ETV Bharat / bharat

ಪ್ರಿಯಕರನನ್ನು ಮನೆಗೆ ಕರೆದು ಅಜ್ಜಿ ಕೈಗೆ ಸಿಕ್ಕಿಬಿದ್ದ ಚಾಲಾಕಿ.. ಲವರ್​ ಜತೆ ಸೇರಿ ವೃದ್ಧೆಯನ್ನೇ ಕೊಂದ ಮೊಮ್ಮಗಳು - ಪ್ರಿಯಕರನೊಂದಿಗೆ ಸೇರಿ ಅಜ್ಜಿಯ ಕೊಲೆಗೈದ ಮೊಮ್ಮಗಳು

Grand daughter kills her grandmother: ಅಜ್ಜಿಯ ಕೈಯಲ್ಲಿ ರೆಡ್​ಹ್ಯಾಂಡ್​ ಆಗಿ ಮೊಮ್ಮಗಳು ಸಿಕ್ಕಿಹಾಕಿಕೊಂಡಿದ್ದು, ಈ ವಿಷಯ ಬಹಿರಂಗ ಆಗುತ್ತದೆ ಎಂಬ ಭಯದಿಂದ ಪ್ರಿಯಕರನೊಂದಿಗೆ ಸೇರಿ ಆಕೆಯನ್ನು ಕೊಲೆಗೈದಿದ್ದಾಳೆ.

Grand daughter kills her grandmother
Grand daughter kills her grandmother
author img

By

Published : Mar 14, 2022, 3:56 PM IST

ಮಥುರಾ(ಉತ್ತರ ಪ್ರದೇಶ): ತಾವು ಪ್ರೀತಿಸಿರುವ ಸುದ್ದಿ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯದಲ್ಲಿ ಪ್ರಿಯಕರನ ಜೊತೆ ಸೇರಿ ಮೊಮ್ಮಗಳೇ ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ಮಥುರಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮಾರ್ಚ್​​ 8ರಂದು ಈ ಘಟನೆ ನಡೆದಿದ್ದು, ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಥುರಾದ ವಾಲೆಪಾಲಿ ಖೇಡಾ ಗ್ರಾಮದಲ್ಲಿ ವೃದ್ಧೆಯ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ಮೊಮ್ಮಗಳು ಹಾಗೂ ಆತನ ಪ್ರಿಯಕರ ಎಂಬುದು ತಿಳಿದು ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಶಕುಂತಲಾ(65) ವಾಲೆಪಾಲಿ ಖೇಡಾ ಗ್ರಾಮದಲ್ಲಿ ಮಗ ಹರಿ ಸಿಂಗ್ ಜೊತೆ ವಾಸವಾಗಿದ್ದರು. ಮಾರ್ಚ್​ 8ರಂದು ಹರಿ ಸಿಂಗ್ ತಮ್ಮ ಅತ್ತೆ ಮನೆಗೆ ಹೋಗಿದ್ದರು. ಈ ವೇಳೆ 14 ವರ್ಷದ ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿರಿ: 'ದಿ ಕಾಶ್ಮೀರ್​​ ಫೈಲ್ಸ್​​' ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ನೀಡಿದ ಮಧ್ಯಪ್ರದೇಶ

ಕೊಲೆಗೆ ಕಾರಣ ಏನು?: ಮನೆಯಲ್ಲಿ ಅಜ್ಜಿ ಮಾತ್ರವಿದ್ದ ಕಾರಣ ಪ್ರಿಯಕರನನ್ನ ಮೊಮ್ಮಗಳು ಮನೆಗೆ ಕರೆಯಿಸಿಕೊಂಡಿದ್ದಳು. ಈ ವೇಳೆ ಇಬ್ಬರು ಅಜ್ಜಿಯ ಕೈಯಲ್ಲಿ ರೆಡ್​ಹ್ಯಾಂಡ್​​ ಆಗಿ ಸಿಕ್ಕಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಅವರನ್ನ ಕೋಣೆಯಲ್ಲಿ ಕೂಡಿ ಹಾಕಿದ್ದಾಳೆ. ಅಲ್ಲಿಂದ ಹೊರಬರಲು ಯಶಸ್ವಿಯಾಗಿರುವ ಇಬ್ಬರು ತಮ್ಮ ಪ್ರೀತಿಯ ವಿಷಯ ಬಹಿರಂಗವಾಗುತ್ತದೆ ಎಂಬ ಭಯದಲ್ಲಿ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.

ಮಾರ್ಚ್​​ 9ರಂದು ಹರಿಸಿಂಗ್ ವಾಪಸ್ ಆದಾಗ ರಕ್ತದ ಮಡುವಿನಲ್ಲಿ ಬಿದ್ದಿರುವ ತಾಯಿಯ ಶವ ನೋಡಿ ಬೆಚ್ಚಿಬಿದ್ದಿದ್ದಾನೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆಕೆಯ ಮೊಮ್ಮಗಳನ್ನ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.