ETV Bharat / bharat

ಇವರಾ ಬಂಧುಗಳು.. ತೆಲಂಗಾಣದಲ್ಲಿ ಮೊಮ್ಮಕ್ಕಳನ್ನು ಅಪಹರಿಸಿದ ಅಜ್ಜಿ.. 30 ಲಕ್ಷಕ್ಕೆ ಬೇಡಿಕೆ!! - ತೆಲಂಗಾಣದಲ್ಲಿ ಅಜ್ಜಿಯಿಂದ ಮೊಮ್ಮಕ್ಕಳ ಕಿಡ್ನ್ಯಾಪ್​

ರೂಹಿ ಇಬ್ಬರು ಮಕ್ಕಳನ್ನು ದೂರವಾಗಿ ಪರಿತಪಿಸುತ್ತಿರುವ ತಾಯಿ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ರೂಹಿಗೆ ಇಬ್ಬರು ಮಕ್ಕಳಿದ್ದು, ಕೆಲ ದಿನಗಳ ಹಿಂದಷ್ಟೇ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ, ತನ್ನ ತಾಯಿ ಮತ್ತು ಅಕ್ಕನನ್ನು ತನ್ನ ಜೊತೆ ಇರಿಸಿಕೊಂಡು ಜೀವನ ಮಾಡುತ್ತಿದ್ದರು.

ತೆಲಂಗಾಣದಲ್ಲಿ ಮೊಮ್ಮಕ್ಕಳನ್ನು ಅಪಹರಿಸಿದ ಅಜ್ಜಿ

author img

By

Published : Feb 17, 2022, 4:55 PM IST

Updated : Feb 18, 2022, 1:48 PM IST

ಹೈದರಾಬಾದ್​(ತೆಲಂಗಾಣ): ಹೆತ್ತ ತಾಯಿಯೇ ತನ್ನ ಮಗಳ ಮಕ್ಕಳನ್ನು(ಮೊಮ್ಮಕ್ಕಳು) 30 ಲಕ್ಷ ಹಣಕ್ಕಾಗಿ ಅಪಹರಿಸಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ರೂಹಿ ಇಬ್ಬರು ಮಕ್ಕಳಿಂದ ದೂರವಾಗಿ ಪರಿತಪಿಸುತ್ತಿರುವ ತಾಯಿ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ರೂಹಿಗೆ ಇಬ್ಬರು ಮಕ್ಕಳಿದ್ದು, ಕೆಲ ದಿನಗಳ ಹಿಂದಷ್ಟೇ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ ತಾಯಿ ಮತ್ತು ಅಕ್ಕನನ್ನು ತನ್ನ ಜೊತೆ ಇರಿಸಿಕೊಂಡು ಜೀವನ ಮಾಡುತ್ತಿದ್ದರು.

ತೆಲಂಗಾಣದಲ್ಲಿ ಮೊಮ್ಮಕ್ಕಳನ್ನು ಅಪಹರಿಸಿದ ಅಜ್ಜಿ

20 ದಿನಗಳ ಹಿಂದೆ ತನ್ನ ತಾಯಿ ಮತ್ತು ಅಕ್ಕ ತನ್ನಿಬ್ಬರು ಮಕ್ಕಳನ್ನು ಅಪಹರಿಸಿ, ಮನೆಯಲ್ಲಿದ್ದ ದಾಖಲೆ ಪತ್ರಗಳ ಸಮೇತ ನಾಪತ್ತೆಯಾಗಿದ್ದಾರೆ. ಮಕ್ಕಳು, ತಾಯಿಯ ಬಗ್ಗೆ ತನ್ನೆಲ್ಲ ಬಂಧುಗಳಲ್ಲಿ ವಿಚಾರಿಸಿದರೂ, ಯಾರೂ ಕೂಡ ಮಾಹಿತಿ ನೀಡಿಲ್ಲ. ಅಲ್ಲದೇ ತನ್ನ ಬಂಧುಗಳೇ ನನ್ನ ಮೇಲೆ ಹಲ್ಲೆ ಮಾಡಿ, ಫೋನ್​, ಬಂಗಾರದ ಸರ ಕಿತ್ತುಕೊಂಡಿದ್ದಾರೆ ಎಂದು ರೂಹಿ ಆರೋಪಿಸಿದ್ದಾರೆ.

ಅಲ್ಲದೇ, ಮಕ್ಕಳನ್ನು ಹಿಂತಿರುಗಿಸಬೇಕಾದರೆ 30 ಲಕ್ಷ ರೂಪಾಯಿ ನೀಡಬೇಕು ಎಂದು ಬಂಧುಗಳ ಕಡೆಯಿಂದ ತಾಯಿ, ಅಕ್ಕ ಬೇಡಿಕೆ ಇಟ್ಟಿದ್ದಾರೆ. ಮಕ್ಕಳು ಕಾಣೆಯಾಗಿ 20 ದಿನ ಕಳೆದಿವೆ. ಹೇಗಾದರೂ ಮಾಡಿ ತನ್ನೆರಡು ಮಕ್ಕಳನ್ನು ಹುಡುಕಿಕೊಡುವಂತೆ ರೂಹಿ ಅವರು ಕಣ್ಣೀರಿಟ್ಟಿದ್ದಾರೆ.

ತನ್ನ ಮಕ್ಕಳ ಬಗ್ಗೆ ಎಲ್ಲಿಯೂ ಸುಳಿವು ಸಿಗದೇ ಕಂಗೆಟ್ಟ ರೂಹಿ ಅವರು ಹೈದರಾಬಾದ್​ನಲ್ಲಿ ದೂರು ನೀಡಲು ಬಂದಾಗ, ಪೊಲೀಸರು ಮಿಯಾಪುರ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಿಸಲು ಅಲೆದಾಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೂಹಿ ಅವರ ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಓದಿ: ಕಾರವಾರ: ಮದುವೆ ದಿಬ್ಬಣದ ಟೆಂಪೋ ಪಲ್ಟಿ: 5 ಮಂದಿಗೆ ಗಾಯ

Last Updated : Feb 18, 2022, 1:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.