ETV Bharat / bharat

16ನೇ ಹಣಕಾಸು ಆಯೋಗದ ನಿಯಮಗಳಿಗೆ ಕೇಂದ್ರ ಸಚಿವ ಸಂಪುಟ ಅಸ್ತು - ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರ

16th Finance Commission: 16ನೇ ಹಣಕಾಸು ಆಯೋಗದ ನಿಯಮಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಆದಾಯ ಹಂಚಿಕೆ ಕುರಿತು ಶಿಫಾರಸುಗಳನ್ನು ಮಾಡಿದೆ.

Govt approves terms of reference for 16th Finance Commission
16ನೇ ಹಣಕಾಸು ಆಯೋಗದ ನಿಯಮಗಳಿಗೆ ಕೇಂದ್ರ ಸಚಿವ ಸಂಪುಟ ಅಸ್ತು
author img

By PTI

Published : Nov 29, 2023, 4:02 PM IST

Updated : Nov 29, 2023, 4:23 PM IST

ನವದೆಹಲಿ: ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಆದಾಯ ಹಂಚಿಕೆ ಕುರಿತು ಶಿಫಾರಸುಗಳನ್ನು ಮಾಡುವ 16ನೇ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮಂಗಳವಾರ ಸಂಜೆ ನಡೆದ ಕೇಂದ್ರ ಸಚಿವ ಸಂಪುಟವು ಈ ಅನುಮೋದನೆ ನೀಡಿದೆ.

ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಇಂದು ವಿವರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 16ನೇ ಹಣಕಾಸು ಆಯೋಗದ ಶಿಫಾರಸುಗಳು 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಇವು ಐದು ವರ್ಷಗಳ ಅವಧಿಯನ್ನು ಒಳಗೊಂಡಿರುತ್ತವೆ. ಆಯೋಗವು ತನ್ನ ವರದಿಯನ್ನು 2025ರ ಅಕ್ಟೋಬರ್ 31ರೊಳಗೆ ಸಲ್ಲಿಸಲಿದೆ ಎಂದು ತಿಳಿಸಿದರು.

  • Cabinet approves Terms of Reference for the Sixteenth Finance Commission

    On the basis of the recommendations of the Working Group, the Terms of Reference have been decided, which would make following recommendations

    ➡️Distribution between the Union and the States of the net…

    — PIB India (@PIB_India) November 29, 2023 " class="align-text-top noRightClick twitterSection" data=" ">

2017ರ ನವೆಂಬರ್ 27ರಂದು ರಚನೆಗೊಂಡ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ಮತ್ತು ಅಂತಿಮ ವರದಿಗಳ ಮೂಲಕ 2020ರ ಏಪ್ರಿಲ್ 1ರಿಂದ ಆರು ವರ್ಷಗಳ ಅವಧಿ ಒಳಗೊಂಡ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳು 2025-26ರ ಹಣಕಾಸು ವರ್ಷದವರೆಗೆ ಮಾನ್ಯವಾಗಿರುತ್ತವೆ.

ಸಂವಿಧಾನದ 280(1) ವಿಧಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆಗಳ ನಿವ್ವಳ ಆದಾಯದ ವಿತರಣೆಯ ಮೇಲೆ ಶಿಫಾರಸು ಮಾಡಲು ಹಣಕಾಸು ಆಯೋಗ ಸ್ಥಾಪಿಸುವ ವಿಧಾನಗಳನ್ನು ತಿಳಿಸಿದ್ದು, ಆದಾಯದ ಆಯಾ ಷೇರುಗಳ ರಾಜ್ಯಗಳ ನಡುವಿನ ಹಂಚಿಕೆ, ಅನುದಾನ - ಸಹಾಯ ಮತ್ತು ರಾಜ್ಯಗಳ ಆದಾಯಗಳು ಮತ್ತು ಅವಧಿಯಲ್ಲಿ ಪಂಚಾಯತ್​ಗಳ ಸಂಪನ್ಮೂಲಗಳಿಗೆ ಪೂರಕವಾದ ಕ್ರಮಗಳನ್ನು ಉಲ್ಲೇಖಿಸಿದೆ.

ಇದನ್ನೂ ಓದಿ: 16ನೇ ಹಣಕಾಸು ಆಯೋಗದ ಮುಂದಿನ ಸವಾಲುಗಳು: ಒಂದು ವಿಶ್ಲೇಷಣೆ

ಕೇಂದ್ರ ಸಂಪುಟ ಅನುಮೋದಿಸಿದ ನಿಯಮಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆಗಳ ನಿವ್ವಳ ಆದಾಯದ ಹಂಚಿಕೆ ಅಥವಾ ಸಂವಿಧಾನದ ಅಧ್ಯಾಯ I, ಭಾಗ XII ಅಡಿ ಹಂಚಿಕೆಯಾಗಬಹುದು. ಅಂತಹ ಆದಾಯದ ಆಯಾಯ ಷೇರುಗಳ ರಾಜ್ಯಗಳ ನಡುವಿನ ಹಂಚಿಕೆಯೂ ಸೇರಿದೆ.

