ETV Bharat / bharat

ಶಿರಡಿ ಸಾಯಿಬಾಬಾ ದೇಗುಲದ 155 ಕೆಜಿ ಚಿನ್ನ, 6 ಸಾವಿರ ಕೆಜಿ ಬೆಳ್ಳಿ ಕರಗಿಸಿ ಪದಕ- ನಾಣ್ಯ ತಯಾರಿಗೆ ಪ್ಲಾನ್​ - Shirdi saibaba trust

ಶಿರಡಿ ಸಾಯಿಬಾಬಾ ಖಜಾನೆಯಲ್ಲಿ 450 ಕೆಜಿ ಚಿನ್ನವಿದ್ದು, ಅದನ್ನು ಬಳಸಿ ಪದಕ ಮತ್ತು ನಾಣ್ಯ ರೂಪಿಸಲು ಸಾಯಿಬಾಬಾ ಟ್ರಸ್ಟ್​ ಮುಂದಾಗಿದೆ.

ಸಾಯಿಬಾಬಾರ ಚಿನ್ನ ಬೆಳ್ಳಿ ಪದಕ ತಯಾರಿ
ಸಾಯಿಬಾಬಾರ ಚಿನ್ನ ಬೆಳ್ಳಿ ಪದಕ ತಯಾರಿ
author img

By ETV Bharat Karnataka Team

Published : Dec 2, 2023, 8:00 PM IST

ಶಿರಡಿ (ಮಹಾರಾಷ್ಟ್ರ): ಇಲ್ಲಿನ ವಿಶ್ವವಿಖ್ಯಾತ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ. ಕಾಣಿಕೆ ಹುಂಡಿಯಲ್ಲಿ ಭಕ್ತರು ಈವರೆಗೂ ಹಾಕಿರುವ 450 ಕೆಜಿ ಚಿನ್ನದಲ್ಲಿ 155 ಕೆಜಿ ಬಂಗಾರ ಮತ್ತು 6 ಸಾವಿರ ಕೆಜಿ ಬೆಳ್ಳಿ ಕರಗಿಸಿ ಅದರಲ್ಲಿ ಸಾಯಿಬಾಬಾರ ಪದಕಗಳನ್ನು ರೂಪಿಸಲು ಮಂಡಳಿ ಮುಂದಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಶಿರಡಿಯ ಸಾಯಿಬಾಬಾ ದೇವಾಲಯವು ದೇಶ, ವಿದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಶಿರಡಿಯ ಸಾಯಿಬಾಬಾನ ದರ್ಶನಕ್ಕೆ ದೇಶ-ವಿದೇಶಗಳಿಂದ ಜನ ಬರುತ್ತಾರೆ. ಭಕ್ತರು ಮುಡಿಪಾಗಿ ತಂದ ಕಾಣಿಕೆಗಳನ್ನು ಹುಂಡಿಯಲ್ಲಿ ಅರ್ಪಿಸುತ್ತಾರೆ. ಸಾಯಿ ಸಂಸ್ಥಾನಕ್ಕೆ ಕೋಟಿಗಟ್ಟಲೆ ದೇಣಿಗೆ ಬರುತ್ತದೆ. ಇದರಲ್ಲಿ ಚಿನ್ನ ಮತ್ತು ಬೆಳ್ಳಿ ಕೂಡ ಸೇರಿದೆ. ಸಾಯಿಬಾಬಾ ಸಂಸ್ಥಾನದಿಂದ ಭಕ್ತರಿಗೆ ಸೌಕರ್ಯ ಒದಗಿಸುವುದರೊಂದಿಗೆ ಹೊಸ ಪ್ರಯೋಗವನ್ನೂ ನಡೆಸಲು ಮುಂದಾಗಲಾಗಿದೆ.

