ನವದೆಹಲಿ : ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಮೊದಲ ದಿನವೇ ಕೃಷಿ ಕಾಯ್ದೆ ರದ್ಧು ಮಸೂದೆ ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಕೃಷಿ ಕಾಯ್ದೆ ರದ್ಧತಿ ಹಾಗೂ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಅನೇಕ ವಿಷಯಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಹರಿಹಾಯಲು ವಿಪಕ್ಷಗಳು ಸಿದ್ಧಗೊಂಡಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿದ್ದ ವಿವಾದಿತ ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವುದಾಗಿ ಈಗಾಗಲೇ ಮೋದಿ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ನಡೆದ ಕೇಂದ್ರ ಸಚಿವ ಸಂಪುಟದಲ್ಲೂ ಮಸೂದೆ ನಿಷೇಧಕ್ಕೆ ಒಪ್ಪಿಗೆ ಪಡೆಯಲಾಗಿದೆ.
ಇದೀಗ ಅಧಿವೇಶನದಲ್ಲಿ ಮಸೂದೆ ನಿಷೇಧ ಕಾಯ್ದೆ ಮಂಡನೆಯಾಗಲಿದೆ. ಕೇಂದ್ರ ಕೃಷಿ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್ ಈ ಬಿಲ್ ಸಂಸತ್ನಲ್ಲಿ ಮಂಡನೆ ಮಾಡಲಿದ್ದಾರೆ.
ಇದನ್ನೂ ಓದಿರಿ: land dispute : ನಾಲ್ವರ ಕೊಲೆ ಮಾಡಿ, ಬಾಲಕಿ ಮೇಲೆ ಅತ್ಯಾಚಾರವೆಸಗಿದ ರಾಕ್ಷಸರು
ಪ್ರಮುಖವಾಗಿ ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ, ಇಂಧನ ಬೆಲೆ ಏರಿಕೆ, ಹಣದುಬ್ಬರ, ಕ್ರಿಪ್ಟೋ ಕರೆನ್ಸಿ, ಲಖೀಂಪುರಿ ಖೇರಿ ಹಿಂಸಾತ್ಮಕ ಘಟನೆ ಸೇರಿದಂತೆ ಅನೇಕ ವಿಚಾರಗಳು ಪ್ರಸ್ತಾಪಗೊಳ್ಳಲಿವೆ.
ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಕೇಂದ್ರದ ವಿರುದ್ಧ ಹರಿಹಾಯುವ ಸಾಧ್ಯತೆ ಇದೆ. ಮೂರು ಕೃಷಿ ಕಾಯ್ದೆ ರದ್ಧುಗೊಳಿಸಿರುವ ಮಸೂದೆ ಮಂಡನೆ ಮಾಡಲು ಕೇವಲ ಎರಡು ದಿನ ಬಾಕಿ ಇರುವಾಗಲೇ ರೈತ ಸಂಘಟನೆಗಳು ಸೋಮವಾರ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ಕೂಡ ಮುಂದೂಡಿಕೆ ಮಾಡಲಾಗಿವೆ. ಡಿಸೆಂಬರ್ 4ರವರೆಗೆ ಕಾಯ್ದು ನೋಡುವ ನಿರ್ಧಾರ ಕೈಗೊಂಡಿವೆ.