಚಿಸಿದರು.

ಇದನ್ನೂ ಓದಿ : Watch.. ಕಳೆದ 9 ವರ್ಷಗಳಿಂದ ಮುಸ್ಲಿಂ ಯುವಕನಿಂದ ಗರ್ಬಾ ಆಯೋಜನೆ : ಕೋಮು ಸೌಹಾರ್ದತೆಗೆ ಸಾಕ್ಷಿ ಜುನಾಗಢ

ಗರ್ಬಾ ಗುಜರಾತ್‌ನ ಸಾಂಪ್ರದಾಯಿಕ ನೃತ್ಯ ಪ್ರಾಕಾರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅನೇಕ ಸಂಪ್ರದಾಯಗಳಂತೆ ಗರ್ಬಾ ಕೂಡ ಧಾರ್ಮಿಕ ಮಹತ್ವ ಪಡೆದುಕೊಂಡಿದೆ. ಅದರಲ್ಲೂ, ನವರಾತ್ರಿ ಸಮಯದಲ್ಲಿ ಇದರ ಪ್ರದರ್ಶನ ಇದ್ದೇ ಇರುತ್ತದೆ. (ಎಎನ್​ಐ)

ಇದನ್ನೂ ಓದಿ : ಖಡ್ಗ ಹಿಡಿದು ಗರ್ಬಾ ಡ್ಯಾನ್ಸ್​ ಮಾಡಿದ ಮಹಿಳೆಯರು.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.