ETV Bharat / bharat

ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು ಅವೈಜ್ಞಾನಿಕ: ಏಮ್ಸ್​​ನ ಹಿರಿಯ ತಜ್ಞ - ಪ್ರಧಾನಿ ನರೇಂದ್ರ ಮೋದಿ

AIIMS epidemiologist statement on COVID vaccination: ದೇಶಕ್ಕೆ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಮತ್ತು ಸರಿಯಾದ ಸಮಯದಲ್ಲಿ ಪ್ರಧಾನಿ ಮೋದಿ ತೆಗೆದುಕೊಳ್ಳುವ ತೆಗೆದುಕೊಳ್ಳುವ ನಿರ್ಧಾರಗಳ ವಿಚಾರವಾಗಿ ನಾನು ಅವರ ಅಭಿಮಾನಿಯಾಗಿದ್ದೇನೆ. ಆದ್ರೆ ಮಕ್ಕಳಿಗೆ ಲಸಿಕೆ ನೀಡುವ ವಿಚಾರದಲ್ಲಿ ನಿರಾಸೆ ಹೊಂದಿದ್ದೇನೆ ಎಂದು ಏಮ್ಸ್ ತಜ್ಞರು ಹೇಳಿದ್ದಾರೆ.

Govt's decision to vaccinate children 'unscientific': Senior AIIMS epidemiologist
ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು ಅವೈಜ್ಞಾನಿಕ: ಏಮ್ಸ್​​ನ ಹಿರಿಯ ತಜ್ಞ
author img

By

Published : Dec 26, 2021, 3:06 PM IST

Updated : Dec 26, 2021, 3:16 PM IST

ನವದೆಹಲಿ: ಕೋವಿಡ್ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವ ಕೇಂದ್ರದ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದ ಕೋವಾಕ್ಸಿನ್ ಪ್ರಯೋಗಗಳ ಪ್ರಮುಖ ಸಂಶೋಧನಾಧಿಕಾರಿಯಾಗಿರುವ ಏಮ್ಸ್‌ನ ಸಾಂಕ್ರಾಮಿಕ ರೋಗಗಳ ತಜ್ಞರೊಬ್ಬರು ಹೇಳಿದ್ದು, ಇದರಿಂದ ಯಾವುದೇ ಪ್ರಯೋಜನ ಇಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿರುವ ಡಾ.ಸಂಜಯ್ ರೈ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಜಾರಿಗೊಳಿಸುವ ಮುನ್ನ ಈಗಾಗಲೇ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿದ ದೇಶಗಳ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಬೇಕೆಂದು ಸಲಹೆ ನೀಡಿದ್ದಾರೆ.

ಶನಿವಾರ ರಾತ್ರಿಯಷ್ಟೇ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ವಿರುದ್ಧ ಲಸಿಕೆಯನ್ನು ಜನವರಿ 3ರಿಂದ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದರು.

ಲಸಿಕೆ ನೀಡುವ ಪ್ರಕ್ರಿಯೆ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಮತ್ತು ಅವರ ಪೋಷಕರ ಆತಂಕವನ್ನು ಕಡಿಮೆ ಮಾಡುತ್ತದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಹೆಚ್ಚಿಸುವುದರೊಂದಿಗೆ ಶಾಲೆಗಳಲ್ಲಿ ಬೋಧನೆ ಸಾಮಾನ್ಯ ಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ಮೋದಿ ಹೇಳಿದ್ದರು.

AIIMS Epidemiologist on Central Government: ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜಯ್​ ರೈ, ದೇಶಕ್ಕೆ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಮತ್ತು ಸರಿಯಾದ ಸಮಯದಲ್ಲಿ ಪ್ರಧಾನಿ ಮೋದಿ ತೆಗೆದುಕೊಳ್ಳುವ ತೆಗೆದುಕೊಳ್ಳುವ ನಿರ್ಧಾರಗಳ ವಿಚಾರವಾಗಿ ನಾನು ಅವರ ಅಭಿಮಾನಿಯಾಗಿದ್ದೇನೆ. ಆದ್ರೆ ಮಕ್ಕಳಿಗೆ ಲಸಿಕೆ ನೀಡುವ ಅವರ ಅವೈಜ್ಞಾನಿಕ ನಿರ್ಧಾರದಿಂದ ನಾನು ನಿರಾಸೆಗೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

  • @PMOIndia
    I am a great fan of PM Modi for his selfless service to nation and taking right decisions at right time. But I am completely disappointed with his unscientific decision on children vaccination.

    — Dr Sanjay K Rai (@drsanjaykrai) December 25, 2021 " class="align-text-top noRightClick twitterSection" data=" ">

ಲಸಿಕೆಗಳ ಬಗ್ಗೆ ನಮಗೆ ತಿಳಿದಿರುವ ಯಾವುದೇ ಜ್ಞಾನದ ಪ್ರಕಾರ, ಸೋಂಕಿನ ವಿಚಾರದಲ್ಲಿ ಗಮನಾರ್ಹದ ಬದಲಾವಣೆ ಸಾಧ್ಯವಿಲ್ಲ. ಕೆಲವು ದೇಶಗಳಲ್ಲಿ ಬೂಸ್ಟರ್ ಶಾಟ್​​ಗಳನ್ನು ತೆಗೆದುಕೊಂಡ ನಂತರವೂ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ಪ್ರತಿದಿನ 50 ಸಾವಿರ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ. ಲಸಿಕೆ ಸೋಂಕನ್ನು ತಡೆಯುವುದಿಲ್ಲ, ಆದರೆ ಸೋಂಕಿನ ತೀವ್ರತೆ ಮತ್ತು ಮರಣ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಪಿಟಿಐಗೆ ಅವರು ಮಾಹಿತಿ ನೀಡಿದ್ದಾರೆ.

ಒಟ್ಟು ಸೋಂಕಿಗೆ ಒಳಗಾಗುವವರಲ್ಲಿ ಮರಣ ಪ್ರಮಾಣ ಶೇಕಡಾ 1.5ರಷ್ಟಿದೆ. ಅಂದರೆ 10 ಲಕ್ಷ ಜನಸಂಖ್ಯೆಗೆ 15 ಸಾವಿರ ಮಂದಿ ಸಾವನ್ನಪ್ಪುತ್ತಾರೆ. ವ್ಯಾಕ್ಸಿನೇಷನ್ ಮೂಲಕ ಇದನ್ನು ಕಡಿಮೆ ಮಾಡಬಹುದು. ಮಕ್ಕಳ ಮೇಲೆ ಸೋಂಕಿನ ತೀವ್ರತೆ ತುಂಬಾ ಕಡಿಮೆಯಿದೆ ಎಂದು ಸಂಜಯ್ ರೈ ವಿಶ್ಲೇಷಣೆ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ನಟ ಸಲ್ಮಾನ್ ಖಾನ್‌ಗೆ ಕಚ್ಚಿದ ಹಾವು: ಹೇಗಿದೆ ಆರೋಗ್ಯ ಸ್ಥಿತಿ?

Last Updated : Dec 26, 2021, 3:16 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.