ಸಾಯಿಬಾಬಾ ಖಜಾನೆಯಲ್ಲಿ 450 ಕೆಜಿ ಚಿನ್ನ: ಸಾಯಿ ಸಂಸ್ಥಾನದ ಖಜಾನೆಯಲ್ಲಿ ನಗದು, ಚಿನ್ನ ಮತ್ತು ಬೆಳ್ಳಿಯನ್ನು ಹೇರಳವಾಗಿ ಠೇವಣಿ ಮಾಡಲಾಗುತ್ತದೆ. ಸಾಯಿಬಾಬಾ ಸಂಸ್ಥಾನ ಟ್ರಸ್ಟ್​ನಲ್ಲಿ ಸರಿಸುಮಾರು 450 ಕೆಜಿ ಚಿನ್ನ ಮತ್ತು 6000 ಕೆಜಿ ಬೆಳ್ಳಿ ಲಭ್ಯವಿದೆ. ತುಳಜಾಪುರದ ಸಂಸ್ಥಾನವು ಭಕ್ತರಿಗಾಗಿ ಸಾಯಿಬಾಬಾರ ಚಿತ್ರವಿರುವ ನಾಣ್ಯಗಳು ಮತ್ತು ಪದಕಗಳನ್ನು ಮಾಡಲು ಚಿನ್ನ ಮತ್ತು ಬೆಳ್ಳಿಯನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತುಳಜಾಪುರ ಸಂಸ್ಥಾನದ ತಂಡವೊಂದು ಶಿರಡಿಯಲ್ಲಿರುವ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳನ್ನು ಭೇಟಿ ಮಾಡಿದೆ.

ಈ ಬಗ್ಗೆ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಸಾಯಿಬಾಬಾ ಸಂಸ್ಥಾನವು 155 ಕೆಜಿ ಚಿನ್ನ ಮತ್ತು 6 ಸಾವಿರ ಕೆಜಿ ಬೆಳ್ಳಿಯನ್ನು ಕರಗಿಸಿ ನಾಣ್ಯ ಮತ್ತು ಪದಕಗಳನ್ನು ಮಾಡಲು ಮುಂದಾಗಿದೆ. 5 ಗ್ರಾಂ ತೂಕದ ಸಾಯಿಬಾಬಾ ಪದಕಗಳು ಮತ್ತು 10 ಗ್ರಾಂ ಚಿನ್ನದ ಪದಕಗಳನ್ನು ರೂಪಿಸಲಾಗುವುದು. ಜೊತೆಗೆ ಇಷ್ಟೇ ಪ್ರಮಾಣದ ನಾಣ್ಯಗಳನ್ನು ಸಹ ತಯಾರಿಸಲಾಗುವುದು. ಇಲ್ಲಿಯವರೆಗೆ ಸಾಯಿಬಾಬಾ ಸಂಸ್ಥಾನಕ್ಕೆ 450 ಕೆಜಿ ಚಿನ್ನ ಮತ್ತು 6 ಸಾವಿರ ಕೆಜಿ ಬೆಳ್ಳಿ ಕೊಡುಗೆಯಾಗಿ ಬಂದಿದೆ. ಅದರಲ್ಲಿ 155 ಕೆಜಿ ಚಿನ್ನ ಮತ್ತು 6 ಸಾವಿರ ಕೆಜಿ ಬೆಳ್ಳಿಯನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಅನುಮತಿ ನೀಡಲು ಸರ್ಕಾರಕ್ಕೆ ಮನವಿ: ಚಿನ್ನ, ಬೆಳ್ಳಿಯಿಂದ ಪದಕ ಮತ್ತು ನಾಣ್ಯಗಳನ್ನು ತಯಾರಿಸಲು ಅನುಮತಿ ನೀಡಬೇಕು ಎಂದು ಸಾಯಿ ಸಂಸ್ಥೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರದಿಂದ ಅನುಮತಿ ಸಿಕ್ಕಲ್ಲಿ ಈ ಯೋಜನೆಯನ್ನು ಶೀಘ್ರವೇ ಜಾರಿಗೆ ತಂದು ಪದಕ, ನಾಣ್ಯಗಳನ್ನು ತಯಾರಿಸಲಾಗುವುದು ಎಂದು ಸಾಯಿ ಸಂಸ್ಥಾನ ತಿಳಿಸಿದೆ.

ಇದನ್ನೂ ಓದಿ: ಈ ವರ್ಷ ಶಿರಡಿ ಸಾಯಿ ಬಾಬಾ ಸಂಸ್ಥಾನಕ್ಕೆ ಭರಪೂರ ಕಾಣಿಕೆ.. ಬರೋಬ್ಬರಿ 400 ಕೋಟಿ ರೂ ದೇಣಿಗೆ ಸಂಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.