ಮತ್ತೊಂದು ನಿಯಮ ಭಾರತದ ಕ್ರೋಢೀಕರಿಸಲಾದ ನಿಧಿಯಿಂದ ರಾಜ್ಯಗಳ ಆದಾಯದ ಅನುದಾನ - ಸಹಾಯವನ್ನು ನಿಯಂತ್ರಿಸುವ ತತ್ವಗಳು ಮತ್ತು ಅವುಗಳ ಆದಾಯದ ಅನುದಾನದ ಮೂಲಕ ರಾಜ್ಯಗಳಿಗೆ ಪಾವತಿಸಬೇಕಾದ ಮೊತ್ತಗಳ ಬಗ್ಗೆ ಶಿಫಾರಸು ಮಾಡಲಾಗಿದೆ. ಈ ನಿಯಮಗಳ ಪ್ರಕಾರ, ಪಂಚಾಯತ್ ಮತ್ತು ಪುರಸಭೆಗಳ ಸಂಪನ್ಮೂಲಗಳಿಗೆ ಪೂರಕವಾಗಿ ರಾಜ್ಯದ ಕ್ರೋಢೀಕರಿಸಲಾದ ನಿಧಿಯನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಸಹ ಸೂಚಿಸುತ್ತದೆ.

ಹಣಕಾಸು ಆಯೋಗವನ್ನು ಪ್ರತಿ ಐದನೇ ವರ್ಷ ಅಥವಾ ಅದಕ್ಕೂ ಮೊದಲು ರಚಿಸಬೇಕು. ಆದಾಗ್ಯೂ, 15ನೇ ಹಣಕಾಸು ಆಯೋಗದ ಶಿಫಾರಸುಗಳು 2026ರ ಮಾರ್ಚ್ 31ರವರೆಗಿನ ಆರು ವರ್ಷಗಳ ಅವಧಿ ಒಳಗೊಂಡಿರುವುದರಿಂದ ಹೊಸ ಆಯೋಗವನ್ನು ಈಗ ರಚಿಸಲು ಪ್ರಸ್ತಾಪಿಸಲಾಗಿದೆ ಎಂದು ಸಚಿವ ಠಾಕೂರ್ ಹೇಳಿದರು.

16ನೇ ಹಣಕಾಸು ಆಯೋಗದ ಮುಂಗಡ ಕೋಶವನ್ನು ಆಯೋಗದ ಔಪಚಾರಿಕ ಸಂವಿಧಾನದ ಬಾಕಿ ಉಳಿದಿರುವ ಪ್ರಾಥಮಿಕ ಕೆಲಸವನ್ನು ಮೇಲ್ವಿಚಾರಣೆ ಮಾಡಲು 2022ರ ನವೆಂಬರ್ 21ರಂದು ಹಣಕಾಸು ಸಚಿವಾಲಯದಲ್ಲಿ ಸ್ಥಾಪಿಸಲಾಗಿದೆ. ಅದರ ನಂತರ ನಿಯಮಗಳನ್ನು ರೂಪಿಸಲು ಹಣಕಾಸು ಕಾರ್ಯದರ್ಶಿ ಮತ್ತು ಕಾರ್ಯದರ್ಶಿ (ವೆಚ್ಚ) ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ, ಹಣಕಾಸು ಸೇವೆಗಳ ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರರು, ನೀತಿ ಆಯೋಗದ ಸಲಹೆಗಾರರು ಮತ್ತು ಬಜೆಟ್ ಹೆಚ್ಚುವರಿ ಕಾರ್ಯದರ್ಶಿ ಅವರನ್ನೊಳಗೊಂಡಿರುವ ಕಾರ್ಯ ತಂಡವನ್ನು ರಚನೆ ಮಾಡಲಾಗಿದೆ.

ಇದನ್ನೂ ಓದಿ: 5 ವರ್ಷ ಪಿಎಂಜಿಕೆವೈ ವಿಸ್ತರಣೆ, ಮಹಿಳಾ ಗುಂಪುಗಳಿಗೆ ಡ್ರೋನ್​: ಕೇಂದ್ರ ಸಚಿವ ಸಂಪುಟ ಅನುಮೋದನೆ

Last Updated : Nov 29, 2023, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.